ನ.15: ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಅನಿಕಾ ಭರತನಾಟ್ಯ ರಂಗ ಪ್ರವೇಶ

Shreya Hegde
0



ಮಂಗಳೂರು: ಗಾನ ನೃತ್ಯ ಅಕಾಡೆಮಿ, ಮಂಗಳೂರು ಇದರ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಹಾಗೂ ಡಾ. ಭಾವನಾ ಕರ್ಕೇರ ಇವರ ಪುತ್ರಿ ಕು.ಅನಿಕಾ ಕೆ ಇವಳ ಭರತನಾಟ್ಯ ರಂಗ ಪ್ರವೇಶವು ನ.15 ರಂದು ಭಾನುವಾರ ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಜೆ 5.15 ಗಂಟೆಗೆ ಜರುಗಲಿದೆ.


ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರಲ್ಲಿ ಸುಮಾರು 14 ವರ್ಷಗಳಿಂದ ಅಭ್ಯಸಿಸುತ್ತಿರುರ ಇವರು ಭರತನಾಟ್ಯದ ವಿದ್ವತ್ ಪೂರ್ವ ಹಂತದ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ನೂರಕ್ಕೂ ಮಿಕ್ಕಿ ಪ್ರದರ್ಶನಗಳನ್ನು ನೀಡಿರುವ ಇವರು ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಭರತನಾಟ್ಯ ನೃತ್ಯಗಾತಿ ಡಾ.ಲಕ್ಷ್ಮೀ ರೇಖಾ ಹಾಗೂ ಮಂಗಳೂರಿನ ಖ್ಯಾತ ದಂತ ವೈದ್ಯೆ ಡಾ.ವಿದ್ಯಾ ಮನೋಹರ್ ಉಪಸ್ಥಿತರಿರುತ್ತಾರೆ. 


ಹಿಮ್ಮೇಳದಲ್ಲಿ ಹಾಡುಗಾರಿಕೆಯಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ನಟುವಾಂಗದಲ್ಲಿ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮ್ಮಣ್ಣಯ, ವೀಣೆಯಲ್ಲಿ ವಿದ್ವಾನ್ ಅನಂತ ನಾರಾಯಣನ್ ಚೆನೈ ಇವರು ಸಹಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಅವಕಾಶವಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಭಟ್ ತಿಳಿಸಿರುತ್ತಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top