ಕಲಬುರಗಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಕಲಬುರಗಿಯ ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ನೇತೃತ್ವದ ತಂಡವು ದೆಹಲಿಯಲ್ಲಿ ಪಕ್ಷದ ಮುಖ್ಯ ಕಾರ್ಯಾಲಯದಲ್ಲಿ ಶನಿವಾರ ಭೇಟಿಯಾಗಿ ಚರ್ಚೆ ನಡೆಸಿತು.
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್ ಅವರು ಬಿಜೆಪಿ ನಾಯಕರ ತಂಡದೊಂದಿಗೆ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಜವಾಬ್ದಾರಿ ಹಾಗೂ ಸಿದ್ಧತೆಗಳ ಬಗ್ಗೆ ತಂಡದ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಪಕ್ಷದ ಕಾರ್ಯಕರ್ತರನ್ನು ಕ್ರಿಯಾಶೀಲರಾಗುವಂತೆ ಸಲಹೆಯನ್ನು ನೀಡಿದರು. ಮೋದಿ ಸರಕಾರದ ಸಾಧನೆಗಳು ಹಾಗೂ ಮೋದಿಯವರ 25 ವರ್ಷಗಳ ಸಾರ್ವಜನಿಕ ಆಡಳಿತವನ್ನು, ಭ್ರಷ್ಟಾಚಾರ ಮುಕ್ತ ಸುಶಾಸನ ಮತ್ತು 2047ತ ವಿಕಸಿತ ಭಾರತದ ಸಂಕಲ್ಪದ ಬಗ್ಗೆ ಜನರಿಗೆ ತಿಳಿಸುವಂತೆ ಸಲಹೆ ನೀಡಿದರು.ಪಕ್ಷದ ಸಂಘಟನಾತ್ಮಕವಾದ ವಿಚಾರಗಳ ಬಗ್ಗೆ ಕೂಡ ಡಾ. ಉಮೇಶ್ ಜಾಧವ್ ವಿಷಯಗಳನ್ನು ಪ್ರಸ್ತಾಪಿಸಿದರು ಹಾಗೂ ಸೂಕ್ತ ಸಲಹೆ ಸೂಚನೆಗಳನ್ನು ಪಡೆದರು.
ಡಾ. ಉಮೇಶ್ ಜಾಧವ್ ನೇತೃತ್ವದ ತಂಡದಲ್ಲಿ ಶಿವರಾಜ್ ಪಾಟೀಲ್ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ ಆಳಂದ, ಮಲ್ಲಿಕಾರ್ಜುನ ತೆಗನೂರ್ ಜೊತೆಗಿದ್ದರು. ಜಾಧವ ನೇತೃತ್ವದಲ್ಲಿ ತಂಡದ ಸದಸ್ಯರು ಬಿ ಎಲ್ ಸಂತೋಷ್ ಅವರಿಗೆ ಶಾಲು ಹಾಗೂ ಸಸಿಯನ್ನು ನೀಡುವುದರ ಮೂಲಕ ವಿಶೇಷವಾಗಿ ಸನ್ಮಾನಿಸಿದರು.

