ಉಡುಪಿಯಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಶ್ರೀ ಪುತ್ತಿಗೆ ಮಠದಿಂದ ಸ್ವಚ್ಛ ಭಾರತ್ ಅಭಿಯಾನ

Shreya Hegde
0


ಉಡುಪಿ: ಗಾಂಧಿ ಜಯಂತಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ, ಉಡುಪಿ ಹಾಗೂ ಶ್ರೀ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಉಡುಪಿಯ ಗೀತಾ ಮಂದಿರ, ರಾಜಾಂಗಣ ಹಾಗೂ ಪತಂಜಲಿ ಕಾರ್ಯಾಲಯದ ಪರಿಸರದಲ್ಲಿ 'ಸ್ವಚ್ಛ ಭಾರತ್ ಅಭಿಯಾನ'ವು ಅತ್ಯಂತ ಯಶಸ್ವಿಯಾಗಿ ಜರುಗಿತು. ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಅವರು ದೀಪ ಬೆಳಗಿಸಿ, ತುಳಸಿ ಗಿಡ ನೆಟ್ಟು, ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛ ಭಾರತ ಅಭಿಯಾನವು ಕೇವಲ ಒಂದೇ ದಿನಕ್ಕೆ ಮೀಸಲಾಗದೆ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ವಯಂ ಪ್ರೇರಣೆಯಿಂದ ನಿತ್ಯ ಜೀವನದಲ್ಲಿ ಸ್ವಚ್ಛತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದ ಆರಂಭದಲ್ಲಿ ಪತಂಜಲಿ ರಾಜ್ಯ ಸಮಿತಿ ಸದಸ್ಯ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪತಂಜಲಿ ಯೋಗ ಸಮಿತಿ, ಉಡುಪಿಯು ಸತತ ಐದು ವರ್ಷಗಳಿಂದ ವಿವಿಧ ಕಕ್ಷೆಗಳಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರ ದೇವಸ್ಥಾನ, ಪಾರ್ಕಿಂಗ್ ಪ್ರದೇಶ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಮಾಸಿಕ ಸ್ವಚ್ಛತಾ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್‌ನ ವೆಂಕಟೇಶ್ ಮೆಹಂದಲೆ, ಯುವ ಪ್ರಭಾರಿ ಜಗದೀಶ್ ಕುಮಾರ್, ಮೀಡಿಯಾ ಪ್ರಭಾರಿ ಹರಿಪ್ರಸಾದ್ ಕೆ., ಮಹಿಳಾ ಪ್ರಭಾರಿ ಶ್ರೀಮತಿ ಲೀಲಾ ಆರ್. ಅಮೀನ್, ತಾಲೂಕು ಪ್ರಭಾರಿಗಳಾದ ನಾಗರಾಜ ಶೇಟ್, ಶ್ರೀಮತಿ ಶ್ಯಾಮಲಾ ಕೆ, ಗೌರವ ಸದಸ್ಯರಾದ ಸದಾಶಿವ ರಾವ್, ಜಿಲ್ಲಾ ಸಮಿತಿಯ ಶ್ರೀ ಗಿರೀಶ್, ಲಕ್ಷ್ಮಣ ಕಾಮತ್, ರೋಹಿತ್, ಸಂತೋಷ ಶೆಟ್ಟಿ, ರಾಜು ನಂಬಿಯಾರ್, ರೋಹಿತ್ ಬಲ್ಲಾಳ್, ಹಾಗೂ ವಿವಿಧ ಕಕ್ಷೆಗಳ ಮುಖ್ಯ ಯೋಗ ಶಿಕ್ಷಕರು ಮತ್ತು ನೂರಾರು ಯೋಗಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.


ಶ್ರೀ ಮಠದ ವ್ಯವಸ್ಥಾಪನ ಸಮಿತಿಯ ಕಿರಣ್ ಜೀ ರವರು ಪಾಲ್ಗೊಂಡಿದ್ದ ಎಲ್ಲಾ ಯೋಗಾರ್ಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top