ಭಾರತದ ಯುವಜನತೆ ಅಪಾಯದಲ್ಲಿದೆಯೇ…?

Shreya Hegde
0


ಇರಾನಿಯನ್ನರು ಅಮೆರಿಕವನ್ನು "ರಾಕ್ಷಸರ ನಾಡು" ಕರೆಯುತ್ತಾರೆ. ಯಾಕೆಂದು ಗೊತ್ತೇನು? ಒಂದು ಕಾಲದಲ್ಲಿ, ಇರಾನಿನ ತೈಲ ಸಂಪನ್ಮೂಲದ ಮೇಲೆ ಬ್ರಿಟನ್ ಸಂಪೂರ್ಣ ಹಿಡಿತವನ್ನು ಹೊಂದಿತ್ತು. ಎಷ್ಟೆಂದರೆ, ಲಾಭದ ಶೇಕಡಾ 84ರಷ್ಟು ಬ್ರಿಟನ್ನಿಗೆ ಮತ್ತು ಕೇವಲ ಶೇಕಡಾ 16ರಷ್ಟು ಇರಾನಿಗೆ ಹೋಗುತ್ತಿತ್ತು. 1951ರಲ್ಲಿ ಮೊಹಮ್ಮದ್ ಮೊಸಾದೆಗ್ ಎಂಬ ನಿಜವಾದ ದೇಶಭಕ್ತ ಇರಾನಿನ ಪ್ರಧಾನ ಮಂತ್ರಿಯಾದರು. ಇರಾನಿನ ತೈಲ ಸಂಪನ್ಮೂಲಗಳ ಮೇಲೆ ವಿದೇಶಿ ಕಂಪನಿಗಳ ನಿಯಂತ್ರಣವಿರುವುದು ಅವರಿಗೆ ಇಷ್ಟವಾಗಲಿಲ್ಲ. ಅದನ್ನು ಅವರು ಒಪ್ಪಲಿಲ್ಲ. ಮಾರ್ಚ್ 15, 1951ರಂದು ಮೊಸಾದೆಗ್ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುವ ಮಸೂದೆಯನ್ನು ಮಂಡಿಸಿದರು. ಆ ಮಸೂದೆ ಬಹುದೊಡ್ದ ಬಹುಮತದೊಂದಿಗೆ ಅಂಗೀಕರಿಸಲ್ಪಟ್ಟಿತು. 'ಟೈಮ್' ನಿಯತಕಾಲಿಕವು ಅವರನ್ನು 1951ರ "ಮ್ಯಾನ್ ಆಫ್ ದಿ ಇಯರ್" (ವರ್ಷದ ವ್ಯಕ್ತಿ) ಎಂದು ಹೆಸರಿಸಿತು ಕೂಡ!


ಆದರೆ ಈ ನಿರ್ಧಾರವು ಬ್ರಿಟನ್ನಿನ ಹಿತಾಸಕ್ತಿಗಳಿಗೆ ಧಕ್ಕೆ ತಂದಿತು. ಲಂಚ, ಹತ್ಯೆಯ ಪ್ರಯತ್ನಗಳು ಮತ್ತು ಮಿಲಿಟರಿ ದಂಗೆಗಳ ಮೂಲಕ ಮೊಸಾದೆಗ್ ಅವರನ್ನು ಪದಚ್ಯುತಗೊಳಿಸಲು ಅವರು ಪ್ರಯತ್ನಿಸಿದರು, ಆದರೆ ಇರಾನಿನ ದೂರದೃಷ್ಟಿ ಮತ್ತು ಜನಪ್ರಿಯತೆಯು ಆ ಯೋಜನೆಗಳನ್ನು ವಿಫಲಗೊಳಿಸಿತು. ಬ್ರಿಟನ್ ತಾನು ವಿಫಲವಾದಾಗ ತನಗೆ ಸಹಾಯ ಮಾಡುವಂತೆ ಅಮೆರಿಕದ ಮೊರೆ ಹೋಯಿತು. ಮೊಸಾದೆಗ್ ಅವರನ್ನು ಉರುಳಿಸಲು ಸಿಐಎ (CIA- CIVILIAN FOREIGN INTELLIGENCE SERVICE OF THE UNITED STATES GOVERNMENT) 1 ಮಿಲಿಯನ್ ಡಾಲರ್ (48 lakh) ಅನುದಾನ ನೀಡಿತು. ಸಾರ್ವಜನಿಕ ಅಸಮಾಧಾನವನ್ನು ಸೃಷ್ಟಿಸುವುದು, ಮಾಧ್ಯಮ ಮತ್ತು ಧಾರ್ಮಿಕ ಮುಖಂಡರಿಗೆ ಹಣ ನೀಡಿ ತಮ್ಮ ಪರ nilluvaMte ಮಾಡಿಕೊಳ್ಳುವುದು ಮತ್ತು ಅಂತಿಮವಾಗಿ ಭ್ರಷ್ಟ ಸಂಸದರ ಮೂಲಕ ಸರ್ಕಾರವನ್ನು ಉರುಳಿಸುವುದು ಈ ಯೋಜನೆಯ ಭಾಗವಾಗಿತ್ತು.


