ಸಿರಿವಂತೆ: ಶ್ರೀ ತ್ರಿಪುರಾಂತಕೇಶ್ವರ ಯಕ್ಷಗಾನ ಕಲಾ ಸಂಘ, ಸಿರಿವಂತೆ ಇದರ ಆಶ್ರಯದಲ್ಲಿ ಈ ವರ್ಷದ ಚಾತುರ್ಮಾಸದ ಕೊನೆಯ ಏಕಾದಶಿ ಪ್ರಯುಕ್ತ ನಾಳೆ (ನವೆಂಬರ್ 20, 2026, ಶುಕ್ರವಾರ) ಸಂಜೆ 6:30 ಗಂಟೆಗೆ ಸಿರಿವಂತೆಯ ಶ್ರೀ ತ್ರಿಪುರಾಂತಕೇಶ್ವರ ಸಭಾಭವನದಲ್ಲಿ ‘ರುಕ್ಮಾಂಗದ ಚರಿತ್ರೆ’ ಆಖ್ಯಾನದ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ.
ಸಂಸ್ಥೆಯ ಕಲಾವಿದರಿಂದ ಮೂಡಿಬರಲಿರುವ ಈ ತಾಳಮದ್ದಲೆ ಕಾರ್ಯಕ್ರಮವನ್ನು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಸ್ವಾದಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಉಡುಪಿ ಕಲಾ ರಂಗ ಪ್ರಶಸ್ತಿಗೆ ಭಾಜನರಾದ ನಮ್ಮ ಸೀಮೆಯ ಯಕ್ಷಗಾನ ಕಲಾವಿದರಾದ ಶ್ರೀ ಶಿವಾನಂದ ಗೀಜಗಾರು ಹಾಗೂ ಶ್ರೀರಾಮಚಂದ್ರ ಗುಡ್ಡೆ ದಿಂಬ ಇವರನ್ನು ಆತ್ಮೀಯವಾಗಿ ಅಭಿನಂದಿಸಲಾಗುವುದು. ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ.

