ಯುವ ನಶಾ ಮುಕ್ತ ಭಾರತ - ವಿಕಸಿತ ಭಾರತದತ್ತ ದಿಟ್ಟ ಹೆಜ್ಜೆ

Upayuktha
0

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಯುವಶಕ್ತಿಯೇ ದೇಶದ ಅಭಿವೃದ್ಧಿಯ ಅಡಿಪಾಯ. ಯುವಶಕ್ತಿಯೇ ದೇಶದ ನಿಜವಾದ ಸಂಪತ್ತು. ಆದರೆ ಇಂದು ಮಾದಕ ವ್ಯಸನ, ಮದ್ಯಪಾನ, ತಂಬಾಕು ಹಾಗೂ ಇತರ ಅಮಲು ಪದಾರ್ಥಗಳ ಬಳಕೆ ಯುವಜನರಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


ಮದ್ಯ, ಗಾಂಜಾ, ಅಫೀಮು, ಹೆರಾಯಿನ್, ಕೊಕೇನ್, ತಂಬಾಕು, ಸಿಗರೇಟ್, ಗುಟ್ಕಾ ಹಾಗೂ ಇತರ ಮಾದಕ ವಸ್ತುಗಳನ್ನು ನಿರಂತರವಾಗಿ ಬಳಸುವ ಅಭ್ಯಾಸವೇ ನಶೆ. ಈ ವ್ಯಸನಕ್ಕೆ ಒಮ್ಮೆ ಒಳಗಾದರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರ.


ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆ, ಕುಟುಂಬದ ನೆಮ್ಮದಿ, ಶಿಕ್ಷಣ ಹಾಗೂ ಉದ್ಯೋಗದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ನಶೆಯ ಪ್ರಭಾವದಿಂದ ದೈಹಿಕ ಆರೋಗ್ಯ ಹದಗೆಡುತ್ತದೆ, ಓದು ಮತ್ತು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಯುವಕರ ಜೀವನವೇ ನಾಶವಾಗುತ್ತದೆ. ಇದರಿಂದ ಯುವಕರು ಸಮಾಜದಲ್ಲಿ ಸದೃಢವಾಗಿ ಬದುಕಲು ಕಷ್ಟವಾಗುತ್ತದೆ.


ಆದ್ದರಿಂದ ಯುವಕರು ವ್ಯಸನದಿಂದ ದೂರವಿದ್ದು ಕ್ರೀಡೆ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು, ಸಮಾಜ ಸೇವೆ ಹಾಗೂ ಕೌಶಲ್ಯಾಭಿವೃದ್ಧಿಯಂತಹ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.


ಯುವಕರು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸದಂತೆ ತಾವೂ ದೂರವಿದ್ದು, ತಮ್ಮ ಸ್ನೇಹಿತರನ್ನೂ ವ್ಯಸನದಿಂದ ದೂರವಿರಲು ಪ್ರೇರೇಪಿಸಬೇಕು. ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಯುವಕ-ಯುವತಿಯೂ ವಹಿಸಿಕೊಳ್ಳಬೇಕು.


ಪೋಷಕರು, ಶಿಕ್ಷಕರು, ವೈದ್ಯರು, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ವ್ಯಸನವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಆಗ ಮಾತ್ರ ಯುವ ನಶಾ ಮುಕ್ತ ಭಾರತ ನಿರ್ಮಾಣವಾಗಲು ಸಾಧ್ಯ.


ಯುವ ನಶಾ ಮುಕ್ತ ಭಾರತ ಅಭಿಯಾನವು ಪ್ರತಿಯೊಬ್ಬ ಯುವಕ-ಯುವತಿಯ ಭವಿಷ್ಯವನ್ನು ಸುರಕ್ಷಿತಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ವ್ಯಸನದಿಂದ ದೂರವಿರುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಅದು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ.


ಇಂದಿನ ಯುವಪೀಳಿಗೆ ಸಂಪೂರ್ಣವಾಗಿ ನಶೆಯಿಂದ ದೂರವಿದ್ದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡರೆ, ಆರೋಗ್ಯವಂತ, ಶಕ್ತಿಶಾಲಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣವಾಗಲು ಸಾಧ್ಯ. ಇಂದಿನ ಪೀಳಿಗೆಯವರು ತುಂಬಾ ಪ್ರಬುದ್ಧತೆಯನ್ನು ಹೊಂದಿದ್ದು, ಯುವ ನಶಾ ಮುಕ್ತ ಭಾರತ ನಿರ್ಮಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.


ಆರೋಗ್ಯವಂತ ಯುವಕರು, ಸದೃಢ ಸಮಾಜ ಮತ್ತು ವಿಕಸಿತ ಭಾರತ ನಿರ್ಮಾಣವೇ ಈ ಅಭಿಯಾನದ ಪ್ರಮುಖ ಗುರಿಯಾಗಿದೆ.


ನಶೆಯಿಂದ ದೂರವಿರಿ, ಜೀವನವನ್ನು ಪ್ರೀತಿಸಿ. ವ್ಯಸನಮುಕ್ತ ಯುವಕರೇ ವಿಕಸಿತ ಭಾರತದ ಶಕ್ತಿ.



- ಶಿವಾನಿ ಕೊಡಂಗಾಯಿ

ದ್ವಿತೀಯ ಬಿಎ ಪತ್ರೀಕೋಧ್ಯಮ ವಿಭಾಗ

ವಿವೇಕಾನಂದ ಕಾಲೇಜು ಪುತ್ತೂರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top