ಯುವಕರ ಸಾಂಸ್ಕೃತಿಕ ಹೆಜ್ಜೆ ಶ್ಲಾಘನೀಯ: ನಿತಿನ್ ಗುತ್ತೇದಾರ್

Shreya Hegde
0

"ಖರಾಬ್" ಹಾಡು- ನೃತ್ಯ ಸಂಯೋಜನೆ ವಿಡಿಯೋ ಲೋಕಾರ್ಪಣೆಯಲ್ಲಿ ಜೆನ್ ಜಿ ಸಂಭ್ರಮ 


ಕಲಬರಗಿ: ಯುವಕರು ಸಾಂಸ್ಕೃತಿಕ ಲೋಕದತ್ತ ಮುಖ ಮಾಡಿ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯವಾಗಿದ್ದು ನಮ್ಮ ಭಾಗದ ಪ್ರತಿಭಾ ಲೋಕ ತೆರೆದುಕೊಳ್ಳಲು ಅವಕಾಶ ಸಿಕ್ಕಂತಾಗಿದೆ ಎಂದು ಯುವ ಮುಖಂಡರಾದ ನಿತಿನ್ ಗುತ್ತೇದಾರ್ ಹೇಳಿದರು.


ಕಲಬುರಗಿಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ (ಅ. 15ರಂದು) ಅಫಜಲ್ಪುರದ ಯುವ ಕಲಾವಿದ ಕೆ.ಡಿ ದಾದಾ ಅವರು ಹಾಡಿ, ಅಭಿನಯಿಸಿದ ಪಾಶ್ಚಾತ್ಯ ಸಂಗೀತದಲ್ಲಿರುವ ರಾಪ್ ಸಂಗೀತದ ಕನ್ನಡ ಹಾಡನ್ನು ಯು ಟ್ಯೂಬ್‌ಗೆ ಲೋಕಾರ್ಪಣೆ ಮಾಡಿ ಮಾತನಾಡಿ ಜೆನ್ ಜಿಗಳು (ಯುವಕರು) ಇವತ್ತು ತುಂಬಾ ಸುದ್ದಿಯಲ್ಲಿದ್ದು ನಮ್ಮ ಭಾಗದ ಯುವಕರ ತಂಡ ಒಟ್ಟಾಗಿ ಸಂಗೀತ ಲೋಕದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿ ಅಫ್ಜಲ್ಪುರ ತಾಲೂಕು ಹಾಗೂ ಕಲಬುರಗಿಯ ಹೆಸರನ್ನು ಮುಂಚೂಣಿಗೆ ತರುತ್ತಿರುವುದು ಖುಷಿಯ ಸಂಗತಿಯಾಗಿದೆ. ಪ್ರಸ್ತುತ ಯುವಕರ ಹಾಡು, ರೀಲ್ಸ್, ಇನ್ಸ್ಟಾಗ್ರಾಮ್ ಹೆಚ್ಚೆಚ್ಚು ವೀಕ್ಷಕರನ್ನು ತಲಪತ್ತಿದ್ದು ಸದಭಿರುಚಿಯ ವಿಚಾರಗಳು ಹೆಚ್ಚು ಜನರನ್ನು ಆಕರ್ಷಿಸುತ್ತದೆ ಮತ್ತು ಅಪಾರ ವೀಕ್ಷಕರನ್ನು ಸೆಳೆದುಕೊಳ್ಳುತ್ತಿರುವುದರಿಂದ ಯುವಕರ ಜೊತೆ ಕೈಜೋಡಿಸಿದ ನಮಗೂ ಸಹಜವಾಗಿ ಖ್ಯಾತಿ ತಾನಾಗಿ ಬರುತ್ತದೆ ಎಂದು ಹೇಳಿದರು.


ಸಿನಿಮಾದಲ್ಲೂ ಈ ಭಾಗದ ಯುವಕರಿಗೆ ಅವಕಾಶ ಸಿಗಲಿ: ಡಾ. ಪೆರ್ಲ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಈ ಭಾಗದ ಯುವಕರು ಕೀಳರಿ ಮೆ ಬಿಟ್ಟು ಪ್ರತಿಭಾ ಪ್ರದರ್ಶನಕ್ಕೆ ಮುಂದಾಗಬೇಕು. ಕಲ್ಯಾಣ ಕರ್ನಾಟಕದ ಗಾಯಕರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಪ್ರತಿಭಾ ಸಂಪನ್ನತೆಯನ್ನು ಹೊಂದಿದವರಿಗೆ ಸ್ಯಾಂಡಲ್ ವುಡ್  ಕನ್ನಡ ಸಿನಿಮಾದಲ್ಲೂ ಅವಕಾಶ ಸಿಗುವಂತಾಗಬೇಕು.ಸಾಂಸ್ಕೃತಿಕ ಲೋಕ ಕಟ್ಟುವ ಕಡೆಗೆ ಕಲಾವಿದ ಕೆ.ಡಿ ದಾದಾ ಅವರ ಪ್ರಯತ್ನ ಎಲ್ಲರಿಗೂ ಮಾದರಿಯಾಗಲಿ.ಈ ಭಾಗದ ಯುವಶಕ್ತಿ ಎಲ್ಲ ರಂಗಗಳಲ್ಲೂ ಮುನ್ನ ಲೆಗೆ ಬರಬೇಕು ಎಂದು ಸಲಹೆ ನೀಡಿದರು.


ಕಲಾವಿದ ಕೆ.ಡಿ ದಾದಾ ಅವರ ಹಾಡು ಮತ್ತು ಅಭಿನಯದ ಖರಾಬ್ ವಿಡಿಯೋ ನಿರ್ಮಾಣ ತಂಡದ ಮುಖ್ಯಸ್ಥರಾದ ಅಂಬಿಕಾ, ಛಾಯಾಗ್ರಹಣದ ಎಂ.ಜೆ ಪ್ರಜ್ವಲ್, ಡಿಟೋನ್ ಸಂಗೀತ ಬಳಗದ ಸದಸ್ಯರನ್ನು  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಾಜು ಭಾರತಿ ಮತ್ತು ಪತ್ರಕರ್ತ ವಿಜಯಕುಮಾರ್ ಸಾಲಿಮಠ್ ಈ ಸಂದರ್ಭದಲ್ಲಿ ಮಾತನಾಡಿದರು. ಯುವಕರು ವಿಡಿಯೋ ಬಿಡುಗಡೆ ವೇಳೆ ಕುಣಿದು ಸಂಭ್ರಮಿಸಿದರು.


ಕಾರ್ಯಕ್ರಮದಲ್ಲಿ ಬಾಬುರಾವ್ ಕೋಬಾಳ, ಕಿಶನ್ ಸಿಂಗ್, ದಶರಥ ಸಿಂಗ್ ಠಾಕೂರ್  ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್ ಜೆ ಮಂಜು ಹೀರೋಳಿ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top