ತುಂಬೆ ಗ್ರೂಪ್‌ನಿಂದ ದುಬೈ, ಉಮ್ ಅಲ್ ಖುವೈನ್, ಫುಜೈರಾದಲ್ಲಿ ಹೊಸ ಪುನರ್ವಸತಿ ಕೇಂದ್ರ ಸ್ಥಾಪನೆ ಘೋಷಣೆ.

Shreya Hegde
0

ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ತುಂಬೆ ರಿಹ್ಯಾಬ್ ಸಾಮರ್ಥ್ಯ ಶೇ. 30ರಷ್ಟು ಹೆಚ್ಚಳ

ಕರ್ನಾಟಕದ ಪ್ರೊ. ಯು. ಟಿ. ಇಫ್ತಿಯಾರ್ ಫರೀದ್ ಅವರಿಗೆ ಪ್ರತಿಷ್ಠಿತ ‘ಸ್ಟಾರ್ ಆಫ್ ದಿ ಇಯರ್ 2026’ ಪ್ರಶಸ್ತಿ




ಅಜ್ಮಾನ್, ಯುಎಇ: "ಚೇತರಿಕೆ (Recovery) ಎಂಬುದು ಕೇವಲ ಜೀವ ಉಳಿಸುವುದಕ್ಕೆ ಮಾತ್ರ ಸೀಮಿತವಾಗಿರದೆ, ವ್ಯಕ್ತಿಯು ಸಂಪೂರ್ಣ ಹಾಗೂ ಸಕ್ರಿಯ ಜೀವನವನ್ನು ನಡೆಸುವಂತಾಗಬೇಕು" ಎಂಬ ಆಶಯದೊಂದಿಗೆ, ಅಜ್ಮಾನ್‌ನ ಅಲ್ ಜರ್ಫ್‌ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ ‘ಪುನರ್ವಸತಿ ಅಭ್ಯಾಸ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ನಾವೀನ್ಯತೆ’ ಕುರಿತ 6ನೇ ಅಂತಾರಾಷ್ಟ್ರೀಯ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಸಮ್ಮೇಳನ ಯಶಸ್ವಿಯಾಗಿ ಜರುಗಿತು.


ಅಜ್ಮಾನ್ ಆಡಳಿತಗಾರರ ನ್ಯಾಯಾಲಯದ ಅಧ್ಯಕ್ಷರಾದ ಗೌರವಾನ್ವಿತ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುಐಮಿ ಅವರ ಪೋಷಕತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ (GMU) ಕಾಲೇಜ್ ಆಫ್ ಹೆಲ್ತ್ ಸೈನ್ಸಸ್ ಮತ್ತು ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಹಾಸ್ಪಿಟಲ್ (TPTRH) ಜಂಟಿಯಾಗಿ ಆಯೋಜಿಸಿದ್ದ ಈ ಸಿಎಂಇ-ಮಾನ್ಯತೆ ಪಡೆದ (8 ಸಿಎಂಇ ಗಂಟೆಗಳು) ಸಮ್ಮೇಳನದಲ್ಲಿ ಯುಎಇ, ಜಿಸಿಸಿ ಮತ್ತು ಇತರ ದೇಶಗಳ ಫಿಸಿಯೋಥೆರಪಿಸ್ಟ್‌ಗಳು, ಆರ್ಥೋ ಪೇಡಿಕ್ ಮತ್ತು ನರರೋಗ ತಜ್ಞರು, ಆಕ್ಯುಪೇಷನಲ್ ಮತ್ತು ಸ್ಪೀಚ್ ಥೆರಪಿಸ್ಟ್‌ಗಳು, ಶಿಕ್ಷಣತಜ್ಞರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಹೊಸ ಪುನರ್ವಸತಿ ಕೇಂದ್ರಗಳು ಮತ್ತು ಸಾಮರ್ಥ್ಯ ಹೆಚ್ಚಳ:

ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ತುಂಬೆ ಗ್ರೂಪ್‌ನ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಶ್ರೀ ಅಕ್ಬರ್ ಮೊಯ್ದಿನ್ ತುಂಬೆ ಅವರು, "ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆಯ ಸಾಮರ್ಥ್ಯವನ್ನು ಶೇ. 30ರಷ್ಟು ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ" ಎಂದು ತಿಳಿಸಿದರು.


ಚಿಕಿತ್ಸಾ ಕ್ಷೇತ್ರಗಳ ವಿಸ್ತರಣೆ: ಚಿಕಿತ್ಸಾ ಪ್ರದೇಶಗಳ ಸಂಖ್ಯೆಯನ್ನು 27 ರಿಂದ 39 ಕ್ಕೆ ಮತ್ತು ಚಿಕಿತ್ಸಾ ಹಾಸಿಗೆಗಳ ಸಂಖ್ಯೆಯನ್ನು 36 ರಿಂದ 48 ಕ್ಕೆ ಹೆಚ್ಚಿಸಲಾಗುತ್ತಿದೆ. ವಿಶೇಷ ವಲಯಗಳು: 6 ಹೊಸ ಹೊರಾಂಗಣ ಹಾಗೂ ಚಿಕಿತ್ಸಕ ಪ್ರದೇಶಗಳನ್ನು ಸೇರಿಸಲಾಗುತ್ತಿದ್ದು, 5 ಮೀಸಲಾದ ಚಿಕಿತ್ಸಾ ವಲಯಗಳು ಮತ್ತು 7 ವಿಶೇಷ ಚಿಕಿತ್ಸಾ ಪ್ರದೇಶಗಳನ್ನು ವಿಸ್ತರಿಸಲಾಗುತ್ತಿದೆ.


