ನಗದು ಭಿಕ್ಷೆ ನಿರಾಕರಣೆ ಮಾತ್ರ ಪರಿಹಾರವಲ್ಲ; ವ್ಯವಸ್ಥಿತ ಪುನರ್ವಸತಿ ಅಗತ್ಯ

Shreya Hegde
0




ಭಿಕ್ಷಾಟನೆ ನಿಯಂತ್ರಿಸಲು ನಗದು ಭಿಕ್ಷೆ ನೀಡುವುದನ್ನು ನಿಲ್ಲಿಸಿ, ಬದಲಾಗಿ ಅನ್ನ ಮತ್ತು ನೀರು ನೀಡುವ ಸಂಕಲ್ಪ ಮಾನವೀಯ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ನಗದು ಭಿಕ್ಷೆ ನೀಡುವುದರಿಂದಲೇ ಭಿಕ್ಷಾಟನೆ ಮಾಫಿಯಾ ಹಾಗೂ ಮಕ್ಕಳ ಅಪಹರಣ ಹೆಚ್ಚುತ್ತವೆ ಎಂಬುದಕ್ಕೆ ದೃಢವಾದ ಸಾಕ್ಷ್ಯಗಳಿಲ್ಲ.


ಎಲ್ಲ ಭಿಕ್ಷುಕರನ್ನೂ ಒಂದೇ ದೃಷ್ಟಿಯಿಂದ ನೋಡುವುದೂ ಸರಿಯಲ್ಲ. ಕೆಲವರು ಬಡತನ, ನಿರುದ್ಯೋಗ, ವೃದ್ಧಾಪ್ಯ, ಅಂಗವೈಕಲ್ಯ ಹಾಗೂ ಅನಾಥ ಸ್ಥಿತಿಯಿಂದ ಭಿಕ್ಷಾಟನೆಗೆ ಇಳಿದಿರಬಹುದು. ಹೀಗಾಗಿ, ಕೇವಲ ನಗದು ನೀಡದಿರುವುದರಿಂದ ಸಮಸ್ಯೆ ಸಂಪೂರ್ಣ ನಿರ್ಮೂಲನೆಯಾಗದು. ಭಿಕ್ಷಾಟನೆಯ ಹಿಂದೆ ಸಂಘಟಿತ ಜಾಲಗಳಿದ್ದರೆ ಅವುಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳನ್ನು ಭಿಕ್ಷಾಟನೆಗೆ ಬಳಸುವವರ ವಿರುದ್ಧ ಕಾನೂನು ಕ್ರಮದ ಜೊತೆಗೆ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗೆ ಆದ್ಯತೆ ನೀಡಬೇಕು. ದಾನಕ್ಕಿಂತ ಸ್ವಾವಲಂಬನೆಗೆ ದಾರಿ ತೋರಿಸುವುದು ಮುಖ್ಯ. ಸರ್ಕಾರ, ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳು ಒಗ್ಗೂಡಿ ಭಿಕ್ಷುಕರಿಗೆ ಆಶ್ರಯ, ಶಿಕ್ಷಣ, ಉದ್ಯೋಗ ಹಾಗೂ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಭಿಕ್ಷಾಟನೆ ಮುಕ್ತ ಸಮಾಜದ ಕನಸು ನನಸಾಗಲು ಸಾಧ್ಯ.


-   ಡಾ. ಜಯವೀರ ಎ. ಕೆ., ಖೇಮಲಾಪುರ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top