ಗಿನ್ನಿಸ್ ದಾಖಲೆಯ ಕೊಂಕಣಿ ಸಂಗೀತ ಸಮ್ಮೇಳನದಲ್ಲಿ ಪುತ್ತೂರು ಫಿಲೋಮಿನಾ ಕಾಲೇಜು ಭಾಗಿ

Shreya Hegde
0



ಪುತ್ತೂರು: ಮಂಗಳೂರಿನ ಪುರಭವನದಲ್ಲಿ ಮಾಂಡ್ ಸೊಭಾಣ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಪ್ರಥಮ 'ವಿಶ್ವ ಕೊಂಕಣಿ ಸಂಗೀತ ಸಮ್ಮೇಳನ' ಹಾಗೂ ಬೃಹತ್ ಗಿನ್ನಿಸ್ ವಿಶ್ವ ದಾಖಲೆಯ ಗಾಯನ ಅಭಿಯಾನದಲ್ಲಿ ಪುತ್ತೂರಿನ ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಸಕ್ರಿಯವಾಗಿ ಭಾಗವಹಿಸಿದೆ. ನವೆಂಬರ್ 8 ರಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ತಂಡವು ಕೊಂಕಣಿ ಗೀತೆಗಳನ್ನು ಅತ್ಯಂತ ಉತ್ಸಾಹದಿಂದ ಪ್ರಸ್ತುತಪಡಿಸಿತು.


ಈ ಐತಿಹಾಸಿಕ ಸಂಗೀತ ಮ್ಯಾರಥಾನ್ ನವೆಂಬರ್ 3 ರಿಂದ ನವೆಂಬರ್ 15 ರವರೆಗೆ ನಿರಂತರವಾಗಿ ನಡೆಯುತ್ತಿದ್ದು, 12 ದಿನಗಳು, 12 ಗಂಟೆಗಳು ಹಾಗೂ 12 ನಿಮಿಷಗಳ ಕಾಲ ಸುಮಾರು 300 ಗಂಟೆಗಳ ನಿರಂತರ ಗಾಯನದ ಉದ್ದೇಶವನ್ನು ಹೊಂದಿದೆ. ಈ ಬೃಹತ್ ಸಮ್ಮೇಳನದಲ್ಲಿ ಒಟ್ಟು 300 ಗಾಯನ ತಂಡಗಳು, 6,700ಕ್ಕೂ ಹೆಚ್ಚು ಗಾಯಕರು ಭಾಗವಹಿಸಿ 4,500ಕ್ಕೂ ಅಧಿಕ ಕೊಂಕಣಿ ಗೀತೆಗಳನ್ನು ನಿರಂತರವಾಗಿ ಹಾಡುತ್ತಿದ್ದಾರೆ.


ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಒಳಗೊಂಡ ಒಟ್ಟು 24 ಸದಸ್ಯರ ತಂಡವು ಈ ವಿಶ್ವ ದಾಖಲೆಯ ವೇದಿಕೆಯಲ್ಲಿ ಕೊಂಕಣಿ ಗಾಯನದ ಮೂಲಕ ಗಮನ ಸೆಳೆಯಿತು. ಈ ಮಹಾಸಮ್ಮೇಳನದ ಐತಿಹಾಸಿಕ ಪಯಣದಲ್ಲಿ ಸಂಸ್ಥೆಯು ಪ್ರದರ್ಶಿಸಿದ ಒಗ್ಗಟ್ಟು, ಸಮರ್ಪಣಾ ಭಾವ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಸಾರ್ವಜನಿಕರ ಹಾಗೂ ಆಯೋಜಕರ ಮೆಚ್ಚುಗೆಗೆ ಪಾತ್ರವಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top