ಸುರತ್ಕಲ್: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಫಿಶರೀಶ್ ಚಿತ್ರಾಪುರ ಇದರ ಶಾಲಾ ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘಗಳ ಸಹಭಾಗಿತ್ವದಲ್ಲಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶಾರದಾ ಪೂಜೆ ಮತ್ತು ಸಂಕೀರ್ತನೆಯು ನೆರವೇರಿತು.
ಪಡುಬಿದ್ರೆ ಶ್ರೀಧರಾಚಾರ್ಯರ ಪೌರೋಹಿತ್ಯದಲ್ಲಿ ನಡೆದ ಶಾರದಾ ಪೂಜೆಯಲ್ಲಿ ಶ್ರೀನಿವಾಸ ರಾವ್,ಹಿರಿಯ ನಿವೃತ್ತ ಶಿಕ್ಷಕಿ ಪುಷ್ಪಾವತಿ ಶ್ರೀನಿವಾಸ ರಾವ್, ಹಿರಿಯ ಶಿಕ್ಷಕಿ ಸುಕೇಶಿನಿ, ಮುಖ್ಯ ಶಿಕ್ಷಕಿ ಶೋಭಾ ಮತ್ತು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಭಜನಾ ಕಾರ್ಯಕ್ರಮ ನಡೆಸಿದರು. ಶಿಕ್ಷಕಿಯರಾದ ನೀತಾ ತಂತ್ರಿ, ರೂಪ, ವನಿತಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶಶಿಕಲಾ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣ ಮೂರ್ತಿ, ಸದಸ್ಯ ಸುನೀಲ್ ಚಿತ್ರಾಪುರ, ಪೋಷಕರು ಪಾಲ್ಗೊಂಡರು.

