ರೋಗಿಯ ಆತಂಕ ನಿವಾರಣೆ ವೈದ್ಯ ಸೇವೆಯಿಂದ ಸಾಧ್ಯ: ಪ್ರಭಾಕರ ಪ್ರಭು

Shreya Hegde
0



ಬಂಟ್ವಾಳ: ಸಮಾಜದಲ್ಲಿ ಇರುವ ಎಲ್ಲಾ ವ್ಯಕ್ತಿಗಳು ಸಹ ಒಂದಲ್ಲ ಒಂದು ರೀತಿಯಲ್ಲಿ ಸಮಾನರಾಗಿದ್ದು ತಾವೂ ಕರ್ತವ್ಯ ಸಲ್ಲಿಸುತ್ತಿರುವ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಜನಸಾಮಾನ್ಯರೊಂದಿಗೆ ಬಾಂಧವ್ಯ ಗಳಿಸುತ್ತಾರೆ ಎನ್ನುವುದು ಮುಖ್ಯ. ವ್ಯಕ್ತಿ ತಾನು ಹೊಂದಿರುವ ಅಧಿಕಾರದೊಂದಿಗೆ, ಎಷ್ಟೇ ಸಂಪತ್ತು, ಸೌಕರ್ಯ ಹೊಂದಿದರೂ ಸಹ ಆರೋಗ್ಯದಲ್ಲಿ ಏರುಪೇರುಗೊಂಡು ಆಂತಕದ ವಾತಾವರಣ ಉಲ್ಬಣಗೊಂಡಾಗ ಧೈರ್ಯ ತುಂಬಿ ಆತಂಕವನ್ನು ನಿವಾರಣೆ ಮಾಡಲು ವೈದ್ಯ ವೃತ್ತಿಯಿಂದ ಮಾತ್ರ ಸಾಧ್ಯ, ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸಾರ್ವಜನಿಕವಾಗಿ ಅಭಿನಂದನೆಗಳನ್ನು ಸಲ್ಲಿಸುವುದು ಶ್ಲಾಘನೀಯವಾಗಿದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ಇತ್ತೀಚಿಗೆ ಸಿದ್ದಕಟ್ಟೆ ಸ್ವಾಗತ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ ದಿನದಂದು ನಡೆದ ಸಮಾರಂಭದಲ್ಲಿ ಸ್ವಾಗತ ಮಾಲಕರು ಮತ್ತು ವ್ಯಾಪಾರಸ್ಥರು ಹಾಗೂ ಸಾರ್ವಜನಿಕ ಪರವಾಗಿ ಸಿದ್ದಕಟ್ಟೆಯಲ್ಲಿ ಕಳೆದ 30 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಕೃಷ್ಣಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಕೃಷ್ಣಮೂರ್ತಿಯವರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವುದರಿಂದ ನನಗೆ ತೃಪ್ತಿ ತಂದಿದೆ ಹಾಗೂ ಸಾರ್ವಜನಿಕ ಅಭಿನಂದನೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಸಮಾರಂಭದಲ್ಲಿ ನಮ್ಮ ಕುಡ್ಲ ನ್ಯೂಸ್ ಚಾನೆಲ್ ನ ನಿರ್ದೇಶಕರಾದ ಶರಣ್ ಕರ್ಕೇರ, ಆದಿತ್ಯ ಕರ್ಕೇರ, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು, ಸ್ವಾಗತ್ ಕಾಂಪ್ಲೆಕ್ಸ್ ಮಾಲಕರಾದ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಬು ಶೆಟ್ಟಿ, ಕಾರ್ಯಕ್ರಮದಲ್ಲಿ ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶಿವ ಗೌಡ, ಪ್ರಮುಖರಾದ ಕೇಶವ ಶಬರೀಶ, ಪ್ರಕಾಶ್ ಶೆಟ್ಟಿ, ಸ್ವಸ್ತಿಕ್, ಡಾ. ರಕ್ಷಿತ್ ಭಟ್, ಹೇಮಚಂದ್ರ, ಗೌಡ, ಗಣೇಶ ಹೊಳ್ಳ, ಸಂತೋಷ ಅಂಚನ್ ವಾರಿಜ ಮೋಹನ್, ಸುರೇಶ ಶೆಟ್ಟಿ ಕಾಮಧೇನು, ಮೀನಾಕ್ಷಿ, ಸಂದ್ಯಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಧನ್ಯವಾದ ವಿತ್ತರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top