'ಕುಡ್ಲ ರಥ' ನೂತನ ಜಾಲತಾಣ: ಮಂಗಳೂರಿನಲ್ಲಿ ಇಂದು ಅನಾವರಣ

Upayuktha
0


ಮಂಗಳೂರು: ಪ್ರಸಿದ್ಧ ಟ್ರಾವೆಲ್ ಪಾರ್ಟ್ನರ್ ಸಂಸ್ಥೆಯಾದ 'ಕುಡ್ಲ ರಥ'ದ ನೂತನ ಜಾಲತಾಣ ಅನಾವರಣ ಕಾರ್ಯಕ್ರಮವು ಇಂದು, ಅಕ್ಟೋಬರ್ 14, 2026ರಂದು ಮಂಗಳೂರಿನಲ್ಲಿ ನೆರವೇರಲಿದೆ. ಮಂಗಳೂರಿನ ಬಂದಲೆ ಪಚ್ಚನಾಡಿಯಲ್ಲಿರುವ ಶ್ರೀಮಂತರಾಜ ಗುಳಿಗ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ ಈ ಉದ್ಘಾಟನಾ ಸಮಾರಂಭ ಜರುಗಲಿದೆ.


ಈ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರ ಸತೀಶ್ ಕುಂಪಲ ಅವರು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರಾದ ಮಂಜುನಾಥ ಉಡುಪ ಕುಂಟಾರು ಅವರು ಆಶೀರ್ವಚನ ನೀಡಲಿದ್ದಾರೆ. 


ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಮುಖ ವಕೀಲರಾದ ಮಹಮ್ಮದ್ ಅಸ್ಗರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಾಗೆಯೇ ಸರ್ವ ಕಾಲೇಜು ಸಂಘದ ಅಧ್ಯಕ್ಷರಾದ ಸಾತ್ವಿಕ್ ಮುಳಿಯ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.


ಸಂಸ್ಥೆಯ ಈ ಹೊಸ ಪ್ರಯಾಣದ ಹೆಜ್ಜೆಗೆ ಮತ್ತು kudlaratha.com ನೂತನ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top