ಶ್ರೀ ಕ್ಷೇತ್ರ ಶಂಕರಪುರ: ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ

Upayuktha
0



ಉಡುಪಿ: ಇಲ್ಲಿನ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ 'ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ' ಕಾರ್ಯಕ್ರಮವು ಇಂದು ಅರ್ಥಪೂರ್ಣವಾಗಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಏಕಜಾತಿ ಧರ್ಮ ಪೀಠದ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ ಅವರು, "ಜಗತ್ತಿನ 87 ಲಕ್ಷ ಜೀವರಾಶಿಗಳಲ್ಲಿ ಅತ್ಯಂತ ನಂಬಿಕಸ್ಥ ಜೀವಿ ನಾಯಿಯಾಗಿದೆ. ಇಂದು ಹಲವಾರು ಕಾರಣಗಳಿಂದ ಬೀದಿ ನಾಯಿಗಳು ಸಂಕಷ್ಟ ಅನುಭವಿಸುತ್ತಿದ್ದು, ಅವುಗಳ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು," ಎಂದರು.


ಮುಂದುವರಿದು ಮಾತನಾಡಿದ ಅವರು, "ಪ್ರತಿಯೊಬ್ಬ ವ್ಯಕ್ತಿಯು ತನ್ನನ್ನು ತಾನು ಅರಿತುಕೊಂಡಾಗ ಜಗತ್ತಿನಲ್ಲಿ ಬದಲಾವಣೆ ತರಲು ಸಾಧ್ಯ. ಎಲ್ಲಾ ಜೀವರಾಶಿಗಳಿಗೂ ಆತ್ಮವಿದ್ದು, ಅವುಗಳಿಗೆ ಗೌರವ ನೀಡುವುದು ನಮ್ಮೆಲ್ಲರ ಧರ್ಮವಾಗಿದೆ," ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬೀದಿ ಶ್ವಾನ ಸಂರಕ್ಷಣೆ ಕುರಿತ ಜಾಗೃತಿ ಸ್ಟಿಕರ್ ಬಿಡುಗಡೆಗೊಳಿಸಲಾಯಿತು.


ವೇದಿಕೆಯಲ್ಲಿ ನಿವೃತ್ತ ಪಶುಸಂಗೋಪನಾ ಇಲಾಖೆ ಅಧಿಕಾರಿ ಬಿ. ರವೀಂದ್ರ ಹೆಬ್ಬಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂದಿರದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ರಾಮ ಟಿ. ಪೂಜಾರಿ, ಬಜ್ಪೆ ಭದ್ರಕಾಳಿ ದೇವಸ್ಥಾನದ ಮನೋರಮಾ, ಶ್ರೀಧರ್ ಶಾಂತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


ಟ್ರಸ್ಟಿಗಳಾದ ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನಾಗರಾಜ್ ಬೈಂದೂರು, ವಿಜಯ್ ಕುಂದರ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಲಾವಣ್ಯ, ವಿನೋದ್ ಕುಮಾರ್, ರಾಜೇಶ್ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ್, ಪ್ರತಿಮಾ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಗೀತಾಂಜಲಿ ಸುವರ್ಣ ವಂದಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top