ಕವನ: ಚಿತ್ರಕೂಟ..!

Upayuktha
0


ಅಯೋಧ್ಯೆಯಲಿ ಕದಡಿ ಕಲುಷಿತವಾಗಿದ್ದ

ಮನಮನವೂ ಚಿತ್ರಕೂಟದಲಿ ತಿಳಿಯಾಯ್ತು!

ಮರುಭೂಮಿಯಂತಿದ್ದ ಎದೆಯೊಳಗೆ

ಮಳೆಯಾಯ್ತು! ಪ್ರೀತಿ ಹಸಿರಾಯ್ತು! 

ಪ್ರೇಮ ಹೂವಾಯ್ತು! 

ಸ್ನೇಹ ಹಣ್ಣಾಯ್ತು! 


ಸ್ವಾರ್ಥಸಾಧನೆ ದುರಹಂಕಾರಗಳೆಲ್ಲಾ

ಸದ್ದಡಗಿ ಮಣ್ಣಾಯ್ತು! 

ಅಯೋಧ್ಯೆಯಲಿ 

ಹುಳಿ ಮುಟ್ಟಿದ ಹಾಲು

ಚಿತ್ರಕೂಟದಲಿ ಮೊಸರಾಗಿ 

ಮೆಲುವುದಕೆ ಹಸನಾಯ್ತು! 


ಚಿತ್ರಕೂಟವ ನೆನೆದು

ಕನಸಿನ ಮನೆಗೆ ಕಲ್ಲು ಕಬ್ಬಿಣಗಳ ಹೊತ್ತೆ! 

ಕನಸು ನನಸಾಗುತಿಹ ಈ ಪರ್ವಕಾಲದಲಿ

ಸಗ್ಗದಿಂದಿಳಿದು ಬನ್ನಿ 

ಓ ನನ್ನ ಹಿತಾಕಾಂಕ್ಷಿ ದೇವ ದೇವತೆಯರುಗಳೇ

ಕೀರ್ತಿಶೇಷ ಮಾತಾಪಿತರುಗಳೇ ಗುರು ಹಿರಿಯರುಗಳೇ

ಚಿತ್ರಕೂಟದಲಿ ಸುಖ- ಶಾಂತಿ-ನೆಮ್ಮದಿಯ 

ಬೀಜವನು ಬಿತ್ತೆ! 


ಇಳಿದು ಬನ್ನಿ! 

ಕೊಳೆಮೈಯ್ಯ ತೊಳೆಯೆ ಬನ್ನಿ! 

ಜಡಮನಕೆ ಚೈತನ್ಯವಾ ತುಂಬಿ ಹರಸಿ ಬನ್ನಿ! 

ಓ ಬನ್ನಿ! ಇಳಿದು ಬೇಗ ಬನ್ನಿ! 

ಬನ್ನಿ ಬನ್ನಿ ಬನ್ನಿ! 

ಚಿತ್ರಕೂಟದಾ ಪಾವನಾ ಕೀರ್ತಿಯ ಸ್ಥಾಪನೆಗೆ ಸಗ್ಗದ ತೀರ್ಥವನು ಹೊತ್ತು ತನ್ನಿ!

ಬನ್ನಿ ಬನ್ನಿ ಬನ್ನಿ! 


- :ಮೌನಮುಖಿ: -

(ಆತ್ರಾಡಿ ಪೃಥ್ವಿರಾಜ್ ಹೆಗ್ಡೆ, ನ್ಯಾಯವಾದಿ& ನೋಟರಿ)

ಉಡುಪಿ, ದೂ: 9845230926

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top