ಕುಮಟಾ-ಹೊನ್ನಾವರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹12 ಲಕ್ಷ ಸಂಸದರ ನಿಧಿ ಬಿಡುಗಡೆ

Upayuktha
0
ಶಾಲಾ ಮೂಲಸೌಕರ್ಯ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಅನುದಾನ ಶಿಫಾರಸು ಮಾಡಿದ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್

ಕ್ಷೇತ್ರದ ಜನತೆಯ ಪರವಾಗಿ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಧನ್ಯವಾದ




ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರ ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲಾ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗಾಗಿ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿ (MPLADS) ಅಡಿಯಲ್ಲಿ ಒಟ್ಟು ₹12 ಲಕ್ಷ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮನವಿಗೆ ತಕ್ಷಣ ಸ್ಪಂದಿಸಿದ ಸಂಸದರಿಗೆ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಅವರು ಕುಮಟಾ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.


ನವೆಂಬರ್ 12, 2026ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಂಸದ ಮನ್ಸೂರ್ ಅಲಿ ಖಾನ್ ಅವರು, ಎಂಪಿಎಲ್‌ಎಡಿಎಸ್ ಯೋಜನೆಯಡಿ ಮೂರು ಪ್ರಮುಖ ಕಾಮಗಾರಿಗಳನ್ನು ಪರಿಶೀಲಿಸಿ ಮಂಜೂರು ಮಾಡುವಂತೆ ಶಿಫಾರಸು ಮಾಡಿದ್ದಾರೆ. ಈ ಎಲ್ಲಾ ಕಾಮಗಾರಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಬಿಡಿಪಿಒ (BDPO) ಅನುಷ್ಠಾನ ಸಂಸ್ಥೆಯ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿದೆ.


ಮಂಜೂರಾತಿಗೆ ಶಿಫಾರಸುಗೊಂಡ ಕಾಮಗಾರಿಗಳ ವಿವರ:

ಅಡುಗೆ ಮನೆ ನಿರ್ಮಾಣ (₹4.50 ಲಕ್ಷ): ಕುಮಟಾ ತಾಲೂಕಿನ ಸಂತೆಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉರ್ದು ಪಬ್ಲಿಕ್ ಶಾಲೆಯಲ್ಲಿ ಅಂದಾಜು ₹4,50,000 ವೆಚ್ಚದಲ್ಲಿ ನೂತನ ಅಡುಗೆ ಮನೆ ಕಟ್ಟಡ ನಿರ್ಮಾಣ.


ಶಾಲಾ ಚಾವಣಿ ನಿರ್ಮಾಣ (₹4.00 ಲಕ್ಷ): ಕುಮಟಾ ತಾಲೂಕಿನ ಬಾಡ ಪಂಚಾಯತ್ ವ್ಯಾಪ್ತಿಯ ಹುಬ್ಬನಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಂಭಾಗದಲ್ಲಿ ಅಂದಾಜು ₹4,00,000 ವೆಚ್ಚದಲ್ಲಿ ಚಾವಣಿ (ಶೆಡ್) ನಿರ್ಮಾಣ.


ಸಾರ್ವಜನಿಕ ಶೌಚಾಲಯ ನಿರ್ಮಾಣ (₹3.50 ಲಕ್ಷ): ಹೊನ್ನಾವರ ತಾಲೂಕಿನ ಚಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲ್ತಾನ್‌ಕೇರಿ ಸುಲ್ತಾನಿ ಮಸೀದಿ ಮತ್ತು ಮದನ್ ಶಾ ದರ್ಗಾ ಸಮೀಪ ಅಂದಾಜು ₹3,50,000 ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ.


ಕುಮಟಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಅಗತ್ಯತೆಯ ಕುರಿತು ನಿವೇದಿತ್ ಆಳ್ವಾ ಅವರು ಸಲ್ಲಿಸಿದ್ದ ಮನವಿಗೆ ಸಂಸದ ಮನ್ಸೂರ್ ಅಲಿ ಖಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಈ ಕಾಮಗಾರಿಗಳಿಗೆ ಅನುದಾನ ಒದಗಿಸಿಕೊಟ್ಟಿರುವುದಕ್ಕೆ ಕ್ಷೇತ್ರದ ಜನತೆಯ ಪರವಾಗಿ ನಿವೇದಿತ್ ಆಳ್ವಾ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top