ಮೊಸಾದೆಗ್ ವಿರೋಧಿ ವಾತಾವರಣವನ್ನು ಸೃಷ್ಟಿಸಲು ಪತ್ರಕರ್ತರು, ಸಂಪಾದಕರು ಮತ್ತು ಧರ್ಮಗುರುಗಳಿಗೆ 631 ಮಿಲಿಯನ್ ಡಾಲರ್ (sumaaru 300 kotigintaloo heccu ನೀಡಲಾಯಿತು. ನಕಲಿ ಪ್ರತಿಭಟನೆಗಳಲ್ಲಿ ಭಾಗವಹಿಸಲು ಸಾವಿರಾರು ಜನರಿಗೆ ಹಣ ಪಾವತಿಸಲಾಯಿತು. ಜಾಗತಿಕ ಮಾಧ್ಯಮಗಳು ಕೂಡ ಅಮೆರಿಕವನ್ನು ಬೆಂಬಲಿಸಲು ಪ್ರಾರಂಭಿಸಿದವು. ಇಂದು ಮೋದಿಯವರ ವೈಯಕ್ತಿಕ ಜೀವನದ ಮೇಲೆ ನಡೆಯುವ ದಾಳಿಗಳಂತೆಯೇ, ಮೊಸಾದೆಗ್ ಅವರ ಮೇಲೂ ವೈಯಕ್ತಿಕ ವ್ಯಂಗ್ಯಚಿತ್ರಗಳ ಮೂಲಕ ದಾಳಿ ನಡೆಸಲಾಯಿತು. ಮೊಸಾದೆಗ್ ಅವರನ್ನು ಸರ್ವಾಧಿಕಾರಿ ಎಂದು ಕರೆಯಲಾಯಿತು. ಸಂಸತ್ತಿನ ಮೂಲಕ ತಮ್ಮ ಸರ್ಕಾರವನ್ನು ಉರುಳಿಸಲಾಗುವುದು ಎಂದು ಅರಿವಾದಾಗ, ಮೊಸಾದೆಗ್ ಅವರು ಸಂಸತ್ತನ್ನು ವಿಸರ್ಜಿಸಿಬಿಟ್ಟರು. ಮೊಸಾದೆಗ್ ಅವರನ್ನು ಪದಚ್ಯುತಗೊಳಿಸುವಂತೆ ಅಮೆರಿಕವು ಷಾ (ಇರಾನಿನ ಅಂದಿನ ದೊರೆ) ಮೇಲೆ ಬಲವಾದ ಒತ್ತಡ ಹೇರಿತು. ಮತ್ತು ನಕಲಿ ಪ್ರತಿಭಟನೆಗಳ ಅನಂತರ, ಮೊಸಾದೆಗ್ ಶರಣಾದರು. ಅವರನ್ನು ಜೈಲಿನಲ್ಲಿ ಇರಿಸಲಾಯಿತು ಮತ್ತುಆನಂತರ ಗೃಹಬಂಧನದಲ್ಲಿಡಲಾಯಿತು.


