ಬೆಂಗಳೂರು: ಸೋಮವಾರದಿಂದ ಮೈಸೂರಿಗೆ ಬಸ್ ಸಂಚಾರ ಆರಂಭಿಸಲು KSRTC ಮುಂದಾಗಿದೆ. ಕೊರೊನಾ ಸೋಂಕು ಕಾರಣಕ್ಕೆ ಮೈಸೂರು ಹೊರತುಪಡಿಸಿ ಉಳಿದೆಲ್ಲ ಭಾಗಗಳಿಗೆ ಸಾರಿಗೆ ಸೇವೆ ಒದಗಿಸಲಾಗಿತ್ತು. ಕಳೆದ ಎರಡು ತಿಂಗಳಿಂದ ಮೈಸೂರಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ಮೈಸೂರಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 8.16 ರಷ್ಟು ಇದ್ದು, ಸೋಮವಾರದಿಂದ ಬಸ್ಗಳು ರಸ್ತೆಗಿಳಿಯಲಿವೆ.
ಮೈಸೂರಿನಲ್ಲಿ ಲಾಕ್ಡೌನ್ ಸಡಿಲ ಹಿನ್ನೆಲೆ ಜೂನ್-28 ರ ಬೆಳಗ್ಗೆ 6 ಗಂಟೆಯಿಂದ ಜನರ ಬೇಡಿಕೆ ಆಧರಿಸಿ ಬಸ್ ಸಂಚಾರ ಆರಂಭಿಸಲು ನಿಗಮ ಮುಂದಾಗಿದೆ. ಕೊರೊನಾ ಕಾರಣಕ್ಕೆ ಶೇ.50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ಗಳು ಕಾರ್ಯಾಚರಣೆ ಮಾಡಲಿವೆ. ಈ ಕುರಿತು ಕೆಎಸ್ಆರ್ಟಿಸಿ ಸಂಚಾರ ವ್ಯವಸ್ಥಾಪಕರಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.
Key Words: Mysuru, Unlock, KSRTC Bus, Public Transport, ಮೈಸೂರು, ಕೆಎಸ್ಸಾರ್ಟಿಸಿ ಬಸ್, ಬಸ್ ಸಂಚಾರ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