ತುಮಕೂರು: ಕೋವಿಡ್ ಮಹಾಮಾರಿಯಿಂದ ದೇಶವೇ ಲಾಕ್‌ಡೌನ್ ಆದ ಕಾರಣ ರೈತರಿಂದ ಖರೀದಿಸುವ ಲೀಟರ್ ಹಾಲಿನ ಬೆಲೆಯನ್ನು 2 ರೂಪಾಯಿಯಷ್ಟು ಇಳಿಸಲಾಗಿದ್ದು, ಜೂನ್ 8ರಿಂದ ಜಾರಿಗೊಳಿಸಲಾಗಿದೆ.
ಎಸ್‍ಎನ್ ಗುಣಮಟ್ಟ ಶೇ.8.50 ಹಾಗೂ ಜಿಡ್ಡಿನ ಅಂಶ ಶೇ.4.1 ರಷ್ಟು ಗುಣಮಟ್ಟವನ್ನು ಹೊಂದಿದ ಹಾಲನ್ನು ಲೀಟರ್‌ಗೆ 26.99ಕ್ಕೆ ಖರೀದಿ ಮಾಡಲು ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೋವಿಡ್ ಲಾಕ್‍ಡೌನ್‌ನಿಂದ ಹಾಲು ಮತ್ತು ಹಾಲು ಉತ್ಪನ್ನಗಳ ಮಾರಾಟ ಬಹಳ ಕುಸಿದಿದೆ. ಪ್ರಸ್ತುತ 80ಕೋಟಿ ಮೌಲ್ಯದ 2,200 ಮೆಟ್ರಿಕ್ ಟನ್ ಹಾಲಿನ ಪುಡಿ ಜೊತೆಗೆ 1,500 ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಒಕ್ಕೂಟಕ್ಕೆ 19 ಕೋಟಿ ನಷ್ಟ ಉಂಟಾಗಿದೆ. ಆ ಕಾರಣದಿಂದ ಹಾಲಿನ ಬೆಲೆಯನ್ನು ಲೀಟರ್‍ಗೆ 2 ರೂಪಾಯಿ ಕಡಿಮೆ ಮಾಡಲಾಗಿದೆ ಎಂದು ತುಮುಲ್ ಅಧ್ಯಕ್ಷ ಸಿ.ವಿ ಮಹಾಲಿಂಗಯ್ಯ ತಿಳಿಸಿದ್ದಾರೆ.
-ಚೈತ್ರಾ ಕುಲಾಲ್ ಪಾಣೆಮಂಗಳೂರು