ಆನಂತರ, ಇರಾನಿನ ತೈಲವನ್ನು ಅಮೆರಿಕ (40%), ಇಂಗ್ಲೆಂಡ್ (40%) ಮತ್ತು ಇತರ ಯುರೋಪಿಯನ್ ದೇಶಗಳ (20%) ನಡುವೆ ಹಂಚಿಕೊಳ್ಳಲಾಯಿತು. ತೀವ್ರಗಾಮಿ ಖೊಮೇನಿ ಅಧಿಕಾರಕ್ಕೆ ಬಂದಮೇಲೆ ಸಾಮಾನ್ಯ ಇರಾನಿಯನ್ನರ ಸ್ಥಿತಿ ಮತ್ತಷ್ಟು ಹದಗೆಟ್ಟಿತು.  ಇರಾನಿನ ಸಂಪನ್ಮೂಲಗಳ ಮೇಲೆ ವಿದೇಶಿಯರ ಬದಲಿಗೆ ಸ್ವದೇಶಿ ಕಂಪನಿಗಳ ನಿಯಂತ್ರಣವಿರಬೇಕೆಂದು ಬಯಸಿದ್ದೇ ಮೊಸಾದೆಗ್ ಮಾಡಿದ 'ಅಪರಾಧ'ವಾಗಿತ್ತು. ಒಂದು ವೇಳೆ ಮೊಸಾದೆಗ್‌ಗೆ ಬೆಂಬಲ ಸಿಕ್ಕಿದ್ದರೆ, 1955ರ ವೇಳೆಗೆ ಇರಾನ್ ಸಂಪೂರ್ಣ ಪ್ರಜಾಪ್ರಭುತ್ವ ರಾಷ್ಟ್ರವಾಗಬಹುದಿತ್ತು. ಆದರೆ ಪತ್ರಕರ್ತರು, ಸಂಪಾದಕರು, ಸಂಸದರು ಮತ್ತು ಪ್ರತಿಭಟನಾಕಾರರು ಹಣಕ್ಕಾಗಿ ತಮ್ಮ ದೇಶದ ಭವಿಷ್ಯವನ್ನೇ ಮಾರಾಟ ಮಾಡಿಕೊಂಡರು. ಅದಕ್ಕಾಗಿಯೇ ಅಮೆರಿಕನ್ನರನ್ನು "ರಾಕ್ಷಸರ ನಾಡು" (LAND OF THE DEVILS) ಎಂದು ಕರೆಯಲಾಗುತ್ತದೆ.


 ಅಮೆರಿಕಾದ ದೂರ್ತತನವೇ ಜಗತ್ತಿನ ಹಲವು ರಾಷ್ಟ್ರಗಳನ್ನು ಬರ್ಬಾದು ಮಾಡಿದೆ. ರಾಷ್ಟ್ರಗಳ ನಾಗರಿಕತೆ, ಸಂಸ್ಕೃತಿಯನ್ನು ನಾಶಗೊಳಿಸಿದ ಅಮೆರಿಕಕ್ಕೆ ಈಗ ಭಾರತದ ಮೇಲೆ ಕಣ್ಣು ಬಿದ್ದಿದೆ. ಭಾರತವನ್ನು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುವುದಕ್ಕಾಗಿ ಅದು ಯಾವ ಹಂತಕ್ಕೂ ಇಳಿಯುತ್ತದೆಂಬುದನ್ನು ಅದು ಇರಾನಿನ ಮೇಲೆ ಮಾಡಿದ, ಮಾಡುತ್ತಿರುವ ವಿಧ್ವಂಸಕ ಕೃತ್ಯಗಳನ್ನು ಜಗತ್ತು ನೋಡುತ್ತಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ಏನಾದರೂ ಸಂಭವಿಸಿದರೆ ಅದು ಭಾರತಕ್ಕಂತೂ ಸಮಸ್ಯೆಯಾಗುತ್ತದೆ ಎಂಬುದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ.


ಪಕ್ಕದ ಬಾಂಗ್ಲಾದೇಶದಲ್ಲಿ ಆದ ರಾಜಕೀಯ ತಲ್ಲಣಗಳು, ಆಡಳಿತ ಯಂತ್ರದ ಪತನ ಜಗತ್ತನ್ನು ಬೆಚ್ಚಿಬೀಳಿಸಿತು. ಆದರೆ, ಅದನ್ನು ಸೂಕ್ಷ್ಮವಾಗಿಸಿಕೊಂಡರೆ, ಅದರ ಹಿಂದೆ ನರೇಟಿವ್ ಬಿಲ್ಡ್ ಆಗಿರುವ ರೀತಿ ಮತ್ತು ಸಂಸ್ಥೆಗಳ ಮೇಲಿನ ಕುಸಿತದ ಮಾದರಿಗಳು ಕಾಣುತ್ತವೆ. ಸಾರ್ವಜನಿಕ ಸೇವಾ ಮೀಸಲಾತಿಯ ವಿರೋಧದಿಂದಿಗೆ ಆರಂಭವಾದ ಪ್ರತಿಭಟನೆ  ಗಿಂತ ಮುಂಚೆ ಚುನಾವಣಾ ಆಯೋಗದ ಮೇಲೆ ಪಾರದರ್ಶಕತೆಯ ಮೇಲೆ ಸತತವಾಗಿ ಪ್ರಶ್ನೆಗಳನ್ನು ಎತ್ತಲಾಗಿತ್ತು. ಚುನಾವಣೆಗಳು ಅಕ್ರಮ ಎಂಬುದನ್ನು ಜನರಲ್ಲಿ ಹರಡಲಾಯಿತು. ಸರ್ಕಾರದ ವಿರುದ್ಧ ಜೆನ್ ಝೀ ಸಮುದಾಯವನ್ನು ಬೀದಿಗೆ ತರಲಾಯಿತು. ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳಲ್ಲಿ ದೊಡ್ದ ಪ್ರಮಾಣದಲ್ಲಿ ಬಿಂಬಿಸಿ ಆಯೋಗವನ್ನೇ ಅನುಮಾನಿಸುವಂತೆ ಮಾಡಿ ಅರಾಜಕತೆಯನ್ನು ಹುಟ್ಟಿಸಿ ಆಗಬಾರದ್ದು ಆಗಿಹೋಯಿತು. ಕಡಿವಾಣವಿಲ್ಲದ ಹುಚ್ಚು ಕುದುರೆಯಂತಾಗಿ ಜೆನ್ ಝೀ ಯುವ ಸಮುದಾಯ ದೇಶವನ್ನು ಬರ್ಬಾದುಗೊಳಿಸಿತು.       


