ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಮತ್ತಷ್ಟು ಶಾಕ್ ನೀಡಿದೆ. ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ.
ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ದರ ಹೆಚ್ಚಳಕ್ಕೆ ಅನುಮತಿ ಸೂಚಿಸಲಾಗಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ಗೆ 30 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಸೂಚನೆ ನೀಡಿದೆ.
ಆರಂಭದ 30 ಯೂನಿಟ್‌ಗಳನ್ನು ಲೈಫ್ ಲೈನ್ ಯೂನಿಟ್ ಎಂದು ಪರಿಗಣಿಸಲಾಗಿದ್ದು, ಈಗ 50 ಯೂನಿಟ್ ಗೆ ಹೆಚ್ಚಿಸಲಾಗಿದೆ.
ಆರಂಭದ 30 ಯೂನಿಟ್‌ಗಳ ರಿಯಾಯಿತಿ ದರ 50 ಯೂನಿಟ್ ಗೆ ಅನ್ವಯವಾಗಲಿದೆ. ಇದರಿಂದ ಬಳಕೆದಾರರಿಗೆ ಅನುಕೂಲವಾಗುತ್ತದೆ.
ಮೆಸ್ಕಾಂ ವ್ಯಾಪ್ತಿಯ ನಗರ, ಪಟ್ಟಣಗಳಲ್ಲಿ- 1 -50 ಯೂನಿಟ್ ಗೆ 4.05 ರೂ., 50 ರಿಂ 100 ಯೂನಿಟ್ ಗೆ 5.55 ರೂ., 101 ರಿಂದ 200 ಯೂನಿಟ್ ಗೆ 7.10 ರೂ., 200 ಯೂನಿಟ್ ಗಿಂತ ಮೇಲ್ಪಟ್ಟು 8.15 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಮೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ 1 -50 ಯೂನಿಟ್ ಗೆ 3.95 ರೂ., 50 ರಿಂ 100 ಯೂನಿಟ್ ಗೆ 5.25 ರೂ., 101 ರಿಂದ 200 ಯೂನಿಟ್ ಗೆ 6.80 ರೂ., 200 ಯೂನಿಟ್ ಗಿಂತ ಮೇಲ್ಪಟ್ಟು 7.65 ರೂಪಾಯಿ ಹೆಚ್ಚಳ ಮಾಡಲಾಗಿದೆ.