ಕನ್ನಡದಲ್ಲಿ ನವದುರ್ಗಾ ನಮನ

Shreya Hegde
0




(ನವದುರ್ಗಾ ಸ್ತೋತ್ರ)

ಪ್ರಥಮಂ ಶೈಲಪುತ್ರೀ ಚ 

ದ್ವಿತೀಯಂ ಬ್ರಹ್ಮಚಾರಿಣಿ |

ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||

ಪಂಚಮಂ ಸ್ಕಂದಮಾತೇತಿ 

ಷಷ್ಠಂ ಕಾತ್ಯಾಯಿನೀತಿ ಚ |

ಸಪ್ತಮಂ ಕಾಲರಾತ್ರಿಶ್ಚ 

ಮಹಾಗೌರೀತಿ ಚಾಷ್ಟಮಮ್ ||

ನವಮಂ ಸಿದ್ಧಿಧಾತ್ರೀ ಚ

ನವದುರ್ಗಾಃ ಪ್ರಕೀರ್ತಿತಾಃ || 


ನವದುರ್ಗಾ ನಮನ

ನವಮಿಯ ದಿನ ದಿನ ನವ ರೂಪವ ತಾಳುವ|

ನವಶಕ್ತಿ ಸ್ವರೂಪಿಣಿ ದುರ್ಗಾ ಮಾತೇ ||

ಭವತಾರಿಣಿ ಭಯ ಹಾರಿಣಿ ದುರ್ಗೇ ದೇವಿ ನಮೋಸ್ತುತೇ|

ಸುವರ್ಣ ಶೋಭಿತೆ ಆದ್ಯಂತ ರಹಿತೆ ದುರ್ಗಾಂಬಿಕೆಯೇ ನಮೋ ನಮೋ ||ಪಲ್ಲ||


ದಕ್ಷನ ಕುವರಿ ಮರುಜನ್ಮವ ಪಡೆಯುತ

ಪರ್ವತ ಮೇನೆಯರಿಗುದಿಸಿ ನೀ ಬಂದೆ |

ವೃಷಭ ವಾಹಿನಿ ವರ ತ್ರಿಶೂಲ ಧಾರಿಣಿ

ಶೈಲಪುತ್ರಿಯೇ ನಿನಗೆ ಪ್ರಥಮ ವಂದನೆ ||1||


ಶಿವನನು ವರಿಸುವ ದೃಢ ಭಾವವ ಹೊಂದಿದೆ

ಕಡುತಪ ಗೈದ ದೇವಿ ಅಪರ್ಣೆಯೇ |

ಜಪಮಾಲಾಧರೆ ಕರ ಕಮಂಡಲ ವಿಭೂಷಿತೆ 

ಬ್ರಹ್ಮಚಾರಿಣೀ ತಪಶ್ಚಾರಿಣೀ ದುರ್ಗೇ ಉಮಾಂಕಿತೇ ||2||


ಸುವರ್ಣ ವರಾನನೇ ದಶಭುಜೆ ಶಂಕರಿ

ಸಿಂಹ ವಾಹಿನಿ ಸುಕಂಠೇ ಪ್ರಚಂಡ ರೂಪಿಣಿ |

ಘಂಟಾರ್ಧ ಚಂದಿರ ತಿಲಕೇ ಖಡ್ಗಧಾರಿಣಿ

ಚಂದ್ರಘಂಟಾ ದೇವಿ ದೈತ್ಯ  ಸಂಹಾರಿಣೀ ||3||


ಆದಿಮಾಯೆ ಬ್ರಹ್ಮಾಂಡ ಭರಿತೆ ಜಗನ್ಮಾತೆ

ವೇದೋಕ್ತೆ ಸುರಾಸಂಪೂರ್ಣ ಕಲಶ ಹಸ್ತೇ|

ಅಷ್ಟ ಭುಜಾ ಸುಶೋಭಿತೆ ಧನುರ್ಬಾಣ ಚಕ್ರಧರೆ

ಕೂಷ್ಮಾಂಡಾ ದೇವಿ ಕುಕ್ಷಿಯೊಳಖಿಲ ತೇಜೋಮಯೆ ||4||


 ಪದ್ಮಾಸನಾ ದೇವಿ ಸೂರ್ಯಮಂಡಲ ಸ್ಥಿತೇ

ಸುರಾಸುರ ವಂದಿತ ಕರೇ ಕುಮಾರ ಜನನೀ|

ಕಮಲ ಪುಷ್ಪಧಾರಿಣಿ ವರದ ಹಸ್ತೇ

ಸಿಂಹವಾಹಿನಿ ವಂದೇ ಸ್ಕಂದಮಾತೆ ||5||


ಕಾತ್ಯಗೋತ್ರ ಭವೆ ಪರಮ ಋಷಿ ವರದೆ

ತ್ರಿಮೂರ್ತಿ ತೇಜಪುಂಜೋದ್ಭವೆ ರಮೆ |

ಶಾರ್ದೂಲ ಸಿಂಹಾಸನೇ ದಾನವ ಘಾತಿನಿ

ಕಾತ್ಯಾಯನೀ ದೇವಿ ಚಾಮುಂಡಿ ಮಹಿಷ ಮರ್ದಿನಿ ||6||


ಕಾಳೀ ಕರಾಳೀ ಸರ್ವ ಲೋಕ ಭಯಂಕರೀ

ಏಕವೇಣೀ ಜಪಾಕರ್ಣೇ ತ್ರಿನೇತ್ರೇ ಶುಭಂಕರೀ|

ರುಂಡ ಮಾಲಿನಿ ಜ್ವಾಲಾಗ್ನಿ ಹಸ್ತೇ ಭೂತ ಪ್ರೇತ ನಿವಾರಿಣೀ

ಕಾಲರಾತ್ರಿರ್ಮಹಾರಾತ್ರಿ ದೈತ್ಯ ದಾನವ ಸಂಹಾರಿಣೀ ||7||


ಅಷ್ಟವರ್ಷಾ ಭವೇದ್  ಗೌರಿ ಶಂಕರಿ ಸರ್ವೇಶ್ವರೀ

ಶ್ವೇತ ವೃಷಭ ಸಮಾರೂಢೇ ಶೂಲ ಪಾಣಿ ಚತುರ್ಭುಜೇ |

ತಪೋಜ್ವಲ ವರದಂ ಶಂಭುಂ ಗಂಗಾ ಸಲಿಲ ಸಂಶುದ್ಧೇ

ಮಹಾ ಗೌರಿ ಅಭಯ ಹಸ್ತೇ ಸಕಲ ಪಾಪ ವಿದೂರೇ ||8||


ಸಿದ್ಧ ಸಾಧ್ಯ ಗಂಧರ್ವ ಯಕ್ಷ ಸಂಪೂಜಿತೇ

ಅಣಿಮಾದ್ಯಷ್ಟ ಸಿದ್ಧಿಪ್ರದಾಯಿನೇ ಮಾತೇ|

ಕಮಲಾಸನೇ ದೇವಿ ಶಂಕಚಕ್ರ ಗದಾಧರೇ

ಸಿದ್ದಿಧಾತ್ರಿ ಮಹಾಮಾಯೇ ಸರ್ವ ಸಿದ್ಧಿ ಸಮನ್ವಿತೇ ||9||


ಮಂಗಲಂ

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ| 

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋsಸ್ತುತೇ||


- ಭಾಸ್ಕರ ರೈ ಕುಕ್ಕುವಳ್ಳಿ


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top