ಮಂಗಳೂರು: ವಿಭಿನ್ನ ಕಾರ್ಯಕ್ರಮಗಳ ಆಯೋಜನೆಗೆ ಭಾಜನವಾಗಿರುವ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇತ್ತೀಚೆಗೆ ವಿಶಿಷ್ಟ ' ಪದಾಂತ್ಯ ಗುಟುಕು ನನ್ನ ಚುಟುಕು' ಸಾಹಿತ್ಯ ಕಾರ್ಯಕ್ರಮವನ್ನು ಶನಿವಾರ (ಜೂನ್ 12)ದಂದು ಆಯೋಜಿಸಿತ್ತು.
ಒಬ್ಬ ಕವಿ ಬರೆಯುವ ಆ ಕ್ಷಣದ ಚುಟುಕಿನ ಕೊನೆಯ ಪದವನ್ನು ಬಳಸಿ ಚುಟುಕು ಸರಪಳಿ ರಚಿಸುವುದು ಚಟುವಟಿಕೆಯಾಗಿತ್ತು. ರಾತ್ರಿ 8 ಗಂಟೆಯಿಂದ 10 ಗಂಟೆಯ ವರೆಗೆ ಎರಡು ತಾಸುಗಳ ಈ ಸಾಹಿತ್ಯ ಚಟುವಟಿಕೆಯಲ್ಲಿ ಒಟ್ಟು 477 ಚುಟುಕುಗಳು ರಚಿಸಲ್ಪಟ್ಟು ಯಶಸ್ಸು ಕಂಡಿತು.
'ಪದಾಂತ್ಯ ಗುಟುಕು ನನ್ನ ಚುಟುಕು' ಚಟುವಟಿಕೆಯು ವಿಜಯಲಕ್ಷ್ಮೀ ಕಟೀಲು ಅವರ ಚುಟುಕಿನಿಂದ ಆರಂಭಗೊಂಡಿತು. ಬಳಿಕ ಅಶೋಕ್ ಎನ್ ಕಡೇಶಿವಾಲಯ, ಹಿತೇಶ್ ಕುಮಾರ್ ಎ., ಎನ್. ಸುಬ್ರಾಯ ಭಟ್, ಹರೀಶ್ ಸುಲಾಯ ಒಡ್ಡಂಬೆಟ್ಟು, ರೇಖಾ ಸುದೇಶ್ ರಾವ್, ಕಾ.ವೀ.ಕೃಷ್ಣದಾಸ್, ಡಾ.ಎ. ಕೇಶವರಾಜ್, ವ.ಉಮೇಶ್ ಕಾರಂತ್, ಆಕೃತಿ ಐ ಎಸ್ ಭಟ್, ಅರುಂಧತಿ ರಾವ್, ಗುಣಾಜೆ ರಾಮಚಂದ್ರ ಭಟ್, ವಾಣಿ ಲೋಕಯ್ಯ, ವಿಘ್ನೇಶ್ ಭಿಡೆ, ರಶ್ಮಿ ಸನಿಲ್,ಅಕ್ಷಯ ಆರ್ ಶೆಟ್ಟಿ, ಡಾ.ಅರುಣಾ ನಾಗರಾಜ್, ಮಂಜುಶ್ರೀ ಎನ್. ನಲ್ಕಲತೀಶ್ ಎಂ ಸಂಕೊಳಿಗೆ, ಡಾ.ಸುರೇಶ್ ನೆಗಳಗುಳಿ, ಶರತ್ ಕುಮಾರ್, ಚಂದನಾ ಕೊಣಾಜೆ, ಮನೋಜ್ (ಜ್ಞಾನಭಿಕ್ಷು), ರೇಖಾ ನಾರಾಯಣ್, ವಿಜೇಶ್ ದೇವಾಡಿಗ, ಕಾರ್ತಿಕ್ ಸಿ.ಹೆಚ್, ಸಂಧ್ಯಾ ಬೆಳ್ಳೆ, ನಳಿನಾಕ್ಷಿ ಉದಯರಾಜ್, ಚಿತ್ರಾಶ್ರೀ ಕೆ.ಎಸ್, ಲಕ್ಷ್ಮೀ ವಿ.ಭಟ್ ತಲಂಜೇರಿ, ಶಾಂತ ಅಳದಂಗಡಿ ಹೀಗೆ ಒಟ್ಟು 32 ಕವಿ ಕವಯತ್ರಿಯರು ಭಾಗವಹಿಸಿದ್ದರು.
ಮಂಗಳೂರು ಚುಸಾಪದ 'ಪದಾಂತ್ಯ ಗುಟುಕು ನನ್ನ ಚುಟುಕು' ವಿನೂತನ ಪ್ರಯೋಗ ಅಭೂತಪೂರ್ವ ಯಶಸ್ಸು ಕಂಡಿದ್ದು, ಈ ಕಾರ್ಯಕ್ರಮದಲ್ಲಿ ಹೆಣೆಯಲ್ಪಟ್ಟ ದಾಖಲೆಯ 477 ಚುಟುಕುಗಳನ್ನು ಸೇರಿಸಿ 'ಚುಟುಕು ಬ್ರಹ್ಮಾಂಡ' ಎಂಬ ಕೃತಿಯನ್ನು ಹೊರ ತರಲು ಪರಿಷತ್ತು ನಿರ್ಧರಿಸಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