ಕೆ.ಆರ್. ಪುರಂ ಪಥಮ ದರ್ಜೆ ಕಾಲೇಜಿನ ಅಶೋಕ್ ಕೆ.ಎಲ್ ರಿಗೆ ಡಾಕ್ಟರೇಟ್ ಪದವಿ

Shreya Hegde
0



ಬೆಂಗಳೂರು: ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶೋಕ್ ಕೆ.ಎಲ್. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


ಶೇಷಾದ್ರಿಪುರಂ ಕಾಲೇಜಿನ ವಾಣಿಜ್ಯ ವಿಭಾಗದ ಡಾ. ವಿನಯ್ ಎಸ್. ಅವರ ಮಾರ್ಗದರ್ಶನದಲ್ಲಿ ಅಶೋಕ್ ಅವರು ಮಂಡಿಸಿದ  'ಭಾರತದಲ್ಲಿ ನವಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್ (ಯುಎಂಎಎನ್ ಜಿ) ಅನುಷ್ಠಾನದ ಒಂದು ಪ್ರಾಯೋಗಿಕ ಅಧ್ಯಯನ ( An Empirical Study of Implementation of Unified Mobile Application for New Age Governance (UMANG) in India) ಎಂಬ ವಿಷಯದ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.


 ಸಾರ್ವಜನಿಕ ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವಲ್ಲಿ ಯುಎಂಎಎನ್ ಜಿ ಅಪ್ಲಿಕೇಶನ್‌ನ ಪಾತ್ರ ಹಾಗೂ ಇ-ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯ ಕುರಿತು ಈ ಸಂಶೋಧನೆ ಬೆಳಕು ಚೆಲ್ಲುತ್ತದೆ. ಅಶೋಕ್ ಕೆ.ಎಲ್. ಅವರ ಈ ಶೈಕ್ಷಣಿಕ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಸಹೋದ್ಯೋಗಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ವೀಕ್ಷಣೆಗಳು: 215

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top