ಚೇತನಾ ಬಾಲ ವಿಕಾಸ ಶಾಲೆಯಲ್ಲಿ ಆಯುಧ ಪೂಜೆ, ಶಾರದಾ ಪೂಜೆ

Shreya Hegde
0



ಮಂಗಳೂರು: ಸೇವಾಭಾರತಿ (ರಿ) ಮಂಗಳೂರು ಇದರ ಅಂಗಸಂಸ್ಥೆಯಾದ ವಿ.ಟಿ. ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರ ವಿಶೇಷ ಮಕ್ಕಳ ಶಾಲೆಯಲ್ಲಿ ಇಂದು (ಅ.17) ಆಯುಧ ಪೂಜೆ ಹಾಗೂ ಶಾರದಾ ಮಾತೆಯ ಪೂಜೆ ಬಹಳ ವಿಜೃಂಭಣೆಯಿಂದ ಜರಗಿತು. ಶಾಲಾ ಶಿಕ್ಷಕಿಯರಿಂದ ಭಜನಾ ಕಾರ್ಯಕ್ರಮಗಳು ನಡೆದವು.


ತದನಂತರ ವೈದಿಕರ ನೇತೃತ್ವದಲ್ಲಿ ಎಲ್ಲಾ ವಾಹನಗಳಿಗೂ, ಉಪಕರಣಗಳಿಗೂ ಪೂಜಾ ವಿಧಿವಿಧಾನವು ಜರಗಿದವು. ನೆರೆದಿದ್ದ ಎಲ್ಲರಿಗೂ ಪಾನೀಯ, ಪ್ರಸಾದ ಮತ್ತು ಸಿಹಿತಿಂಡಿ ಹಂಚಲಾಯಿತು. ಸಮಾರಂಭದಲ್ಲಿ ಸೇವಾಭಾರತಿ ಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್. ನಾಗರಾಜ ಭಟ್, ಖಜಾಂಚಿ ವಿನೋದ್ ಶೆಣೈ, ಚೇತನಾ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ, ಸಂಸ್ಥೆಯ ವಿಶ್ವಸ್ಥರು, ಇತರ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಚೇತನಾ ಶಾಲಾ ಸಿಬ್ಬಂದಿ, ಸ್ವಯಂಸೇವಕರು, ಪೋಷಕರು, ಮಕ್ಕಳು ಹಾಗೂ ಹಿತೈಷಿಗಳು ಪಾಲ್ಗೊಂಡರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top