ಶೃಂಗೇರಿ ಶ್ರೀಗಳಿಗೆ ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆ ಸಮರ್ಪಣೆ

Shreya Hegde
0



ಮಂಗಳೂರು: ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.), ಮಂಗಳೂರು ಅಂಗ ಸಂಸ್ಥೆಯ ಆಶ್ರಯದಲ್ಲಿ ನಡೆದ ಕೇಂದ್ರ ಮಹಾಧಿವೇಶನ ‘ಕೋಟದವರ ಹಬ್ಬ’ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಪ್ರಕಟಿಸಲಾದ ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆಯನ್ನು ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರಿಗೆ ಸಮರ್ಪಿಸಲಾಯಿತು.


ಕೂಟ ಸಮಾಜದ ಒಗ್ಗಟ್ಟು, ಸಂಘಟನೆ ಹಾಗೂ ಧಾರ್ಮಿಕ–ಸಾಂಸ್ಕೃತಿಕ ಪರಂಪರೆಯನ್ನು ಸಾರುವ ರೀತಿಯಲ್ಲಿ ನಡೆದ ‘ಕೋಟದವರ ಹಬ್ಬ’ದ ಯಶಸ್ಸಿನ ಕುರಿತು ಸ್ವಾಮೀಜಿಯವರಿಗೆ ವಿವರಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರಿಗೆ ನೀಡಲಾಯಿತು. ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆಯನ್ನು ವೀಕ್ಷಿಸಿದ ಶೃಂಗೇರಿ ಸ್ವಾಮೀಜಿಯವರು ಸಂಚಿಕೆಯ ವಿನ್ಯಾಸ, ವಿಷಯ ವೈವಿಧ್ಯ ಹಾಗೂ ಅದರಲ್ಲಿ ಪ್ರಕಟವಾಗಿರುವ ಲೇಖನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೂಟ ಸಮಾಜದ ಪರಂಪರೆ, ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಸಮಾಜದ ಸಾಧನೆಗಳನ್ನು ದಾಖಲಿಸುವ ಪ್ರಯತ್ನವನ್ನು ಪ್ರಶಂಸಿಸಿದರು.


ಈ ಸಂದರ್ಭದಲ್ಲಿ ಕೂಟ ಮಹಾಜಗತ್ತಿನ ಮಂಗಳೂರು ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಧರ ಹೊಳ್ಳ, ಉಪಾಧ್ಯಕ್ಷ ಪ್ರಭಾಕರ ಐತಾಳ್, ಸಮ್ಮೇಳನದ ಮಾಧ್ಯಮ ಸಮಿತಿ ಸದಸ್ಯ ಪ್ರವೀಣ್ ಮಯ್ಯ, ದೈವಜ್ಞ ಶ್ರೀರಂಗ ಐತಾಳ್, ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ಯೋಗೀಶ್ ಹೊಳ್ಳ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top