ಮಿಂಚುತ್ತಿರುವ "ಫ್ಯಾಷನ್ ಲೋಕ"

Shreya Hegde
0



ಫ್ಯಾಷನ್ ಲೋಕವೆಂದರೆ ಕಾಲಕಾಲಕ್ಕೆ ಬದಲಾಗುವ ಸುಂದರ ಪ್ರಕ್ರಿಯೆ. ಹೊರಗಿನ ಪ್ರಪಂಚಕ್ಕೆ ನಮ್ಮ ವ್ಯಕ್ತಿತ್ವವನ್ನ ಗುರುತಿಸಲು, ಅಥವಾ ಸಮಾಜವನ್ನು ಎದುರಿಸಲು ಬೇಕಾಗುವುದೇ ಫ್ಯಾಷನ್. ಈಗಿನ ಜಗ್ಗತ್ತು ಮಾಡ್ರನ್ ಅಲೆಯಲ್ಲಿ ತೆಲುತ್ತಿದೆ. ಕೆಲವರಿಗೆ ತಮ್ಮ ವ್ಯಕ್ತಿತ್ವಕ್ಕಿಂತ ಫ್ಯಾಷನ್, ಸ್ಟೈಲ್ ಲೇ ಮುಖ್ಯ. ಹಳೆಯ ಜೋಡಿಕೆಗಳನ್ನು, ಅದಕೆ ಹೊಸ ಮೆರಗು ನೀಡುವುದೇ ಫ್ಯಾಷನ್. ಸಾಧರಣ ವಸ್ತುವನ್ನು ಅದಿಕ್ಕೆ ಆಕಾರ, ಬಣ್ಣ ಕೊಟ್ಟು ಕೊನೆಗೆ ಒಂದು ಸುಂದರ ಸ್ಪರ್ಶ ನೀಡುವುದೇ ಫ್ಯಾಷನ್.


ಮೊದಲೆಲ್ಲ ಫ್ಯಾಷನ್ ಎಂದರೆ ಕೆಲ ಜನರಿಗೆ ಮಾತ್ರ ಗೊತ್ತಿದದ್ದು. ಅದರಲ್ಲೂ ಸಿನಿಮಾ ನಟಿಯರ ಫ್ಯಾಷನ್, ಮೇಕ್ಅಪ್ ನೋಡಿ ಅದರ ಅಸೆ ಹುಟ್ಟಿದು. ಈಗಿನ ಹಾಗೆ ಯಾವುದೇ ತರಹದ ಮೇಕ್ಅಪ್ ಕಿಟ್ ಆಗಲಿ, ಫ್ಯಾಷನ್ ಬರಿತ ಬಟ್ಟೆಯಾಗಲಿ ಇರಲ್ಲಿಲ. ಪೌಡರ್, ಸ್ಟಿಕರ್, ಕಾಡಿಗೆ ಇದರೆ ಅದುವೇ ಮೇಕ್ಅಪ್, ಅದುವೇ ಫ್ಯಾಷನ್. ಸೀರೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಎಲ್ಲರಿಗೂ ವಿಧವಿಧದ ಸೀರೆಗಳು ಇಷ್ಟವಾಗುತ್ತದೆ. ಮೊದಲ್ಲೆಲ್ಲ ಸೀರೆಗಳಿಗೆ ಅಷ್ಟೊಂದು ಡಿಸೈನಗಳು ಇರಲ್ಲಿಲ. ಸದಾ ಸೀರೆಗೆ ಒಂದು ಹೂವಿನ ಹಚ್ಚೆ ಇದ್ದ ಸೀರೆಗಳು ಇದ್ದವು, ಅದನ್ನು ಈಗ ಕೆಲವರು “ಅಜ್ಜಿ ಸೀರೆ ” ಎಂದು ತಮಾಷೆ ಮಾಡುತ್ತಾರೆ. ಆದರೆ ಅದೇ ಅಜ್ಜಿ ಸೀರೆ ಈಗ ಬಹಳಷ್ಟು ಬೇಡಿಕೆಯಲ್ಲಿ ಇದೇ. ಅದೇ ಸೀರೆಯನ್ನು ಬಳಸಿ ಈಗ ಹುಡುಗಿಯರು ತಮ್ಮ ಫ್ಯಾಷನ್ಗೇ ತಕ್ಕಂತೆ ಅದಿಕ್ಕೆ ಡಿಸೈನ್ ಮಾಡಿಸಿ ಹೋಳಿಸುತ್ತಾರೆ. ಇದೆಲ್ಲ ಫ್ಯಾಷನ್ ಲೋಕ ಮಾಡುತ್ತಿರುವ ಕೆಲಸ.


ಕೇವಲ ಸೀರೆ ಮಾತ್ರವಲ್ಲದೆ ಹಲವಾರು ಬಟ್ಟೆಗಳು ಈಗ ಫ್ಯಾಷನ್ ಮಾಯಾವಾಗಿದೆ. ಸೀರೆಯನ್ನೇ ತರತರವಾಗಿ ಬದಲಿಸೋ ಫ್ಯಾಷನ್, ಇನ್ನು ಬಾಕಿ ಉಳಿದ ಬಟ್ಟೆಗಳನ್ನು ಹೊರತರಲು ಏನು ಕಷ್ಟ ವಿಲ್ಲ. ಫ್ಯಾಷನ್ ಅತಿಯಾಗದೆ, ನಮ್ಮ ಒಳ್ಳೆ ವ್ಯಕ್ತಿತ್ವವನ್ನ ಗುರುತಿಸುವ ಹಾಗೆ ನಮ್ಮನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು.ಹೊಸತನ ಮಾತ್ರ ಅಳವಡಿಸಿಕೊಳ್ಳದೆ, ನಮ್ಮ ಭಾರತೀಯ ಸಂಸ್ಕೃತಿಯನ್ನು ಕೂಡ ಹೆಚ್ಚು ಮಾಡೋಣ.




- ಅಂಜಲಿ ಮುಂಡಾಜೆ

ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ 

ಎಸ್ ಡಿ ಯಂ ಕಾಲೇಜು ಉಜಿರೆ

Views: Loading...

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top