ಮೈಸೂರು: ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ದಸರಾ ಕಲಾಪ್ರದರ್ಶನವು ಅಕ್ಟೋಬರ್ 11ರಂದು ಸಂಜೆ ವೈಭವದಿಂದ ಉದ್ಘಾಟನೆಗೊಂಡಿದೆ. ಈ ಪ್ರತಿಷ್ಠಿತ ಪ್ರದರ್ಶನದಲ್ಲಿ ತಂದೆ ಮತ್ತು ಮಗಳ ಕಲಾಕೃತಿಗಳು ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿವೆ.
ಛಾಯಾಗ್ರಹಣ ವಿಭಾಗದಲ್ಲಿ ನಿಯತಿ ಯು. ಭಟ್ ಅವರು ಕ್ಲಿಕ್ಕಿಸಿದ "ಜಲಕ್ರೀಡೆ" ಹಾಗೂ "ನಾನೇರುವೆತ್ತರಕೆ ನೀನೇರಬಲ್ಲೆಯಾ?" ಎಂಬ ಶೀರ್ಷಿಕೆಯ ಛಾಯಾಚಿತ್ರಗಳು ಆಯ್ಕೆಯಾಗಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಅದೇ ರೀತಿ, ಚಿತ್ರಕಲಾ ವಿಭಾಗದಲ್ಲಿ ಪ್ರಸಿದ್ಧ ಜಲವರ್ಣ (Watercolour) ಕಲಾಕೃತಿಗಳಾದ "ನಮೋ" ಮತ್ತು "ಪ್ರಪಾತ" ಪ್ರದರ್ಶನಕ್ಕೆ ಆಯ್ಕೆಯಾಗಿವೆ. ತಂದೆ-ಮಗಳು ಒಟ್ಟಾಗಿ ಸತತ ಮೂರನೇ ವರ್ಷವೂ ಈ ವಿಶ್ವವಿಖ್ಯಾತ ದಸರಾ ಕಲಾಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಸಾರ್ವಜನಿಕರ ವೀಕ್ಷಣೆಗೆ ಅವಕಾಶ:
ಕಲಾಸಕ್ತರು ಹಾಗೂ ಸಾರ್ವಜನಿಕರ ವೀಕ್ಷಣೆಗಾಗಿ ಈ ಪ್ರದರ್ಶನವು ಅಕ್ಟೋಬರ್ 11 ರಿಂದ ಅಕ್ಟೋಬರ್ 24, 2026 ರವರೆಗೆ ಪ್ರತಿದಿನ ಬೆಳಿಗ್ಗೆ 10:30 ರಿಂದ ಸಂಜೆ 7:00 ಗಂಟೆಯವರೆಗೆ ತೆರೆದಿರುತ್ತದೆ.
ಸ್ಥಳ: ಶ್ರೀ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಸಿಎವಿಎ - CAVA), ಸಿದ್ಧಾರ್ಥನಗರ, ಮೈಸೂರು.


