ತ್ರಿಶಾ ಕ್ಲಾಸಸ್‌: ಸಿಎ ಫೌಂಡೇಷನ್ ಸಾಧಕರಿಗೆ ಸನ್ಮಾನ, ಸಿಎ ಇಂಟರ್ ಓರಿಯಂಟೇಶನ್ ಕಾರ್ಯಕ್ರಮ

Shreya Hegde
0



ಕಟಪಾಡಿ : ತ್ರಿಶಾ ಕ್ಲಾಸಸ್‌ ವತಿಯಿಂದ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 41 ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಸಿಎ ಇಂಟರ್ ಓರಿಯಂಟೇಶನ್ ಕಾರ್ಯಕ್ರಮ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ನವೆಂಬರ್ 11 ರಂದು ನಡೆಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಂಸ್ಥೆ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್‌ ಅವರು, ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಿಮ್ಮ ಪ್ರೋತ್ಸಾಹಕ್ಕೆ ತ್ರಿಶಾ ಎಂದಿಗೂ ನಿಮ್ಮ ಜೊತೆ ಇದೆ ಎಂದು ಹೇಳಿದರು ಹಾಗೂ ಸಿಎ ಇಂಟರ್ಮೀಡಿಯೇಟ್ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಟ್ರಸ್ಟಿಗಳಾದ ನಮಿತಾ ಜಿ.ಭಟ್ ಹಾಗೂ ರಾಮ್ ಪ್ರಭು, ತ್ರಿಶಾ ಕಾಲೇಜ್ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೆಂಟ್ ನ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಬಿ., ತ್ರಿಶಾ ಕಾಲೇಜ್ ಆಫ್‌ ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್ಮೆಂಟ್ ನ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೊ. ಕುಲದೀಪ್ ವೈ.ಯು, ಅಕಾಡೆಮಿಕ್ ಮೇನೆಜರ್ ಡಾ.ಶಾಂತಪ್ರಿಯ, ತ್ರಿಶಾ ಕ್ಲಾಸಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸನ್ಮಾನಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ಗೌರಿ ಕಾಮತ್ ವಾಚಿಸಿದರು. ಕಾರ್ಯಕ್ರಮವನ್ನು ನಿಧಿ ಅಮೀನ್ ನಿರೂಪಿಸಿ, ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top