ಮುಸ್ಸಂಜೆಯ ಹೊಂಗಿರಣ- ಮುಖಚಿತ್ರದ ಅಂತರಂಗ

Upayuktha
0

ಮುಸ್ಸಂಜೆಯ ಹೊಂಗಿರಣ ಪುಸ್ತಕದ ಮುಖಪುಟ ವಿನ್ಯಾಸವನ್ನು ಮಾಡಿದ ಕಲಾವಿದ ದಿನೇಶ ಹೊಳ್ಳರಿಂದ ‘ಮುಖಚಿತ್ರದ ಅಂತರಂಗ’.... ಅದರಲ್ಲಿರುವ ರೇಖೆಗಳ ಅಂತರಾರ್ಥ....  



ಭೂಮಿಯ ದುಂಡಗಿನ ರೂಪವನ್ನು ಮನುಜ ಸಾಮ್ರಾಜ್ಯವು ತನ್ನ ಐಷಾರಾಮ ಬದುಕಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಗೀರುವಲ್ಲಿ ಗೀರಿ ಗೀರಿ, ಹೀರುವಲ್ಲಿ ಹೀರಿ ಹೀರಿ, ಭದ್ರವಾದ ಭೂಮಿಯನ್ನು ಛಿದ್ರಗೊಳಿಸಿದೆ. ಎಲ್ಲಾ ಪ್ರಾಕೃತಿಕ ದುರಂತಗಳನ್ನು, ಸಾಂಕ್ರಾಮಿಕ ರೋಗಗಳನ್ನು ತಾನೇ ಆಮಂತ್ರಣ ಕೊಟ್ಟು ಆಹ್ವಾನಿಸಿಕೊಂಡಿದೆ. ಇಂದು ಇದನ್ನು ಎದುರಿಸಲು ಆಗದೇ ಮುಖಕ್ಕೆ ಮಾಸ್ಕ್ ಹಾಕಿ ಹೇಡಿಯಂತೆ ಅವಿತುಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹಾಗಾದರೆ ಕಣ್ಣಿಗೆ ಕಾಣದ ವೈರಾಣು ಎದುರು ಟೆಕ್ನಾಲಜಿ ಎಲ್ಲಿ ಮಾಯವಾಯಿತು?


ಹಕ್ಕಿಯೊಂದು ಹಾರುವ ಚಿತ್ರ ಏನೆಂದರೆ ನಮ್ಮ ಬದುಕಿಗೆ ಚೇತನಾ ಶಕ್ತಿ ನೀಡಿರುವ ವನ್ಯ ಜೀವಿಗಳನ್ನು ತಿಂದು ತೇಗಿ ಇಂದು ಇದರ ಪ್ರತಿಕಾರವನ್ನು ಅನುಭವಿಸುವಂತಾಗಿದೆ.


ಭೂಮಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ನೆಲ, ಜಲ, ಸಾಗರ, ನದಿಗಳನ್ನು ಮಾಲಿನ್ಯ ಮಾಡಿ ಈಗ ಕೊರೊನಾ ಎಂಬ ರೋಗಕ್ಕೆ ತಾನೇ ಪ್ಲಾಸ್ಟಿಕ್ ಸುತ್ತಿಕೊಂಡು ಭಯ ಪಡುವ ಸ್ಥಿತಿ ಆಗಿದೆ. ಇನ್ನಾದರೂ ಪ್ರಕೃತಿಗೆ ಶರಣಾಗದಿದ್ದರೆ (ಇಬ್ಬರು ಕೈ ಎತ್ತಿರುವುದು) ಪ್ರಕೃತಿಯ ನೋವಿಗೆ ಸ್ಪಂದಿಸದೆ ಇದ್ದರೆ ಇನ್ನೊಂದಷ್ಟು ರೋಗಾಣುಗಳು ನಮ್ಮ ಬದುಕನ್ನು ಛಿದ್ರ ಮಾಡಬಲ್ಲವು.


ಚಿತ್ರದ ಇನ್ನೊಂದು ಪಕ್ಕದಲ್ಲಿ ಇರುವ ಕೆಂಪು ವೃತ್ತ ಇಳೆಯ ನೆಮ್ಮದಿಯನ್ನು ವ್ಯಕ್ತಪಡಿಸುತ್ತದೆ. ಅದೇ ರೀತಿ ಭಾರತೀಯ ಧರ್ಮದಲ್ಲಿ ತಿಲಕಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಅಂದರೆ ನಿಸರ್ಗಕ್ಕೆ ಶರಣಾಗತಿ ಆಗದೇ ಇದ್ದರೆ ನೆಮ್ಮದಿಯನ್ನು ಕಳೆದುಕೊಂಡು ಇನ್ನೊಂದು ಪ್ರಾಕೃತಿಕ ದುರಂತ ಆಗಬಹುದು ಎಂಬ ಅರ್ಥ.

-ದಿನೇಶ್ ಹೊಳ್ಳ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top