ಸದ್ಯ ಭಾರತವೂ ಅಂಥದ್ದೇ ಒಂದು ನಿರ್ಣಾಯಕ ಘಟ್ಟದಲ್ಲಿದೆ. ನೇಪಾಳ ಮತ್ತು ಬಾಂಗ್ಲಾದಲ್ಲಿ ಆದ ರಾಜಕೀಯ ದೊಂಬಿ, ರೈತರ ಪ್ರತಿಭಟನೆ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ತ್ರಿವಳಿ ತಲಾಖ್ ನಿಷೇಧ, ಮಣಿಪುರ ದಂಗೆ, ನೋಟು ಬ್ಯಾನ್, ಗೋಹತ್ಯೆ ನಿಷೇಧ, ಆಪರೇಷನ್ ಸಿಂಧೂರ್ ಅವಹೇಳನ, ಪ್ರಧಾನಿ ನಿಂದನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಲು ಪ್ರಯತ್ನಿಸಿದ ನೀಟ್ ವಿಚಾರಕ್ಕೆ ಸಂಬಂಧಿಸಿದ ಜಿರಳೆ ಚೀರಾಟ, ನಕಲಿ ವಿಷಯಗಳ ಪ್ರಚಾರ, ಸುಳ್ಳು ಚಳವಳಿಗಳು, ತಪ್ಪಾದ ಅಂಕಿಅಂಶಗಳು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವುದು, ತುಷ್ಟೀಕರಣದ ರಾಜಕೀಯ, ಜಾತಿ ರಾಜಕೀಯ, ಹಿಂದು ಅವಹೇಳನ, ಸಾಂಸ್ಥಿಕ ಸಂಸ್ಥೆಗಳ ಅವಹೇಳನ ಮತ್ತು ಅವುಗಳ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ನಾಶಗೊಳಿಸುವ ಯತ್ನ, ವಿದೇಶಿ ದುಷ್ಟರೊಂದಿಗೆ ಸೇರಿಕೊಂಡು ದೇಶದಲ್ಲಿ ಆಂತರಿಕ ದೊಂಬಿಯೆಬ್ಬಿಸಲು ನಿರಂತರ ಪ್ರಯತ್ನ.. ಒಂದೇ ಎರಡೇ..? ನೂರಾರು ದೇಶವಿರೋಧಿ ಕುಕೃತ್ಯಗಳು ಮೋದಿ ಪ್ರಧಾನಿಯಾದಂದಿನಿಂದ ನಡೆಯುತ್ತಲೇ ಇವೆ. ಇವೆಲ್ಲವೂ ಭಾರತವನ್ನು ಮತ್ತೆ ವಿದೇಶಿ ನಿಯಂತ್ರಣಕ್ಕೆ ಒಳಪಡಿಸುವ ಆಳವಾದ ಪಿತೂರಿಯ ಭಾಗಗಳಾಗಿವೆ ಎಂಬುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ. ಒಂದೋ, ಆಡಳಿತ ಯಂತ್ರವನ್ನು ತಮಗೆ ಬೇಕಾದಂತೆ ನಿಯಂತ್ರಿಸುವ ಹುನ್ನಾರ ಅಥವಾ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಅರಾಜಕತೆಯನ್ನು ಹುಟ್ಟಿಸುವುದು- ಇದು ಪಬ್ಲಿಕ್ ಸೀಕ್ರೆಟ್ಟು.


