ಅಧಿಕಾರಕ್ಕೆ ಬರಲು ಸರಳ ಮಾರ್ಗವಿದ್ದರೂ ಹಾದಿ ತಪ್ಪಿದ ಕಾಂಗ್ರೆಸ್

Shreya Hegde
0



ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಆಸೆ ಇದ್ದರೆ, ಅದಕ್ಕೊಂದು ಸರಳ ಹಾಗೂ ನೇರ ಮಾರ್ಗವಿದೆ. ತಾನು ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಜನಪರ ಮತ್ತು ಉತ್ತಮ ಆಡಳಿತ ನೀಡಿದರೆ, ಜನರು ತಮ್ಮಷ್ಟಕ್ಕೆ ತಾವೇ ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತಾರೆ.


ಆದರೆ, ಈ ಸರಳ ಉಪಾಯವನ್ನು ಬದಿಗೊತ್ತಿ, ನಿನ್ನೆ-ಮೊನ್ನೆ ಹುಟ್ಟಿದ ಪ್ರಾದೇಶಿಕ / ಸಣ್ಣ ಪಾರ್ಟಿಗಳ ಮುಂದೆ ಮೈತ್ರಿಗಾಗಿ ಹಾತೊರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ? "50 ಸೀಟು ಕೊಡಿ, 60 ಸೀಟು ಕೊಡಿ" ಎಂದು ಕೈಚಾಚಿ ಬೇಡುತ್ತಿದ್ದರೆ, ಇತ್ತೀಚೆಗೆ ಬಂದ ಪಾರ್ಟಿಗಳು ಕೂಡ ಕಾಂಗ್ರೆಸ್ ಅನ್ನು ತುಳಿಯಲು ಯತ್ನಿಸುವುದು ಸಹಜ. ಇನ್ನೊಂದೆಡೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿ ಕಾಂಗ್ರೆಸ್ ಸಾಧಿಸಿದ್ದಾದರೂ ಏನು?


ಮೊದಲು ತಾನು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಯಶಸ್ವಿ ಆಡಳಿತ ನೀಡುವಲ್ಲಿ ಕಾಂಗ್ರೆಸ್ ನಿರತವಾಗಬೇಕಿದೆ. ಉದಾಹರಣೆಗೆ, ಕರ್ನಾಟಕದ ಮುಖ್ಯಮಂತ್ರಿಯವರನ್ನೇ ತೆಗೆದುಕೊಂಡರೆ, ಅವರು ಪದೇ ಪದೆ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ಓಡಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ದೆಹಲಿಗೆ ಅಲೆದಾಡುವ ಬದಲು ಜನರ ಬಳಿಗೆ ಹೋಗಿ ಅವರ ಸಮಸ್ಯೆ ಆಲಿಸಿದ್ದರೆ, ಜನರೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ನೀಡುತ್ತಿದ್ದರು.


ಪಕ್ಷದ ಅಧ್ಯಕ್ಷರಾಗಿ ಈ ವಿಚಾರಗಳನ್ನು ನಾಯಕರಿಗೆ ತಿಳಿಹೇಳಬೇಕಿದ್ದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಗಾಂಧಿ ಕುಟುಂಬದ ನಾಯಕರು ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತ ದೇಶ ಸುತ್ತುತ್ತ ವ್ಯರ್ಥ ಶ್ರಮ ಪಡುತ್ತಿದ್ದಾರೆ. 82 ವರ್ಷ ವಯಸ್ಸಿನ ಹಿರಿಯ ನಾಯಕರಾದ ಖರ್ಗೆಯವರು, 55 ವರ್ಷದ ರಾಹುಲ್ ಗಾಂಧಿ ಅವರ ಮಾತನ್ನು ಕೇಳಿಕೊಂಡು ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ನೆಮ್ಮದಿಯನ್ನೂ ಮರೆತಂತಿದೆ. ಸಮಸ್ಯೆ ಒಂದಾದರೆ ಪರಿಹಾರ ಇನ್ನೊಂದೆಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಹೊಟ್ಟೆನೋವಿಗೆ ಜುಟ್ಟು ಕತ್ತರಿಸಿಕೊಂಡರೆ ಪರಿಹಾರ ಸಿಗಲು ಸಾಧ್ಯವೇ?


- ವಿಶ್ವನಾಥ ಹೆಗಡೆ ಶಿರಸಿ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top