ಬಾಲ್ ಬ್ಯಾಡ್ಮಿಂಟನ್: ವಿ.ಎಂ. ಪದವಿ ಪೂರ್ವ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆ

Upayuktha
0



ಹುನಗುಂದ: ಇತ್ತೀಚೆಗೆ ಇಲ್ಲಿನ ವಿ.ಎಮ್.ಎಸ್.ಆರ್.ವಿ. ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಬಾಗಲಕೋಟೆ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜಯ ಮಹಾಂತೇಶ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.


ಮಹಾಂತೇಶ ಬಸಪ್ಪ ಗೌಡರ, ರಾಹುಲ್ ಬಸವರಾಜ ಕೋಲ್ಕರ, ಸಂಗಮೇಶ ಸೋಮಶೇಖರ ಬ್ಯಾಳಿ, ಮುತ್ತು ಶೇಖರಪ್ಪ ಹೊಸಮನಿ, ವಿಕಾಸ್ ಹನುಮಪ್ಪ ಚವ್ಹಾಣ, ಶಶಾಂಕ್ ಸಂಗಯ್ಯ ಬಿಂಜವಾಡಗಿಮಠ ಮತ್ತು ಅಮೋಘ ಅಮರೇಶ ಪತ್ತಾರ ಅವರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಪ್ರತಿಭಾವಂತ ಕ್ರೀಡಾಪಟುಗಳಾಗಿದ್ದಾರೆ.


ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಂಸ್ಥೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ವಿ.ಎಂ.ವಿ.ವಿ. ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚಿರಂತಿಮಠ, ಗೌರವ ಕಾರ್ಯದರ್ಶಿಗಳಾದ ಮಹಾಂತೇಶ ಕಡಪಟ್ಟಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಶುಭ ಹಾರೈಸಿದ್ದಾರೆ.


ಅಲ್ಲದೆ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಚ್.ಎಸ್. ಬೊಳಿಶೆಟ್ಟರ್, ಪದವಿ ಪ್ರಾಚಾರ್ಯರಾದ ಡಾ. ಎಸ್.ಆರ್. ಗೋಲಗೊಂಡ, ಕ್ರೀಡಾ ನಿರ್ದೇಶಕರಾದ ಎಸ್.ಬಿ. ಚಳಗೇರಿ, ಉಪನ್ಯಾಸಕರಾದ ಪ್ರೊ. ಎ.ಎಲ್. ಬದಾಮಿ, ಪ್ರೊ. ಎಫ್.ಎಂ. ರಾಮವಾಡಗಿ, ಬಾಲ್ ಬ್ಯಾಡ್ಮಿಂಟನ್ ತರಬೇತುದಾರರಾದ ವೆಂಕಣ್ಣ ದೇವರಡ್ಡಿ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ವಿಜೇತ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ, ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top