ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ದೀಪಾವಳಿ ಸಂಭ್ರಮದ ಅಂಗವಾಗಿ ದೀಪಾರಾಧನೆ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರದ ಶ್ರೀ ಸಾಯಿ ಈಶ್ವರ ಗುರೂಜಿ ದೀಪಾರಾಧನೆಗೆ ಚಾಲನೆ ನೀಡಿ ಮಾತನಾಡಿ, ಶಿರಡಿ ದ್ವಾರಕಾಮಯಲ್ಲಿ ಶ್ರೀ ಸಾಯಿಬಾಬಾ ದೀಪಾವಳಿಯಂದು ನೀರಿನಿಂದ ದೀಪವನ್ನು ಬೆಳಗಿಸಿ ಎಲ್ಲ ದುಷ್ಟ ಜನರಿಗೆ ತಮ್ಮ ತಪ್ಪಿನ ಅರಿವು ಮೂಡಿಸಿದರು ಈ ದೀಪಾವಳಿ ಕೇವಲ ಹಬ್ಬವಲ್ಲ ಬದಲಾಗಿ ನಮ್ಮ ಮನದ ಕತ್ತಲೆಯನ್ನು ದೂರ ಮಾಡುವ ಪರ್ವ ಎಂದು ನುಡಿದರು.
ಈ ಸಂದರ್ಭದಲ್ಲಿ ಎಲ್ಲಾ ಭಕ್ತರು ದೀಪದ ಹಣತೆಯನ್ನು ಬೆಳಗಿಸಿ ಆರತಿಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಭಕ್ತರು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


