ನಗರದ ಶರಣಬಸವೇಶ್ವರ ಸಂಸ್ಥಾನದ ಆಶ್ರಯದಲ್ಲಿ, ಕಲಬುರಗಿ ಜಿಲ್ಲಾ ಹೋಟೆಲ್, ವಸತಿ ಹಾಗೂ ಬೇಕರಿ ಮಾಲೀಕರ ಸಂಘ ಮತ್ತು ದಕ್ಷಿಣ ಕನ್ನಡ ಸಂಘದ ಜಂಟಿ ಆಶ್ರಯದಲ್ಲಿ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ "ಕಾಂತಾರ ಮಣಿ" ಯಕ್ಷಗಾನ ಪ್ರದರ್ಶನವನ್ನು ಮಂಗಳವಾರ ರಾತ್ರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿ ಭಾಗದಲ್ಲಿ ಉದ್ಭವಿಸಿದ ಈ ಯಕ್ಷಗಾನ ಕಲೆಯು ತನ್ನ ಅನನ್ಯ ವೈಶಿಷ್ಟ್ಯ ಮತ್ತು ರಂಗಪ್ರಸಂಗಗಳ ಮೂಲಕ ಇಡೀ ಜಗತ್ತಿನಾದ್ಯಂತ ಅಪಾರ ಪ್ರಸಿದ್ಧಿ ಪಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಕಲ್ಯಾಣ ಕರ್ನಾಟಕದ ಶರಣರ ಪುಣ್ಯಭೂಮಿಯಲ್ಲಿ ಇಂತಹ ಅದ್ಭುತ ಕಲಾ ಪ್ರಕಾರವನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಈ ಪಾರಂಪರಿಕ ಕಲೆಯನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಪ್ರಸಂಗಕರ್ತ ಹಾಗೂ ಸಂಘಟಕರಿಗೆ ಗೌರವ:
ಇದೇ ಸಂದರ್ಭದಲ್ಲಿ "ಕಾಂತಾರ ಮಣಿ" ಪ್ರಸಂಗದ ಕರ್ತೃ ಹಾಗೂ ಭಾಗವತರಾದ ನಡೂರು ಸದಾಶಿವ ಅಮೀನ್ ಮಂದಾರ್ತಿ ಅವರನ್ನು ಸಂಸ್ಥಾನದ ವತಿಯಿಂದ ಬಸವರಾಜ ದೇಶಮುಖ್ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಜೊತೆಗೆ ಕಾರ್ಯಕ್ರಮದ ಯಶಸ್ವಿ ವ್ಯವಸ್ಥೆಗೊಳಿಸಿದ ಕಲಬುರಗಿ ಜಿಲ್ಲಾ ಹೋಟೆಲ್, ವಸತಿ ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಹಾಗೂ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಉದ್ಘಾಟನಾ ಸಮಾರಂಭದ ನಂತರ ಮಂದಾರ್ತಿ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ "ಕಾಂತಾರ ಮಣಿ" ಎಂಬ ಐತಿಹಾಸಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಶ್ರಾವಣ ಮಾಸದ ಈ ಪವಿತ್ರ ದಿನಗಳಲ್ಲಿ ನೆರೆದಿದ್ದ ಅಸಂಖ್ಯ ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಪ್ರದರ್ಶನವನ್ನು ವೀಕ್ಷಿಸಿ ಅತಿಯಾಗಿ ಮೆಚ್ಚಿಕೊಂಡರು.
ಸಮಾರಂಭದಲ್ಲಿ ಪ್ರಮುಖರಾದ ಸುರೇಶ ನಂದಗಾವ್, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್, ವಿದ್ಯಾಧರ ಭಟ್, ಜೀವನ್ ಕುಮಾರ್ ಜತ್ತನ್, ಸುರೇಶ ಬಡಿಗೇರ್, ಡಾ. ಆನಂದ ಸಿದ್ಧಾಮಣಿ, ಮಾಲಾ ಕಣ್ಣಿ, ಸತ್ಯನಾಥ ಶೆಟ್ಟಿ, ಪ್ರಶಾಂತ ಶೆಟ್ಟಿ, ಅಮಿತ್ ಶೆಟ್ಟಿ, ಸಿದ್ದರಾಮ ತಳವಾರ ಹಾಗೂ ಸಂತೋಷ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

