ಮಂಗಳೂರು: ದೇಶದಲ್ಲಿ ಮಹಾ ಸಾಂಕ್ರಾಮಿಕ ಕೊರೋನಾ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟ ಎದುರಿಸುವಂತಾಗಿದ್ದು ವಿವಿಧ ಸಂಘ ಸಂಸ್ಥೆಗಳು ಸಂತ್ರಸ್ತ ಜನರ ಸೇವೆಗೆ ಮುಂದಾಗಿವೆ. ಈ ದಿಸೆಯಲ್ಲಿ ಮಂಗಳೂರಿನಲ್ಲಿರುವ ಮಂಗಳಮುಖಿಯರಿಗೆ ಇಂದು (ಜೂ.13) ಮಂಗಳೂರಿನ ಆಶ್ರಯ ಹಸ್ತ ಟ್ರಸ್ಟ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮ ನಗರದ ರಥಬೀದಿ ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನೆರವೇರಿತು. ಈ ವೇಳೆ ಜಿಲ್ಲೆಯ ಸರಿಸುಮಾರು 115 ಮಂಗಳಮುಖಿಯರಿಗೆ ಕಿಟ್ ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್, ದೇಶದಲ್ಲಿ ಜನರು ಮಂಗಳಮುಖಿಯರನ್ನು ಒಂದು ಬೇರೆ ವರ್ಗ ಎಂಬಂತೆ ಬಿಂಬಿಸುತ್ತಿದ್ದು ಅವರನ್ನು ಕಡೆಗಣನೆ ಮಾಡುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೊರೋನಾದಿಂದ ಅವರು ಕೂಡಾ ಆರ್ಥಿಕವಾಗಿ ತೀರ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ವೀಡಿಯೋ ನೋಡಿ:
ಈ ಹಿನ್ನಲೆಯಲ್ಲಿ ಮಂಗಳೂರಿನ ಆಶ್ರಯಹಸ್ತ ಟ್ರಸ್ಟ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮಂಗಳಮುಖಿಯರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದೆ ಎಂದು ಹನುಮಂತ ಕಾಮತ್ ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಸಂತೋಷ್ ಪ್ರಭು, ಅಭಿಜಿತ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
Tags: Transgenders, Ration Kits, Mangalore, Sevanjali Trust, ಮಂಗಳಮುಖಿಯರು, ಆಹಾರದ ಕಿಟ್ ವಿತರಣೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