
ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯಗಳು ಕೇವಲ ಆಚರಣೆಗಳಲ್ಲ, ಅವು ನಮ್ಮ ಜೀವನದ ಭಾಗವಾಗಿವೆ. ಕೆಲವೊಂದು ಆಚರಣೆಗಳು ಕಣ್ಮರೆಯಾಗುತ್ತಿದ್ದರೆ ಇನ್ನೂ ಕೆಲವು ಟ್ರೆಂಡ್ ಹೆಸರಿನಲ್ಲಿ ಹೊಸರೂಪ ಪಡೆದುಕೊಳ್ಳುತ್ತಿವೆ. ಶಾಸ್ತ್ರ-ಸಂಪ್ರದಾಯಗಳ ಹೆಸರಿನಲ್ಲಿ ಪ್ರಾರಂಭವಾದ ಕಿವಿ ಚುಚ್ಚುವ ಆಚರಣೆ ಈಗ ಮಹಿಳೆಯರ ಪಾಲಿಗೆ ಸೌಂದರ್ಯವರ್ದಕದ ಮೊದಲ ಹೆಜ್ಜೆ. ಮಗುವೊಂದು ಜನಿಸಿದ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸಿ ಓಲೆ ಹಾಕಿಸುವ ಪದ್ಧತಿ ನಮ್ಮ ದೇಶದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಕಾಲಕ್ರಮೇಣ ಅದು ಮಹಿಳೆಯರ ಸೌಂದರ್ಯಕ್ಕೂ ವ್ಯಾಪಿಸಿದ್ದು
ನಾರಿಯರಿಗೆ ಆಭರಣಗಳು ಎಂದರೆ ಎಲ್ಲಿಲ್ಲದ ಸಂತೋಷ, ಅದರಲ್ಲೂ ಬಂಗಾರದ ಮೇಲಿನ ವ್ಯಾಮೋಹ ಎಂದಿಗೂ ಕಡಿಮೆ ಆಗುವುದಿಲ್ಲ. ಸರ, ಬಳೆ, ಕಿವಿ ಓಲೆ ಕಂಡರಂತೂ ಅವರನ್ನು ಹಿಡಿಯಲಾಗದು. ಹೆಣ್ಣುಮಕ್ಕಳ ಕಿವಿಯಲ್ಲಿ ತೂಗುವ ಆ ಪುಟ್ಟ ಓಲೆ ಕೇವಲ ಒಂದು ಆಭರಣವಲ್ಲ ಸಂಸ್ಕೃತಿಯ ಸಂಕೇತ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಒಂದು ಹುಡುಗಿ ಕನ್ನಡಿಯ ಮುಂದೆ ನಿಂತು ತನ್ನ ಓಲೆಯನ್ನು ಸರಿಪಡಿಸಿಕೊಳ್ಳುವಾಗ, ಅವಳ ಮುಖದಲ್ಲಿ ಮೂಡುವ ಮಂದಹಾಸವೇ ಆ ಓಲೆಗೆ ನಿಜವಾದ ಮೌಲ್ಯ ನೀಡುತ್ತದೆ. ಇನ್ನು ಜ್ಯೋತಿಷ್ಯದ ಪ್ರಕಾರ ಬಂಗಾರದ ಓಲೆಗಳನ್ನು ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ವೈಜ್ಞಾನಿಕವಾಗಿ ಸಹ ಹಲವಾರು ಲಾಭಗಳಿವೆ . ಮೊದಲಿನಿಂದಲೂ ಹೆಣ್ಣು ಮಕ್ಕಳು ಕಿವಿ ಓಲೆ ಹಾಕಿಕೊಳ್ಳುವ ಪದ್ಧತಿ ನಡೆದುಕೊಂಡು ಬಂದಿದ್ದು ಮೊದಲೆಲ್ಲ ಬಂಗಾರದ ಕಿವಿ ಓಲೆಗಳನ್ನು ಧರಿಸುತ್ತಿದ್ದರು ಆದರೆ ಈಗಿನ ಫ್ಯಾಶನ್ ಯುಗದಲ್ಲಿ ಬಗೆಬಗೆಯ ಒಡವೆಗಳು ಸೌಂದರ್ಯದ ಜಗತ್ತನ್ನು ಆಳುತ್ತಿವೆ. ಅವುಗಳಲ್ಲಿ ರೋಲ್ಡ್ ಗೋಲ್ಡ್ ಆಭರಣಗಳದ್ದೇ ಮೇಲುಗೈ.
