ಮಂಗಳೂರು ನ.5: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಹಯೋಗದೊಂದಿಗೆ, ಶಕ್ತಿ ವಸತಿ ಶಾಲೆಯಲ್ಲಿ 2026ರ ಅಕ್ಟೋಬರ್ 28ರಿಂದ ನವೆಂಬರ್ 4 ರವರೆಗೆ ಜಾಗೃತಿ ಅರಿವು ಸಪ್ತಾಹವನ್ನು (Vigilance Awareness Week) ಆಚರಿಸಲಾಯಿತು.
ಈ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ವರ್ಷದ ಸ್ಪರ್ಧೆಗಳ ಮುಖ್ಯ ವಿಷಯ “ಸತ್ಯ ನಿಷ್ಠಾ ಸಮೃದ್ಧಿ (Probity for Prosperity) ಎಂಬುದಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು HPCLನ ಮುಖ್ಯ ಪ್ರಾದೇಶಿಕ ಅಧಿಕಾರಿ ಶ್ರೀ ಅರುಣ್ ಬನ್ಸಾಲ್ ಅವರು ವಹಿಸಿದ್ದು ಅವರು ತಮ್ಮ ತಂಡದೊAದಿಗೆ ಭಾಗವಹಿಸಿದ್ದರು. ಅವರೊಂದಿಗೆ HPCLನ ವ್ಯವಸ್ಥಾಪಕರಾದ ಕುಮಾರಿ ಇಶಿಕಾ ಹಾಗೂ ಸಹಾಯಕ ವ್ಯವಸ್ಥಾಪಕರಾದ ಶ್ರೀ ಅಭಿಷೇಕ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಗಾಗಿ ಈ ಕೆಳಗಿನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು:
1ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ : ಚಿತ್ರಕಲೆ ಮತ್ತು ಬಣ್ಣ ತುಂಬುವ ಸ್ಪರ್ಧೆ.
6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ : ಭಾಷಣ ಸ್ಪರ್ಧೆ.
9 ಮತ್ತು 10ನೆ ತರಗತಿಯ ಮಕ್ಕಳಿಗೆ : ಪ್ರಬಂಧ ರಚನೆ ಸ್ಪರ್ಧೆ ಆಯೋಜಿಸಲಾಗಿದ್ದು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅರುಣ್ ಬನ್ಸಾಲ್ ಅವರು "ಮಕ್ಕಳಲ್ಲಿ ಪ್ರಾಮಾಣಿಕತೆ, ನಿಷ್ಠೆ, ನ್ಯಾಯಸಮ್ಮತತೆ, ನ್ಯಾಯಪರತೆ ಮತ್ತು ಸಮಗ್ರತೆಯಂತಹ ಉನ್ನತ ಮೌಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮವು ಒಳಗೊಂಡಿದ್ದು, ಇಂತಹ ಮೌಲ್ಯಗಳು ಭ್ರಷ್ಟಾಚಾರ ಮುಕ್ತ ಹಾಗೂ ಬಲಿಷ್ಠ ಭಾರತವನ್ನು ನಿರ್ಮಿಸಲು ಸಹಕಾರಿಯಾಗುತ್ತವೆ. ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುವ ಬದ್ಧತೆಯು ನಮ್ಮ ತರಗತಿ ಕೊಠಡಿಗಳಿಂದಲೇ ಆರಂಭವಾಗಬೇಕು. ನಮ್ಮ ಕುಟುಂಬಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ಜೀವನದ ಪ್ರತಿಯೊಂದು ಕಾರ್ಯದಲ್ಲಿಯೂ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅರುಣ್ ಬನ್ಸಲ್ ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲರಾದ ಸುರೇಖಾ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ದ್ವಿತಿ ರವರು ಸತ್ಯ ನಿಷ್ಠಾ ಸಮೃದ್ಧಿ ಎಂಬ ವಿಷಯದ ಕುರಿತು ಭಾಷಣ ಮಾಡಿದರು. ಶಿಕ್ಷಕಿ ಚೇತನ ನಿರೂಪಿಸಿ ವಂದಿಸಿದರು.


