ಮಯಂಗರ ಕ್ಷೇತ್ರದಲ್ಲಿ ಲಕ್ಷ ದೀಪಾರ್ಚನೆ: ಬ್ರಹ್ಮಕಲಶೋತ್ಸವಕ್ಕೆ ಮುನ್ನುಡಿ

Shreya Hegde
0



ಚೆರ್ಕಳ: ಕಾಸರಗೋಡಿನ ಚೆರ್ಕಳ ಸಮೀಪದ ಸುಪ್ರಸಿದ್ಧ ಬೇವಿಂಜೆ ಮಯಂಗರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ  ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ  ಕ್ಷೇತ್ರದಲ್ಲಿ ಜರಗುವ ಲಕ್ಷ ದೀಪಾರ್ಚನಾ ಪವಿತ್ರ ಕಾರ್ಯಕ್ರಮಕ್ಕೆ ದಿವ್ಯ ಉಪಸ್ಥಿತಿ ನೀಡಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು, ಕ್ಷೇತ್ರಕ್ಕೆ ಪಾದಸ್ಪರ್ಶ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಲಕ್ಷ ದೀಪಾರ್ಚನೆಗೆ ಚಾಲನೆ ನೀಡಿದರು. ಬಳಿಕ ನೆರೆದಿದ್ದ ನೂರಾರು ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಶ್ರೀಗಳು, ಮುಂಬರುವ ಬ್ರಹ್ಮಕಲಶ ಮಹೋತ್ಸವವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳ್ಳಲಿ ಎಂದು ಶುಭ ಹಾರೈಸಿದರು.


ಬೆಳಗ್ಗೆ ಸಾಂಪ್ರದಾಯಿಕ ಗಣಪತಿ ಹೋಮದೊಂದಿಗೆ ಆರಂಭಗೊಂಡ ಧಾರ್ಮಿಕ ವಿಧಿವಿಧಾನಗಳು ಸಕಾಲದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದವು. ಈ ಭವ್ಯ ಧಾರ್ಮಿಕ ಕ್ಷಣಕ್ಕೆ ಸಾಕ್ಷಿಯಾಗಿ ಕ್ಷೇತ್ರೇಶ್ವರರಾದ ಬಿ ವಿ ಕಕ್ಕಿಲ್ಲಾಯ , ವಿಷ್ಣುಮೂರ್ತಿ ಕಕ್ಕಿಲ್ಲಾಯ , ಗೋಪಾಲಕೃಷ್ಣ ಕಕ್ಕಿಲ್ಲಾಯರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗಿರಿಧರನ್, ಬಿ ಕೆ  ವಿಜಯನ್ , ಗೋವಿಂದಬಳ್ಳಮೂಲೆ , ರವಿ ಬೇವಿಂಜೆ,  ಪದಾಧಿಕಾರಿಗಳು, ಸದಸ್ಯರು ಮತ್ತು ಊರ-ಪರವೂರಿನ ನೂರಾರು ಭಕ್ತ ಜನಸ್ತೋಮ ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಮುಂಬರುವ ಡಿಸೆಂಬರ್ 18 ರಿಂದ 27ರ ತನಕ ಸುಪ್ರಸಿದ್ಧ ತಾಂತ್ರಿಕ ಪ್ರಮುಖರಾದ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿವರ್ಯರ ದಿವ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹತ್ತು ದಿನಗಳ ಕಾಲ ವೈಭವದ ಬ್ರಹ್ಮ ಕಲಶೋತ್ಸವ ನಡೆಯಲಿದೆ .

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top