ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) 2023-26ನೇ ಶೈಕ್ಷಣಿಕ ಸಾಲಿನ ಪದವಿ ಹಾಗೂ 2024-26ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪದವಿ ವಿಭಾಗದಲ್ಲಿ ಒಟ್ಟು ಎಂಟು ರ‍್ಯಾಂಕ್‌ಗಳು ಪ್ರಕಟಗೊಂಡಿದ್ದು, ಬಿ.ಎ ವಿಭಾಗದಲ್ಲಿ ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಗಳ ಪುತ್ರಿ ಸುಮನಾ (95.41%) ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಬಿ.ಎಸ್ಸಿ ವಿಭಾಗದಲ್ಲಿ ಜಿ. ಪುರುಷೋತ್ತಮ ಪ್ರಭು ಹಾಗೂ ಜಿ. ವಿದ್ಯಾ ಪ್ರಭು ದಂಪತಿಯ ಪುತ್ರಿ ಅನುಶ್ರೀ ಜಿ. ಪ್ರಭು (96.38%) ಪ್ರಥಮ ರ‍್ಯಾಂಕ್ ಪಡೆದರೆ, ಬಿ.ಬಿ.ಎ ವಿಭಾಗದಲ್ಲಿ ಪ್ರದೀಪ್ ಮತ್ತು ಗೀತಾ ಬಿ. ದಂಪತಿಯ ಪುತ್ರಿ ಅನುಶ್ರೀ (94.21%) ಪ್ರಥಮ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಬಿ.ಕಾಮ್ ವಿಭಾಗದಲ್ಲಿ ರಾಮಚಂದ್ರ ವಿ. ಹಾಗೂ ವಾಣಿ ರಾಮಚಂದ್ರ ದಂಪತಿಯ ಪುತ್ರಿ ಶರಣ್ಯ ವಿ.ಆರ್. (98.79%) ಪ್ರಥಮ ರ‍್ಯಾಂಕ್ ಹಾಗೂ ಶ್ರೀಪತಿ ವಿ. ಮತ್ತು ವೀಣಾ ಶ್ರೀಪತಿ ದಂಪತಿಯ ಪುತ್ರಿ ಸಿಂಧೂರ ವಿ.ಎಸ್. (98.29%) ದ್ವಿತೀಯ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಬಿ.ಸಿ.ಎ ವಿಭಾಗದಲ್ಲಿ ಜಯರಾಮ ಹೆಗ್ಡೆ ಮತ್ತು ಗಾಯತ್ರಿ ದೇವಿ ಪಿ. ದಂಪತಿಯ ಪುತ್ರಿ ಮಹಿ ಜೆ. ಹೆಗ್ಡೆ (96.13%) ಪ್ರಥಮ, ಗೋವಿಂದ ಪ್ರಸಾದ್ ಹಾಗೂ ವಿದ್ಯಾ ದಂಪತಿಯ ಪುತ್ರ ಶ್ರೀನಿಧಿ ಎ. (95.3%) ದ್ವಿತೀಯ ಮತ್ತು ಶೇಖರ ಪೂಜಾರಿ ಹಾಗೂ ಸುಮಿತ್ರ ಬಿ. ಕೆ. ದಂಪತಿಯ ಪುತ್ರಿ ಸಮೃದ್ಧಿ (94.96%) ತೃತೀಯ ರ‍್ಯಾಂಕ್ ಗಳಿಸಿದ್ದಾರೆ.
ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಒಟ್ಟು ಇಬ್ಬರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದು, ಎಂ.ಕಾಮ್ ವಿಭಾಗದಲ್ಲಿ ರಘು ಮತ್ತು ಸುನಿತಾ ದಂಪತಿಯ ಪುತ್ರ ಪವನ್ ರಾಜ್ (9.05 CGPA) ಪ್ರಥಮ ರ‍್ಯಾಂಕ್ ಹಾಗೂ ಎಂ.ಎ.ಜೆ.ಎಂ.ಸಿ ವಿಭಾಗದಲ್ಲಿ ವೆಂಕಟರಮಣ ಭಟ್ ಬಿ. ಮತ್ತು ಗುಣಶ್ರೀ ದಂಪತಿಯ ಪುತ್ರಿ ಪಂಚಮಿ ಕುಮಾರಿ ಬಿ. (8.09 CGPA) ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಕೃಷ್ಣ ಗಣರಾಜ ಭಟ್ ಎಸ್. ಹಾಗೂ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರಕಾಶ್ ಕುಮಾರ್ ಪಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

