ಮುಜುಂಗಾವು: ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇಂದು ಗೋಪೂಜೆಯನ್ನು ನಡೆಸಲಾಯಿತು. ಸಂಸ್ಕೃತ ಅಧ್ಯಾಪಕರಾದ ಬಾಲಕೃಷ್ಣ ಶರ್ಮ ಅನಂತಪುರ ಗೋಪೂಜೆಯ ಮಹತ್ವವನ್ನು ಈ ಸಂದರ್ಭದಲ್ಲಿ ವಿವರಿಸಿದರು.
ವಿದ್ಯಾಲಯದ ಆಡಳಿತ ಸೇವಾಸಮಿತಿ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಪ್ರಸಾದ್ ಹಿಳ್ಳೆಮನೆ, ಮುಖ್ಯೋಪಾಧ್ಯಾಯ ಶಾಮ ಭಟ್ ದರ್ಭೆಮಾರ್ಗ, ಸಹಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಇವರೊಂದಿಗೆ ಎಲ್ಲಾ ಅಧ್ಯಾಪಕ ವೃಂದ ಹಾಗೂ ಶಾಲಾ ಮಕ್ಕಳೂ ಗೋಪೂಜೆಯಲ್ಲಿ ಸಹಭಾಗಿಗಳಾದರು.