ಕಿವಿ ಓಲೆಯನ್ನು ಹಾಕಿಕೊಳ್ಳುವರು. ಅವರ ಉಡುಪುಗಳಿಗರ ತಕ್ಕ ಹಾಗೇ ಡಿಸೈನ್ ಮತ್ತು ಬಣ್ಣದ ಓಲೆಗಳನ್ನು ಧರಿಸುತ್ತಾರೆ. ಉದ್ದವಾದ ಮತ್ತು ಕಿವಿಯೇ ಹರಿದು ಬಿಳ್ಳುವಂತಹ ಓಲೆಯನ್ನು ಹಾಕಿಕೊಳ್ಳುವದನ್ನು ವಯಸ್ಸಾದ ಮುದುಕಿಯರು ಇವರ ಕಿವಿಯನ್ನೇ ನೋಡುತ್ತಾ ಅದು ಓಲೆಯೋ ಅಥವಾ ಬಂಡಿಗಾಲಿಯೋ ಎಂದು ಅಪಹಾಸ್ಯ ಮಾಡುವುದು ಉಂಟು. ಈಗಂತೂ ಪುರುಷರೂ ಸಹ ಕಿವಿಗೆ ಓಲೆಗಳನ್ನು ಹಾಕುತ್ತಾರೆ. ಅದೊಂದು ಫ್ಯಾಶನ್ ಆಗಿದೆ ಚಿಕ್ಕವರಿಂದ ದೊಡ್ಡವರ ವರೆಗೂ ಈ ಫ್ಯಾಷನ್ ಅಥವಾ ಟ್ರೆಂಡನ್ನು ಇಂದು ಎಲ್ಲರೂ ಹಿಂಬಾಲಿಸುತ್ತಿದ್ದಾರೆ.
ಮಹಿಳೆಯರು ಹೆಚ್ಚಾಗಿ ಬಳಸುವಂತಹ ಕಿವಿ ಓಲೆಯೆಂದರೆ ಜುಮುಕಿ, ಬುಗುಡಿ, ಬಾಲಿ, ಕಿವಿಸರ, ಚಾಂದ್ ಬಲಿ, ಸೂಜಿ-ದಾರ ಡ್ರಾಪ್, ಇಯರ್ ಕಫ್ ಓಲೆ ಇದರ ಹೊರತಾಗಿಯೂ ವಿಭಿನ್ನ ರೀತಿಯ ಓಲೆಗಳು ಇವೆ. ಅದರಲ್ಲೂ ಜುಮುಕಿ ಇದು ಭಾರತೀಯ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ವಿನ್ಯಾಸ ಮತ್ತು ಈಗಿನ ಟ್ರೆಂಡಿಗೂ ಸಹ ಹೊಂದಿಕೊಂಡಿದ್ದು ಎಲ್ಲಾ ಹುಡಿಗಿಯರಿಗೂ ಜುಮಕಿ ಎಂದರೆ ಕೇವಲ ಓಲೆಯಲ್ಲಾ ಅದು ಒಂದು ಎಮೋಷನ್ ಆಗಿದೆ. ಇನ್ನೂ ಮದುವೆ ಹಾಗೂ ಹಬ್ಬ ಹರಿದಿನಗಳಂದು ಎಲ್ಲರೂ ಈ ಜುಮುಕಿ ಧರಿಸುತ್ತಾರೆ. ಬಂಗಾರದ ಓಲೆಗಳು,ಬೆಳ್ಳಿ ಓಲೆಗಳು, ಮುತ್ತಿನ ಓಲೆಗಳು, ಹರಳಿನ ಓಲೆಗಳು, ಟೆರಾಕೋಟಾ ಇಂತಹ ಓಲೆಗಳು ಪ್ರಸಿದ್ಧಿ.
- ಸಾವಿತ್ರಿ ಬಸಪ್ಪ ಅಣ್ಣಿಗೇರಿ
ಚಿಕ್ಕಮುಚ್ಚಳಗುಡ್ಡ

