ಅಜೀಂ ಪ್ರೇಮ್‍ಜಿ ವಿವಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Shreya Hegde
0



ಮಂಗಳೂರು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವು 2027ನೇ ಶೈಕ್ಷಣಿಕ ಸಾಲಿನಲ್ಲಿ ತನ್ನ ಬೆಂಗಳೂರು, ಭೋಪಾಲ್ ಮತ್ತು ರಾಂಚಿ ಕ್ಯಾಂಪಸ್‍ಗಳಲ್ಲಿ ನಡೆಯಲಿರುವ ಪೂರ್ಣಾವಧಿ ಸ್ನಾತಕ (ಪದವಿ) ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಿಶ್ವವಿದ್ಯಾಲಯವು ಶಿಕ್ಷಣ, ಅಭಿವೃದ್ಧಿ, ಅರ್ಥಶಾಸ್ತ್ರ, ಸಾರ್ವಜನಿಕ ಆರೋಗ್ಯ, ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ ಹಾಗೂ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. ಪದವಿ ಕಾರ್ಯಕ್ರಮಗಳು ನಾಲ್ಕು ವರ್ಷಗಳ ಪೂರ್ಣಾವಧಿಯ ವಸತಿ ಸಹಿತ ಕಾರ್ಯಕ್ರಮಗಳಾಗಿದ್ದು, ಮಾನವಿಕ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನು ಒಳಗೊಂಡಿವೆ ಎಂದು ಪ್ರಕಟಣೆ ಹೇಳಿದೆ.


ಬೆಂಗಳೂರು ಕ್ಯಾಂಪಸ್‍ನಲ್ಲಿ ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ, ಅಭಿವೃದ್ಧಿ, ಅರ್ಥಶಾಸ್ತ್ರ ಎಂಎ, ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ವಿಷಯಗಳಲ್ಲಿ ಎಂಎಸ್ಸಿ ಪದವಿ, ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ತತ್ತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ, ಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ. ಆನರ್ಸ್, ಜೀವವಿಜ್ಞಾನ, ರಸಾಯನವಿಜ್ಞಾನ, ಗಣಿತಶಾಸ್ತ್ರ, ಭೌತವಿಜ್ಞಾನ, ಮನೋವಿಜ್ಞಾನ, ಮಾಹಿತಿ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸುಸ್ಥಿರತೆಯಲ್ಲಿ ಬಿ.ಎಸ್ಸಿ ಆನರ್ಸ್‍ಗೆ ಅವಕಾಶವಿದೆ. 2027ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. www.azimpremjiuniversity.edu.in.. 20 ಆeಛಿembeಡಿ 2026 ರಂದು ನಡೆಯಲಿರುವ ರಾಷ್ಟ್ರೀಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ನವೆಂಬರ್ 20ರೊಳಗೆ ರೊಳಗೆ ಸಲ್ಲಿಸಬೇಕು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top