ಇದು ಕೇವಲ ನೇಹಾ ಬೋರಾ ಅಥವಾ ಸಿಜೆಪಿ ಅಥವಾ ಇನ್ಯಾವುದೋ ವಿದ್ಯಾರ್ಥಿ ಯುವ ಸಮುದಾಯದ ಕಥೆಯಲ್ಲ, ಇದರ ಹಿಂದೆ ಬೇರೆಯದೇ ಆದ ಕಥೆಯಿದೆ! ಅದ್ಯಾವುದು ಗೊತ್ತೇನು? 2014ರಲ್ಲಿ ಮೋದಿ ಪ್ರಧಾನಿಯಾದ ದಿನಗಳಲ್ಲೇ ಅದಾನಿ ಪೋರ್ಟ್‌ನಲ್ಲಿ ಸರಿಸುಮಾರು 3000 ಕೋಟಿ ಬೆಲೆಬಾಳುವ ಅತಿದೊಡ್ಡ ಡ್ರಗ್ ಬಸ್ಟ್ ನಡೆಯುತ್ತದೆ. ಭಾರತೀಯ ನೌಕಾಪಡೆಯ ಪೋಲೀಸರು ಇದರ ಮೂಲದ ತನಿಖೆ ಆರಂಭಿಸುತ್ತಾರೆ. ಆಗ ಸಿಕ್ಕಿದ ಸತ್ಯವೇನೆಂದರೆ, ಪಾಕಿಸ್ತಾನ ಮೂಲದಿಂದ ಪಂಜಾಬ್ ಮೂಲಕ ಇಡೀ ದೇಶದ ಯುವಕರನ್ನು ಅಮಲಿನಲ್ಲಿ ತೇಲಿಸುವ ಮಾಸ್ಟರ್ ಪ್ಲಾನ್ ಅದಾಗಿತ್ತು ಎಂಬುದು!


ಇದಾದ ಅನಂತರ 2014ರಿಂದ ಇಲ್ಲಿಯವರೆಗೆ ಸುಮಾರು 71600 ಕೋಟಿಯಷ್ಟು ಡ್ರಗ್ಸನ್ನು ಭಾರತ ಸರ್ಕಾರ ಸೀಜ್ ಮಾಡದೇ ಇದ್ದಿದ್ದರೆ ಇವತ್ತು ಎಷ್ಟೋ ಲಕ್ಷಾಂತರ ಯುವಕರ ಪ್ರಾಣಕ್ಕೆ ಸಂಚಕಾರವಿತ್ತು. ಅದರಲ್ಲಿ ಎಂಟು ಮೇಜರ್ ಡ್ರಗ್ ಬಸ್ಟ್ ಗಳಿದ್ದವು. ಕಾಂಗ್ರೆಸ್ ಕಾಲದಲ್ಲಿ ಇಂಥ ಸುದ್ದಿ ಎಂದಾದರೂ ಕೇಳಿದ್ದೀರ? ಸಾಧ್ಯವೇ ಇಲ್ಲ. ಅಂದರೆ ಆಗಿನ ಆಡಳಿತ ಹಾಗಿತ್ತು. ಉತ್ತರ ಪ್ರದೇಶದ ಅತೀಕ್ ಅಹ್ಮದ್ ಎಂಬವನು ಡ್ರಗ್ ಹಾಗೂ ಖೋಟಾನೋಟಿನ ದಂಧೆಯನ್ನ  ರಾಜಾರೋಷವಾಗಿಯೇ ನಡೆಸುತ್ತಿದ್ದ. ಕೊನೆಯಲ್ಲಿ ಅವನನ್ನು ಮುಗಿಸಿಬಿಟ್ಟವು ಕಾಣದ ಕೈಗಳು.


