ನ ತಾತೋ ನ ಮಾತಾ ನ ಬಂಧುರ್ನ ದಾತಾ
ನ ಪುತ್ರೋ ನ ಪುತ್ರೀ ನ ಭೃತ್ಯೋ ನ ಭರ್ತಾ
ನ ಜಾಯಾ ನ ವಿದ್ಯಾ ನ ವೃತ್ತಿರ್ಮಮೈವ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 1 ॥
ಭವಾಬ್ಧಾವಪಾರೇ ಮಹಾದುಃಖಭೀರು
ಪಪಾತ ಪ್ರಕಾಮೀ ಪ್ರಲೋಭೀ ಪ್ರಮತ್ತಃ
ಕುಸಂಸಾರಪಾಶಪ್ರಬದ್ಧಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 2 ॥
ನ ಜಾನಾಮಿ ದಾನಂ ನ ಚ ಧ್ಯಾನಯೋಗಂ
ನ ಜಾನಾಮಿ ತಂತ್ರಂ ನ ಚ ಸ್ತೋತ್ರಮಂತ್ರಂ
ನ ಜಾನಾಮಿ ಪೂಜಾಂ ನ ಚ ನ್ಯಾಸಯೋಗಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 3 ॥
ನ ಜಾನಾಮಿ ಪುಣ್ಯಂ ನ ಜಾನಾಮಿ ತೀರ್ಥಂ
ನ ಜಾನಾಮಿ ಮುಕ್ತಿಂ ಲಯಂ ವಾ ಕದಾಚಿತ್
ನ ಜಾನಾಮಿ ಭಕ್ತಿಂ ವ್ರತಂ ವಾಪಿ ಮಾತಃ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 4 ॥
ಕುಕರ್ಮೀ ಕುಸಂಗೀ ಕುಬುದ್ಧಿಃ ಕುದಾಸಃ
ಕುಲಾಚಾರಹೀನಃ ಕದಾಚಾರಲೀನಃ
ಕುದೃಷ್ಟಿಃ ಕುವಾಕ್ಯಪ್ರಬಂಧಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 5 ॥
ಪ್ರಜೇಶಂ ರಮೇಶಂ ಮಹೇಶಂ ಸುರೇಶಂ
ದಿನೇಶಂ ನಿಶೀಥೇಶ್ವರಂ ವಾ ಕದಾಚಿತ್
ನ ಜಾನಾಮಿ ಚಾನ್ಯತ್ ಸದಾಹಂ ಶರಣ್ಯೇ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 6 ॥
ವಿವಾದೇ ವಿಷಾದೇ ಪ್ರಮಾದೇ ಪ್ರವಾಸೇ
ಜಲೇ ಚಾನಲೇ ಪರ್ವತೇ ಶತ್ರುಮಧ್ಯೇ
ಅರಣ್ಯೇ ಶರಣ್ಯೇ ಸದಾ ಮಾಂ ಪ್ರಪಾಹಿ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 7 ॥
ಅನಾಥೋ ದರಿದ್ರೋ ಜರಾರೋಗಯುಕ್ತೋ
ಮಹಾಕ್ಷೀಣದೀನಃ ಸದಾ ಜಾಡ್ಯವಕ್ತ್ರಃ
ವಿಪತ್ತೌ ಪ್ರವಿಷ್ಟಃ ಪ್ರನಷ್ಟಃ ಸದಾಹಂ
ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ ॥ 8 ॥
॥ ಇತಿ ಶ್ರೀಮದಾದಿಶಂಕರಾಚಾರ್ಯವಿರಚಿತಂ ಭವಾನ್ಯಷ್ಟಕಂ ಸಂಪೂರ್ಣಮ್ ॥
ಭವಾನಿ ಎನ್ನುವುದು ಪಾರ್ವತಿ ಅಥವಾ ದುರ್ಗೆ ಎಂಬ ಅರ್ಥ ಕೊಡುವ "ಜೀವ ನೀಡುವವಳು" ಅಥವಾ "ಸೃಜನಶೀಲ ಶಕ್ತಿಯ ಮೂಲ" ಎಂದಾಗಿದೆ. ದುಷ್ಟಶಕ್ತಿಗಳನ್ನು ಸಂಹರಿಸುವ ಮತ್ತು ಭಕ್ತರನ್ನು ರಕ್ಷಿಸುವ, ಅದೇ ಸಮಯದಲ್ಲಿ ವಾತ್ಸಲ್ಯಮಯ ತಾಯಿಯ ಸ್ವರೂಪದಲ್ಲಿ ಈ ದೇವಿಯನ್ನು ವ್ಯಾಪಕವಾಗಿ ಪೂಜಿಸಲಾಗುತ್ತದೆ.
