ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳಾ ಕಬಡ್ಡಿ: ಉಡುಪಿ ಸರ್ಕಾರಿ ಮಹಿಳಾ ಕಾಲೇಜು ಸಾಧನೆ

Shreya Hegde
0


ಉಡುಪಿ: ಮಂಗಳೂರು ವಿಶ್ವವಿದ್ಯಾಲಯದ 2026–27ನೇ ಸಾಲಿನ ಅಂತರ್ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ಅಜ್ಜರಕಾಡಿನ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡ ಗಮನಾರ್ಹ ಸಾಧನೆ ಮಾಡಿದೆ. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಾಲೇಜಿನ ತಂಡವು ಪ್ರಿಲಿಮಿನರಿ ಸುತ್ತಿನಲ್ಲಿ ದ್ವಿತೀಯ ರನ್ನರ್‌ಅಪ್ ಸ್ಥಾನ ಗಳಿಸಿದ್ದು, ಚಾಂಪಿಯನ್‌ಶಿಪ್ ಸುತ್ತಿನಲ್ಲಿ 5ನೇ ಸ್ಥಾನ ಪಡೆದುಕೊಂಡಿತು.


ತಂಡದಲ್ಲಿ ರಕ್ಷಿತಾ, ತುಷಾರಾ, ಸುಷ್ಮಿತಾ, ಚೈತ್ರಾ, ಪೂಜಾ, ರುತು, ಪ್ರತಿಥಾ, ಪ್ರತೀಕ್ಷಾ, ಶ್ರೇಯಾ, ತನುಜಾ, ಶಶಿಕಲಾ, ಮನೀಷಾ ಹಾಗೂ ಶೋಭಾ ಭಾಗವಹಿಸಿದ್ದರು. ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶ್ ಕುಮಾರ್, ಮಿಥುನ್ ಪೊಲಿಪು ಹಾಗೂ ಕ್ರೀಡಾ ಇಂಟರ್ನ್ ಚಂದ್ರಿಕಾ ಕಾಂಬ್ಳೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು. ಕ್ರೀಡಾಪಟುಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top