ಯಾವಾಗ ಮೋದಿ ಸರ್ಕಾರ ಡ್ರಗ್ಸ್ ದಂಧೆಯ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡು ಭಾರತಕ್ಕೆ ಡ್ರಗ್ಸ್ ವಿದೇಶದಿಂದ ಬರುವುದನ್ನ ತಡೆಹಿಡಿಯಿತೋ, ಅಲ್ಲಿಂದಲೇ ನೇಹಾ ಬೋರಾಳಂಥ ಯುವ ಸಮುದಾಯಕ್ಕೆ ತಳಮಳ ಶುರುವಾಯಿತು. ಇಷ್ಟಕ್ಕೆ ನಿಂತಿದ್ದರೆ ಹೇಗೋ ಗಾಂಜಾದಿಂದ ಮ್ಯಾನೇಜ್ ಮಾಡಬಹುದಿತ್ತೇನೋ, ಆದರೆ, ಕೇಂದ್ರ ಸರ್ಕಾರ ಅದೇನೋ ಕಠಿಣ ತಿದ್ದುಪಡಿ ತಂದು 1985ರ NDPS (nacrotic drugs and psychotropic substances- ಮಾದಕ ದ್ರವ್ಯಗಳು ಮತ್ತು ಮನೋವಿಕೃತ ಪದಾರ್ಥಗಳ ಕಾಯಿದೆ) ಕಾಯ್ದೆಯನ್ನು ಇನ್ನಷ್ಟು ಕಠಿಣವಾಗಿಸಿತು. ಇದರಲ್ಲಿ ಗಾಂಜಾ ಕೂಡ ಕೊಕೇನ್, ಚರಸ್‌ಗಳ ಗುಂಪಿಗೆ ಸೇರಿತು. ಕೇವಲ ಸರಬುರಾಜು ಮಾಡುವವನು ಮಾತ್ರವಲ್ಲ ಸೇವಿಸುವವನು- ಇಬ್ಬರೂ ಸಮಾನ ತಪ್ಪಿತಸ್ಥರು. ಅಲ್ಲಿಗೆ ಯುವ ಸಮುದಾಯದ ಅಮಲಿಗೆ ಅಮಲೇರಿ ಬಿಟ್ಟಿತು!


ಇಂಥ ಪ್ರತಿಭಟನೆಗಳೆಲ್ಲ ಕೇವಲ ವಿದ್ಯಾರ್ಥಿಗಳಿಗೆ ಅಂತ ಅಂದುಕೊಳ್ಳುವುದೇ ಮೂರ್ಖತನ. ಭಾರತವನ್ನು ನಾಶಮಾಡುವ ಅಂತಾರಾಷ್ಟ್ರೀಯ ಮಟ್ಟದ ಬಹುದೊಡ್ದ ಅಜೆಂಡಾ ಇದರ ಹಿಂದಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವವರೆಲ್ಲರೂ ಬಹುಪಾಲು ಯುವ ಸಮುದಾಯಕ್ಕೆ ಸೇರಿದವರು. ಮಾದಕ ವ್ಯಸನದ ಅಮಲಿನಲ್ಲಿ ದೊಂಬಿಯೆಬ್ಬಿಸಿ ಹೇಗಾದರೂ ಮಾಡಿ ಒತ್ತಡ ತಂದು ಈ ಸರ್ಕಾರವನ್ನು ಕಿತ್ತೊಗೆದು, AAP ಅಥವಾ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದರೆ ಪಂಜಾಬಿನ ಮೂಲಕ ಡ್ರಗ್ ಸರಬುರಾಜನ್ನು ಸುಲಭಗೊಳಿಸಿಕೊಳ್ಳುವ ದುಷ್ಟ ಉಪಾಯವಿದೆ. FCRA ಬಿಲ್ ಜಾರಿಯಾದರೆ ಫಾರಿನ್ ಫಂಡ್ ನಿಲ್ಲುತ್ತೆ ಅನ್ನೋ ಕಾರಣಕ್ಕೆ ಇವರೆಲ್ಲ ರೊಚ್ಚಿಗೆದ್ದಿದ್ದಾರೆ ಎಂಬುದು ಸುಳ್ಳು. ದೇಶದಲ್ಲಿ ದೊಡ್ದಮಟ್ಟದ ಅರಾಜಕತೆಯನ್ನು ಎಬ್ಬಿಸುವ ವಿದೇಶಿ ಕೈವಾಡವಿದೆ. ಮಾದಕ ವಸ್ತುಗಳಿಂದ ದೇಶದ ಯುವ ಸಮುದಾಯವನ್ನ ಅಮಲಲ್ಲಿ ತೇಲಿಸಿ ದೇಶಕ್ಕೆ ಬೆಂಕಿ ಹಚ್ಚುವ ಅಜೆಂಡಾವೂ ದೊಡ್ಡಾಗಿಯೇ ಇದೆ. ಇದಕ್ಕೆ ಅಮೆರಿಕಾ, ಚೀಣಾ, ಪಾಕ್, ಬಾಂಗ್ಲಾದೇಶಗಳ ಸಂಪೂರ್ಣ ಮಸಲತ್ತಿದೆ. ಕಾರಣವಿಷ್ಟೆ: 2026ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಹುಮತದಲ್ಲಿ ಗೆಲ್ಲುತ್ತದೆಂಬ ಸಮೀಕ್ಷೆ. ಅದನ್ನು ಹೇಗಾದರೂ ಮಾಡಿ ತಡೆಯಬೇಕು. ಅದಕ್ಕಾಗಿ ಆಡಳಿತ ವಿರೋಧಿ ಅಲೆಯನ್ನು ದೇಶಾದ್ಯಂತ ಇಂಥ ದೊಂಬಿಗಳ ಮೂಲಕ ಪ್ರಚಾರ ಮಾಡುವುದು. ವಿದ್ಯಾರ್ಥಿ, ಚುನಾವಣಾ ಆಯೋಗ, ಎಸ್ ಐ ಆರ್,  ಸುಪ್ರೀಂಕೋರ್ಟ್, ನ್ಯಾಯಾಲಯ, ನ್ಯಾಯಾಧೀಶರು, ಕಾನೂನು, ಸಂವಿಧಾನ- ಇವೆಲ್ಲ ಇಂಥ ಅರಾಜಕತೆಯನ್ನು ಸೃಷ್ಟಿಸುವಲ್ಲಿ ಬಳಸುವ ಗುರಾಣಿಗಳು. 


