ಮಾಹೆಯಲ್ಲಿ ವಿಶ್ವಪ್ರವಾಸೋದ್ಯಮ ದಿನ: ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಆದ್ಯತೆ

Shreya Hegde
0



ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ವತಿಯಿಂದ 2026ರ ವಿಶ್ವ ಪ್ರವಾಸೋದ್ಯಮ ದಿನವನ್ನು ಕರ್ನಾಟಕದ ಮಣಿಪಾಲದಲ್ಲಿ ಇಂದು ಆಚರಿಸಲಾಯಿತು. ಮಾಹೆಯಲ್ಲಿ ಅಧ್ಯಯನ ಮಾಡುತ್ತಿರುವ ವಿವಿಧ ದೇಶಗಳ ವಿದ್ಯಾರ್ಥಿಗಳು ಸೇರಿ ಭವಿಷ್ಯದ ಪ್ರವಾಸೋದ್ಯಮವನ್ನು ವಿಭಿನ್ನವಾಗಿ ರೂಪಿಸುವ ಕುರಿತು ಸಂವಾದದಲ್ಲಿ ಭಾಗವಹಿಸಿದರು. 


‘ಗಣಕ ತಂತ್ರ ವಿಜ್ಞಾನದ ವಿಷಯ [ಡಿಜಿಟರ್ ಅಜೆಂಡ] ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಪ್ರವಾಸೋದ್ಯಮದ ಮರುರೂಪಣೆ" ಎಂಬ ವಿಷಯವನ್ನು ಆಧರಿಸಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಪ್ರಾದೇಶಿಕ ಹಿನ್ನೆಲೆಯ ಜನರೊಂದಿಗೆ ಪರಸ್ಪರ ಸಂಪರ್ಕವನ್ನು ಮೂಡಿಸುವಲ್ಲಿ ಡಿಜಿಟಲ್ ತಂತ್ರಜ್ಞಾನ  ಮತ್ತು ಕೃತಕ ಬುದ್ಧಿಮತ್ತೆ (ಎಐ) ವಹಿಸುತ್ತಿರುವ ಪಾತ್ರದ ಕುರಿತು ಈ ಕಾರ್ಯಕ್ರಮದಲ್ಲಿ  ವಿಸ್ತೃತವಾಗಿ ಚರ್ಚಿಸಲಾಯಿತು.


ಮಾಹೆಯ ಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಸಭೆಯನ್ನುದ್ದೇಶಿಸಿ ಮಾತನಾಡುತ್ತ, ‘ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಸಾಂಸ್ಕೃತಿಕ ಮಹತ್ತ್ವದ ಅಂಶಗಳಿಗೆ ಒತ್ತು ನೀಡುವಂತೆ ನವ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ವೇಗವಾಗಿ ಪರಿವರ್ತನೆಗೊಳ್ಳುತ್ತಿರುವ ಪ್ರವಾಸೋದ್ಯಮದ ವಲಯದಲ್ಲಿ ಶೈಕ್ಷಣಿಕ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯ ಹೆಚ್ಚುತ್ತಿದೆ. ಶಿಕ್ಷಣ ಮತ್ತು ಸಂಸ್ಕೃತಿಗಳು ಜೊತೆ ಸೇರಿ ಗಡಿಯಾಚೆಗೆ ಸಂಬಂಧಗಳನ್ನು ವೃದ್ದಿಸುವಲ್ಲಿ ನೆರವಾಗುತ್ತವೆ. ಮಾಹೆಯ ವಿದ್ಯಾರ್ಥಿ ಸಮುದಾಯದಲ್ಲಿ ವಿವಿಧ ಪ್ರದೇಶಗಳ, ಹಲವು ದೇಶಗಳ ವಿದ್ಯಾರ್ಥಿಗಳು ಇದ್ದಾರೆ. ಮಾಹೆ, ಅಂತರ್ಸಾಂಸ್ಕೃತಿಕ ವಿನಿಮಯವನ್ನು ವೃದ್ಧಿಸಲು ಆದ್ಯತೆ ನೀಡುತ್ತದೆ. ಆಮೂಲಕ ಜಾಗತಿಕ ಸಂಬಂಧಗಳನ್ನು ವೃದ್ಧಿಸುವ ಆಶಯವನ್ನು ಹೊಂದಿದೆ’ ಎಂದರು.


ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಕರಣ (ಇಂಟರ್ನ್ಯಾಶನಲೈಸೇಶನ್) ಗೆ ಸಂಬಂಧಿಸಿದ ಅಂತರ್ಜಾಲ ಅವಕಾಶ (ಪೋರ್ಟಲ್) ವನ್ನು ಅನಾವರಣಗೊಳಿಸಲಾಯಿತು. ಶೈಕ್ಷಣಿಕ ಪ್ರವಾಸೋದ್ಯಮದ ಕುರಿತು ಸುಲಭವಾಗಿ ತಿಳಿಯಲು ಮತ್ತು ಅನುಭವವನ್ನು ಹಂಚಿಕೊಳ್ಳಲು ಇದು ವೇದಿಕೆ ಒದಗಿಸುತ್ತದೆ. ಇದೇ ಸಂದರ್ಭದಲ್ಲಿ ಮಾಹೆಯ ಅಂತಾರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ನಾಂದಿ ಹಾಡಲಾಗಿದ್ದು, ಕ್ರೀಡೆಯ ಮೂಲಕ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯದ ಸ್ನೇಹಸಂಬಂಧವನ್ನು ವೃದ್ಧಿಸುವುದು ಇದರ ಉದ್ದೇಶವಾಗಿದೆ.


ಮಾಹೆಯಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಸಾಂಸ್ಕೃತಿಕ ವಿನಿಮಯವನ್ನು ಹೆಚ್ಚಿಸುವಲ್ಲಿ ಮತ್ತು ವಿಶ್ವದ ಕುರಿತ ಅರಿವನ್ನು ವಿಸ್ತರಿಸುವಲ್ಲಿ ಪ್ರವಾಸೋದ್ಯಮದ ಪಾತ್ರದ ಕುರಿತ ಮಾಹೆಯ ನಿಲುವನ್ನು ಇದು ಪ್ರತಿಫಲಿಸುತ್ತದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top