ಮಹಾರಾಷ್ಟ್ರದ ತುಳಜಾಪುರದಲ್ಲಿ ನೆಲೆಗೊಂಡಿರುವ ದೇವಿಯಾಗುರುತ್ತಾಳೆ. ಈಕೆಯನ್ನು ಐತಿಹಾಸಿಕವಾಗಿ ಛತ್ರಪತಿ ಶಿವಾಜಿ ಮಹಾರಾಜರ ಕುಲದೇವತೆ ಮತ್ತು ಶಿವಾಜಿ ಮಹಾರಾಜರಿಗೆ ಕಟ್ಟಿಯನ್ನು ನೀಡಿದವಳೆಂದು ಭಕ್ತಿತ್ಪೂರ್ವಕವಾಗಿ ಪೂಜಿಸಲಾಗುತ್ತದೆ.
ಭವಾನಿ ಅಷ್ಟಕವು 8 ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ರಚಿಸಿದ 8 ಪದ್ಯಗಳ ಸಂಸ್ಕೃತ ಸ್ತೋತ್ರವಾಗಿದ್ದು, ಇದನ್ನು ಭವಾನಿ ದೇವಿಗೆ, ಉಗ್ರ ರೂಪದ ದುರ್ಗಾ ದೇವಿ ಮತ್ತು ಕರುಣಾಳು ರೂಪದ ಪಾರ್ವತಿ ದೇವಿಯರ ಎರಡೂ ಗುಣಗಳನ್ನು ಹಿಂದಿರುವ ದೇವಿಯಂದು ಪ್ರಾರ್ಥಿಸಲಾಗಿದೆ.
ಭವಾನಿ ಅಷ್ಟಕದಲ್ಲಿ ದೇವಿಯ ದೈಹಿಕ ಸೌಂದರ್ಯ ಅಥವಾ ಸಮರ ಪರಾಕ್ರಮವನ್ನು ಹೊಗಳುವ ಸ್ತೋತ್ರಗಳಿಗಿಂತ ಭಿನ್ನವಾಗಿ, ಅಷ್ಟಕವು ಭಾವನಾತ್ಮಕ ತಪ್ಪೊಪ್ಪಿಗೆಯಾಗಿದ್ದು, ಅಲ್ಲಿ ಭಕ್ತನು ಎಲ್ಲಾ ಲೌಕಿಕ ಊರುಗೋಲುಗಳನ್ನು- ಪೋಷಕರು, ಮಕ್ಕಳು, ಸಂಪತ್ತು, ಸಾಮಾಜಿಕ ಸ್ಥಾನಮಾನ, ಕಲಿಕೆ ಮತ್ತು ಧಾರ್ಮಿಕ ಅರ್ಹತೆಯನ್ನು ತ್ಯಜಿಸಿ ದೈವಿಕ ತಾಯಿಯ ಆಶೀರ್ವಾದವಾದ ಏಕೈಕ ಮೋಕ್ಷವನ್ನು ಬಯಸುತ್ತಾನೆ. ಸಂಪೂರ್ಣ ಶರಣಾಗತಿಯಿಂದ ಆತ್ಮದ ಸಮರ್ಪಣೆ ಮಾಡಿ ಕೊಳ್ಳುತ್ತಾನೆ.
ಸ್ತೋತ್ರದ ಪ್ರತಿ ಪದ್ಯವೂ "ಗತಿಸ್ತ್ವಂ ಗತಿಸ್ತ್ವಂ ತ್ವಮೇಕಾ ಭವಾನಿ" ಎಂಬ ಪ್ರಬಲ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ; ಇದರ ಅರ್ಥ "ಓ ಭವಾನಿ, ನೀನೇ ನನ್ನ ಆಶ್ರಯ, ನೀನೊಬ್ಬಳೇ ನನ್ನ ಆಶ್ರಯದಾತಳು" ಎಂದಾಗಿದೆ.
