ಬದುಕುವುದಾದರೆ ಬದುಕಿ ಬಿಡು ರಕ್ತವ ಕೊಡುವೆ
ಅಳಿಸುವುದಾದರೆ ಅಳಿಸಿ ಬಿಡು ಜೀವವ ಕೊಡುವೆ
ನಿನಗಾಗಿಯೇ ಇರುವೆ ನಾನು ಎನುವ ಹುಚ್ಚೇನಲ್ಲ ಬಿಡು
ಸಂತೋಷದ ದಿನದ ಕನವರಿಕೆ ಇದ್ದರೆ ಕಾಲವ ಕೊಡುವೆ
ಯಾರಿಗಾಗಿ ಯಾರೂ ಇರಲಾರ ಎಂಬುದೇಕೆ ಒಮ್ಮೊಮ್ಮೆ
ನಿರ್ವಿಣ್ಣ ಭಾವ ತುಂಬಿದ್ದರೆ ಒಂದಷ್ಟು ರಾಗವ ಕೊಡುವೆ
ಅವರಿವರಿಗಾಗಿ ಬದಲಾಗಲೇ ಬೇಕೇಕೆ ಮನದಿಂಗಿತಗಳು
ಮುಚ್ಚಿದ ಕಣ್ಣಿನ ರೆಪ್ಪೆಯ ತೆರೆಯಲು ಕರವ ಕೊಡುವೆ
ಉಸಿರಿನ ಉಳಿವು ಬಯಸದವರೆಲ್ಲಿಹರು ಎನ್ನದಿರು ಸುರೇಶ
ಕೆಂಪು ರುಧಿರದ ಸಿರೆಯ ಕಡಿಯಲು ಸಮಯವ ಕೊಡುವೆ
-ಡಾ ಸುರೇಶ ನೆಗಳಗುಳಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