ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠ ಹಾಗೂ ಚಿಟ್ಟಾಣಿ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ರಾಜಾಂಗಣದಲ್ಲಿ 'ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ- 2026' ಕಾರ್ಯಕ್ರಮವು ಆಯೋಜಿತವಾಗಿದೆ. 27 ಅಕ್ಟೋಬರ್ 2026 ರಿಂದ 02 ನವೆಂಬರ್ 2026 ರವರೆಗೆ ಪ್ರತಿದಿನ ಸಂಜೆ 7.00 ಗಂಟೆಯಿಂದ ರಾಜಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಸಪ್ತಾಹದಲ್ಲಿ ಪ್ರತಿದಿನ ನಡೆಯಲಿರುವ ಯಕ್ಷಗಾನ ಪ್ರದರ್ಶನಗಳ ವಿವರ ಹೀಗಿದೆ:
ಅಕ್ಟೋಬರ್ 27ರ ಮಂಗಳವಾರದಂದು 'ಶ್ರೀರಾಮ ನಿರ್ಯಾಣ', ಅಕ್ಟೋಬರ್ 28ರ ಬುಧವಾರದಂದು 'ಪ್ರಹ್ಲಾದ ಚರಿತ್ರೆ', ಅಕ್ಟೋಬರ್ 29ರ ಗುರುವಾರದಂದು 'ದಕ್ಷಯಜ್ಞ', ಅಕ್ಟೋಬರ್ 30ರ ಶುಕ್ರವಾರದಂದು 'ಬ್ರಹ್ಮಕಪಾಲ', ಅಕ್ಟೋಬರ್ 31ರ ಶನಿವಾರದಂದು 'ಲಂಕಾದಹನ', ನವೆಂಬರ್ 01ರ ಭಾನುವಾರದಂದು 'ಸತ್ಯವಾನ ಸಾವಿತ್ರಿ' ಹಾಗೂ ನವೆಂಬರ್ 02ರ ಸೋಮವಾರದಂದು 'ರಾಜಾ ಬೃಹದ್ರಥ' ಪ್ರದರ್ಶನಗೊಳ್ಳಲಿವೆ. ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಲಾಗಿದೆ.