ಈ ಸ್ತೋತ್ರದಲ್ಲಿ ಭಕ್ತನು ತನ್ನ ವಿನಮ್ರತೆಯನ್ನು ವ್ಯಕ್ತಪಡಿಸುತ್ತಾನೆ. ಭಕ್ತನು ತನ್ನ ವೈಯಕ್ತಿಕ ದೌರ್ಬಲ್ಯಗಳನ್ನು, ಮಂತ್ರ ಅಥವಾ ಯೋಗದ ಬಗೆಗಿನ ಅಜ್ಞಾನವನ್ನು ಹಾಗೂ ಜೀವನದ ಸಂಘರ್ಷಗಳ ನಡುವೆ ತಾನು ಅಸಹಾಯಕನಾಗಿರುವುದನ್ನು ದೇವಿಯ ಮುಂದೆ ನಿವೇದನೆಯನ್ನು ಮಾಡಿ ಕೊಳ್ಳುತ್ತಾನೆ.
ಭವಾನಿ ಅಷ್ಟಕ ಪಠಣದ ಫಲ:
ಭವಾನಿ ಅಷ್ಟಕವನ್ನು ನಿಯಮಿತವಾಗಿ ನಿರಂತರವಾಗಿ ಪಠಿಸುವುದರಿಂದ ಭಕ್ತರ ಮನಸ್ಸು ಮತ್ತು ದೇಹಕ್ಕೆ ಭಯ, ದುಃಖ, ಅನಾರೋಗ್ಯ, ಬಡತನ ಹಾಗೂ ಅಸ್ತಿತ್ವಕ್ಕೆ ಸಂಬಂಧಿಸಿದ ಅಥವಾ ಪರಿಸರದಿಂದ ಉಂಟಾಗುವ ಅಪಾಯಗಳಿಂದ ರಕ್ಷಣೆ ಸಿಗುತ್ತದೆ.
ವೈದಿಕ ಸಂಪ್ರದಾಯಗಳಲ್ಲಿ, ಈ ಸ್ತೋತ್ರದ ಪಠಣವು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದಾಗ ಅಥವಾ ಪೀಡಿತನಾಗಿದ್ದಾಗ, ಅದಕ್ಕೆ ಪರಿಹಾರವಾಗಿ ಈ ಸ್ತೋತ್ರವನ್ನು ಪಠಿಸಲು ಸಲಹೆ ನೀಡಲಾಗುತ್ತದೆ.
ಭವಾನಿ ಅಷ್ಟಕ ಪಠಣದಿಂದ ಮಾನದಲ್ಲಿ ಆಳವಾದ ವಿನಮ್ರತೆಯನ್ನು ಬೆಳೆಸುವ ಮೂಲಕ, ಆತಂಕ, ಅತಿಯಾದ ಆಲೋಚನೆ ಮತ್ತು ಭಾವನಾತ್ಮಕ ಏರಿಳಿತಗಳನ್ನು ಶಾಂತಗೊಳಿಸಿ ಮನಸ್ಸಿನ ತಳಮಳಕ್ಕೆ ಪರಿಹಾರ ನೀಡುತ್ತದೆ.
ನಕಾರಾತ್ಮಕ ಪ್ರಭಾವಗಳು, ಆಂತರಿಕ ಭಯಗಳು ಮತ್ತು ಲೌಕಿಕ ಜೀವನದ (ಸಂಸಾರ) ಒತ್ತಡಗಳ ವಿರುದ್ಧ ಇದು ಒಂದು ಕವಚದಂತೆ ಕಾರ್ಯನಿರ್ವಹಿಸುತ್ತದೆ.
ಅಹಂಕಾರ ಮತ್ತು ಲೌಕಿಕ ಗರ್ವದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೈವಿಕ ಅನುಗ್ರಹದ ಮೇಲಿನ ನಂಬಿಕೆಯತ್ತ ಮನಸ್ಸನ್ನು ತಿರುಗಿಸುತ್ತದೆ.
- ಮಾಧುರಿ ದೇಶಪಾಂಡೆ, ಬೆಂಗಳೂರು