ಈ ಕಾಲಘಟ್ಟದಲ್ಲಿ ದೇಶದ ಜನತೆ ತುಂಬಾ ಜಾಗರೂಕರಾಗಿರಬೇಕು. ಭ್ರಷ್ಟ ಮಾಧ್ಯಮಗಳ ಅಪಪ್ರಚಾರಕ್ಕೆ ಬಲಿಯಾಗಬಾರದು. ಪ್ರತಿಯೊಬ್ಬ ದೇಶಭಕ್ತರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದೊಂದಿಗೆ ದೃಢವಾಗಿ ನಿಲ್ಲಬೇಕು. ಇಲ್ಲದಿದ್ದರೆ, ಭಾರತವೂ ಇರಾನಿನಂತಹ ದುಃಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇಂದು, ಅನೇಕ ಜಾಗತಿಕ ಗುಪ್ತಚರ ಸಂಸ್ಥೆಗಳು ಮೋದಿ ಸರ್ಕಾರವನ್ನು ಉರುಳಿಸಲು ಭಾರತೀಯ ರಾಜಕಾರಣಿಗಳನ್ನು ತಮ್ಮ ಏಜೆಂಟರನ್ನಾಗಿ ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಯಾವ್ಯಾವುದೋ ಮಾರ್ಗದಲ್ಲಿ ದೇಶ ನಾಶಕ್ಕೆ ಇಳಿದಿದೆ. ಅಪ್ರತಿಮವಾಗಿ ಭಾರತ ಅಭಿವೃದ್ಧಿ ಹೊಂದುತ್ತಿರುವುದು ಅಮೆರಿಕಾ, ಚೀಣಾ, ಪಾಕ್ ನಂಥ ದೇಶಗಳಿಗೆ ಸಹಿಸಲಾಗುತ್ತಿಲ್ಲ. ನಮ್ಮ ಭವಿಷ್ಯವನ್ನು  ನಾವೇ ರೂಪಿಸಿಕೊಳ್ಳಬೇಕಷ್ಟೆ. 'ನ್ಯೂಯಾರ್ಕ್ ಟೈಮ್ಸ್' ಮಹಮ್ಮದ್ ಮೊಸಾದೆಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿತ್ತು. ಭಾರತದ ದೂರದೃಷ್ಟಿಯ ನಾಯಕ, ಸ್ವದೇಶಿ ಚಿಂತಕ ಮೋದಿಯವರನ್ನು 'ಟೈಮ್' ಮ್ಯಾಗಜಿನ್ "ವಿಭಜಕ" (DIVIDER-IN-CHIEF) ಎನ್ನುತ್ತಿದೆ. ಇದು ಕಾಕತಾಳೀಯವಲ್ಲ! ಇದೊಂದು ಕುತಂತ್ರಗಾರಿಕೆ.