ಆಧುನಿಕ ತಂತ್ರಜ್ಞಾನ: ನಡಿಗೆ ತರಬೇತಿಗಾಗಿ 'GPARM / MOTUS Gait Trainer', ನೋವು ನಿವಾರಣೆ ಹಾಗೂ ಕಾಯಿಲೆ ವಾಸಿಮಾಡಲು 'MLS Robotic Laser Therapy', ಮಾತು ಮತ್ತು ಶ್ರವಣ ವಿಶ್ಲೇಷಣೆಗೆ 'Robotic Moxibustion and 3D Nasometry' ಹಾಗೂ ಮಕ್ಕಳಿಗೆ ಆಟದ ಮಾದರಿಯಲ್ಲಿ ತರಬೇತಿ ನೀಡಲು 'AR/VR Augmented Paediatric Gait Training' ನಂತಹ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದೆ.


ದೇಶದಲ್ಲೇ ಅತ್ಯಂತ ಮುಂದುವರಿದ 'ನಂಬರ್ ಒನ್' ಪುನರ್ವಸತಿ ಕೇಂದ್ರವಾಗಿ TPTRH ಅನ್ನು ರೂಪಿಸುವುದು ಇದರ ಮುಖ್ಯ ಗುರಿಯಾಗಿದೆ. ಇದೇ ವೇಳೆ, ತುಂಬೆ ಗ್ರೂಪ್‌ನ ವಿಸ್ತರಣಾ ಯೋಜನೆಯ ಭಾಗವಾಗಿ ದುಬೈ, ಉಮ್ ಅಲ್ ಖುವೈನ್ ಮತ್ತು ಫುಜೈರಾ ನಗರಗಳಲ್ಲಿಯೂ ಹೊಸ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಡಾ. ತುಂಬೆ ಮೊಯ್ದಿನ್ ಘೋಷಿಸಿದರು. ಇದು ಯುಎಇಯಾದ್ಯಂತ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸುವುದಲ್ಲದೆ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಆರೋಗ್ಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಕಲಿಕೆ ಮತ್ತು ತರಬೇತಿಗೆ ನೆರವಾಗಲಿದೆ.


ಕರ್ನಾಟಕದ ಪ್ರೊ. ಯು. ಟಿ. ಇಫ್ತಿಯಾರ್ ಫರೀದ್‌ಗೆ ಗೌರವ:

ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ, ಕರ್ನಾಟಕದ ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಅಂಡ್ ಹೆಲ್ತ್‌ಕೇರ್ ಕೌನ್ಸಿಲ್‌ನ ಅಧ್ಯಕ್ಷರಾದ ಪ್ರೊ. ಯು. ಟಿ. ಇಫ್ತಿಯಾರ್ ಫರೀದ್ ಅವರಿಗೆ ‘ಸ್ಟಾರ್ ಆಫ್ ದಿ ಇಯರ್ ಅವಾರ್ಡ್ 2026’ ನೀಡಿ ಗೌರವಿಸಲಾಯಿತು. ಅಲೈಡ್ ಹೆಲ್ತ್ ಮತ್ತು ಪುನರ್ವಸತಿ ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಸುದೀರ್ಘ ನಾಯಕತ್ವ ಮತ್ತು ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.


ಇವರೊಂದಿಗೆ ದುಬೈ ಕ್ಲಬ್ ಫಾರ್ ಪೀಪಲ್ ಆಫ್ ಡಿಟರ್ಮಿನೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಇ. ಮಜೀದ್ ಅಲ್ ಉಸೈಮಿ, ಎಮಿರೇಟ್ಸ್ ಫಿಸಿಯೋಥೆರಪಿ ಅಸೋಸಿಯೇಷನ್ ಅಧ್ಯಕ್ಷೆ ಶ್ರೀಮತಿ ನೈಮಾ ಸಲೇಹ್, ಓಮನ್ ಫಿಸಿಕಲ್ ಥೆರಪಿ ಅಸೋಸಿಯೇಷನ್‌ನ ಡಾ. ಅಹಮದ್ ಅಲ್ ಖರುಸಿ ಸೇರಿದಂತೆ ಪುನರ್ವಸತಿ ಕ್ಷೇತ್ರದಲ್ಲಿ ನಾವೀನ್ಯತೆ ಮೆರೆದ 26 ಪ್ರಮುಖ ನಾಯಕರು ಮತ್ತು ಸಂಸ್ಥೆಗಳಿಗೆ 'ಇನ್ನೋವೇಶನ್ ಇನ್ ರಿಹ್ಯಾಬಿಲಿಟೇಶನ್ ಅವಾರ್ಡ್ಸ್ 2026' ಪ್ರದಾನ ಮಾಡಲಾಯಿತು.


(ಪ್ರಸ್ತುತ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕಾಲೇಜ್ ಆಫ್ ಹೆಲ್ತ್ ಸೈನ್ಸಸ್‌ನಲ್ಲಿ ಪ್ರವೇಶ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ www.gmu.ac.ae ಗೆ ಭೇಟಿ ನೀಡಬಹುದು.)

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top