ಕಲಬುರಗಿ: ಹಿರಿಯ ಜೀವಿ ಸಮಾಜಸೇವಕರು ಹಾಗೂ ಆದರ್ಶದ ಮಹಾನ್ ಪರಂಪರೆಯ ಶಕ್ತಿಯಾದ ಭೂದೇವಿ ಗಂಗಾಧರ ನಮೋಶಿಯವರ ಅಗಲವಿಕೆ ತುಂಬಲಾರದ ನಷ್ಟವಾಗಿದೆ. ಹಿರಿಯರ ಆದರ್ಶ ಪರಂಪರೆಯ ಕುಂಡಿಯಾಗಿ ಮಾರ್ಗದರ್ಶನ ನೀಡುತ್ತಿದ್ದ ಅವರಾಗಲುವಿಕೆ ಕೇವಲ ನಮೋಶಿ ಕುಟುಂಬಕ್ಕೆ ಮಾತ್ರವಲ್ಲ ನಾಡಿನ ಸಮಸ್ತ ಜನತೆಗೆ ತುಂಬಲಾರದ ಶೂನ್ಯ ಸೃಷ್ಟಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮಾತೃಶ್ರೀ ಭೂದೇವಿ ನಮೋಶಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದ ನಂತರ ತಮ್ಮ ಸಂತಾಪ ವ್ಯಕ್ತಪಡಿಸುತ್ತಾ ಮಾತೃಶ್ರೀ ಭೂದೇವಿಯವರು ಶಾಸಕರು ಹಿರಿಯ ಮುಂದಾಳುಗಳಾಗಿದ್ದ ಗಂಗಾಧರ ನಮೋಶಿಯವರ ಕುಟುಂಬವನ್ನು ಕಟ್ಟಿ ಬೆಳೆಸಿದ ಧೀಮಂತ ಮಹಿಳೆ. ಶಶಿಲ್ ನಮೋಶಿ ಸೇರಿ ಇಬ್ಬರು ಪುತ್ರರು ಹಾಗೂ ವೈದ್ಯೆ ಡಾ.ನಳಿನಿ ನಮೋಶಿ ಅವರಂತಹ ಸಾಧಕ ಮಕ್ಕಳನ್ನು ಪಡೆದು ಸಮಾಜ ಕಟ್ಟುವ ಕಾಯಕಕ್ಕೆ ಧಾರೆ ಏರೆದವರು ಎಂದು ಯಡಿಯೂರಪ್ಪ ಹೇಳಿದರು.
ಭೂದೇವಿಯವರು ನಮಗೆಲ್ಲ ಮಾರ್ಗದರ್ಶಕರಾಗಿ ಕುಟುಂಬ ಪ್ರೀತಿಯನ್ನು ತೋರಿದ ಮಹಾನ್ ತಾಯಿಯಾಗಿದ್ದು ಅವರ ಅಗಲುವಿಕೆ ತೀವ್ರ ಆ ಘಾತ ಸೃಷ್ಟಿಸಿದೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಶೋಕ ವ್ಯಕ್ತಪಡಿಸಿದ್ದಾರೆ. ಹಿರಿಯ ಜೀವಿ ಭೂದೇವಿಯವರ ಕೊಟ್ಟ ಆದರ್ಶದ ಬೆಳಕಿನಲ್ಲಿ ಮುನ್ನಡೆಯುವುದೇ ಅವರಿಗೆ ಸಲ್ಲಿಸುವ ಗೌರವದ ಶ್ರದ್ಧಾಂಜಲಿ ಎಂದು ಜಾಧವ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ವಿಜನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ಇದ್ದರು.


