ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವತಿಯಿಂದ ಮುತ್ಯಾಲಮಡುವಿನಲ್ಲಿ 'ವನಭೋಜನ' ಕಾರ್ಯಕ್ರಮ

Shreya Hegde
0



ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರಸಿದ್ಧ ಪ್ರವಾಸಿ ತಾಣವಾದ ಮುತ್ಯಾಲಮಡುವಿನಲ್ಲಿ 'ವನಭೋಜನ' ಕಾರ್ಯಕ್ರಮವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಯೋಜಿಸಲಾಗಿತ್ತು. ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಕೃತಿ ಪ್ರೇಮಿಗಳ ಸಂಗಮವಾಗಿ ಮೂಡಿಬಂದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.


ಕಾರ್ಯಕ್ರಮಕ್ಕೆ ಶ್ರೀರಾಮ ಅವಧೂತ ಮಹಾ ಸ್ವಾಮಿಗಳು ಹಾಗೂ ಶಾಮಣ್ಣ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯ ಲೇಖಕರಾದ ಜಗನ್ನಾಥ್ ರಾವ್ ಬಹುಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕವಯತ್ರಿ ಮಂಜುಳ ಅವರು ಕಾರ್ಯಕ್ರಮದ ಕುರಿತು ಆಶಯ ಭಾಷಣ ಮಾಡಿದರು. ಈ ವಿಶೇಷ ಸಮಾರಂಭದಲ್ಲಿ ವಕೀಲರು ಹಾಗೂ ರಂಗಭೂಮಿ ಕಲಾವಿದರಾದ ಶಿವರಾಜ್, ಕರಾವೇ (ಶಿವರಾಮೇಗೌಡರ ಬಣ) ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಗೌಡ ಮತ್ತು ಯುವ ರೈತ ಪ್ರಶಸ್ತಿ ಪುರಸ್ಕೃತರಾದ ಹಳೇಹಳ್ಳಿ ಮಹೇಶ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.


ಇವರೊಂದಿಗೆ ಮಂಜು ಅರೇಹಳ್ಳಿ, ಡಾ. ವೇದವತಿ ಬಿ. ರಾವ್, ಸರಿತಾ ಎಚ್. ಕಾಡುಮಲ್ಲಿಗೆ, ದಿವ್ಯ ಕರಕಲಘಟ್ಟ, ಮುನಿರಾಜು ಚಕ್ರವರ್ತಿ, ಮಂಜುನಾಥ್ ಕೆ., ಸಂತೋಷ್ ಟಿ. ಸಿ., ಇಲಿಯಾಸ್ ಖಾನ್, ಆಟೋ ನಾಗರಾಜ್, ರವಿ, ಮಧು, ಗಾಯಕ ರಾಮಚಂದ್ರ ಆರ್., ಮಹದೇವಯ್ಯ ಪೂಜಾರಿ, ನಾಗರಾಜ್ ಬಹದೂರ್ ಪುರ, ರಾಜು ಕಸಾಪ, ಆದೂರು ಪ್ರಕಾಶ್, ಅಪ್ಸರ್ ಆಲಿ ಖಾನ್ ಮತ್ತು ಚುಟುಕು ಶಂಕರ್ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು ಹಾಗೂ ಕಸಾಪ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಕೃತಿಯ ಮಡಿಲಲ್ಲಿ ನಡೆದ ಈ ವನಭೋಜನ ಕೂಟವು ಪರಸ್ಪರ ಸೌಹಾರ್ದತೆ ಮತ್ತು ಸಾಹಿತ್ಯಿಕ ಚರ್ಚೆಗಳಿಗೆ ಉತ್ತಮ ವೇದಿಕೆಯಾಯಿತು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top