ಇಂಥ ಯಾವ ಕುತಂತ್ರಕ್ಕೂ ದೇಶದ ಯುವಜನತೆ ಬಲಿಯಾಗದಂತೆ ಎಚ್ಚರವಹಿಸಬೇಕು. ದೇಶದ ಬೇರೆ ಬೇರೆ ಭಾಗಗಳಲ್ಲಿ ನಡೆದ, ನಡೆಯುವ ಜೆನ್ ಝೀ ಪ್ರತಿಭಟನೆಗಳು ಭಾರತದ ಯುವಜನತೆ ಅಪಾಯದಲ್ಲಿದೆ ಎಂಬುದನ್ನು ಸಾಬೀತು ಮಾಡುತ್ತಿದೆ. ಯಾರದ್ದೋ ಅಜೆಂಡಾ ಹಾವಿನ ಹುನ್ನಾರಕ್ಕೆ ಬಿದ್ದು ಯವ್ವನದ ಹುಮ್ಮಸ್ಸಿನಲ್ಲಿ ಮಾಡಬಾರದ್ದನ್ನು ಮಾಡಿ ಹೆತ್ತವರಿಗೆ ನೋವುಂಟು ಮಾಡಿ ಜೀವನಪರ್ಯಂತ ದುಃಖಿಸುವಂತಾಗಬಾರದು ಎಂಬ ಎಚ್ಚರದಲ್ಲಿ ಯುವಜನತೆ ತಮ್ಮ ಬದುಕನ್ನು ಕಾಪಾಡಿಕೊಳ್ಳಬೇಕು. ಇಂಥ ದೇಶವಿರೋಧಿ ಪ್ರತಿಭಟನೆಗಳು ದೇಶದ್ರೋಹ ಎಂಬುದು ಅರಿವಾಗಬೇಕು. 


ಪ್ರತಿಯೊಬ್ಬ ಭಾರತೀಯನೂ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಯೇನೆಂದರೆ, ಬಿಜೆಪಿ ಸುಮಾರು ಮೂವತ್ತು ವರ್ಷಗಳ ಕಾಲ ವಿಪಕ್ಷದ ಸ್ಥಾನದಲ್ಲಿತ್ತು. ಆದರೆ, ಯಾವುದೇ ಸಂದರ್ಭದಲ್ಲಿ ವಿದೇಶಿ ದುಷ್ಟ ಕೂಟಗಳೊಂದಿಗೆ ಸೇರಿಕೊಂಡು ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಆಫ್ ಕೋರ್ಸ್ ಮಾಡುವುದೂ ಇಲ್ಲ. ಬಿಜೆಪಿ ಎಂದಿಗೂ ಸೇನೆಯನ್ನು ಅವಮಾನಿಸಲಿಲ್ಲ. ಅವರೆಂದಿಗೂ ಅಧಿಕಾರ ರಾಜಕೀಯದಲ್ಲಿ ದೇಶದ್ರೋಹದ ಕೆಲಸ ಮಾಡಲಿಲ್ಲ. ಮತ್ತು ಚೀನಾ, ಅಮೆರಿಕಾ, ಪಾಕಿಸ್ಥಾನ, ಬಾಂಗ್ಲಾದಂಥ ದೇಶಗಳನ್ನು ಹೊಗಳಲಿಲ್ಲ. ಬಿಜೆಪಿಯ ಪಾಲಿಗೆ ದೇಶಭಕ್ತಿ ಎಂಬುದು ಒಂದು ವಿದೇಶಿ ಪ್ರಾಯೋಜಿತ ಕೋರ್ಸಲ್ಲ. ಅದು ರಕ್ತಗತವಾಗಿರಬೇಕಾದ ವಂಶವಾಹಿನಿ. ಆ ವಂಶವಾಹಿನಿ ಇಲ್ಲದವರು ಅನ್ನದ್ರೋಹದ ಇಂಥ ಪ್ರತಿಭಟನೆಗಳಿಗೆ ಕುಮ್ಮಕ್ಕು ಕೊಡುತ್ತಾರೆ. ಬೆಂಬಲ ಕೊಡುತ್ತಾರೆ. ಇವರಿಗೆ, ದೇಶದ ಅಭಿವೃದ್ಧಿ ಬೇಡ. ದೇಶದ ಪ್ರಗತಿಯಲ್ಲಿ ಎಲ್ಲರ ಹಿತವಿದೆ. ದೇಶದ ಅವನತಿಯಲ್ಲಿ ಎಲ್ಲರ ಅವನತಿಯಿದೆ ಎಂಬುದು ಇವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಆದರೂ ದೇಶದ ಯುವಜನತೆಯನ್ನು ಅಪಾಯದ ಕೂಪಕ್ಕೆ ತಳ್ಳುತ್ತಿರುವುದೇಕೆ…?


- ಟಿ. ದೇವಿದಾಸ್

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top