ಪುತ್ತೂರು: ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರುಇಲ್ಲಿನ ವಿದ್ಯಾರ್ಥಿ ಸಂಘ, ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನಕೇಂದ್ರ, ಲಲಿತ ಕಲಾ ಸಂಘ ಮತ್ತು ಐಕ್ಯೂಎಸಿಯ ಜಂಟಿ ಆಶ್ರಯದಲ್ಲಿ‘‘Onanilavu 26’’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಓಣಂ ಹಬ್ಬವನ್ನು ಕೇರಳದ ಎಲ್ಲೆಡೆ ಆಚರಿಸುವ ಸಂಭ್ರಮದ ಹಬ್ಬವಾಗಿದೆ. ಈ ಹಬ್ಬವು ತನ್ನದೆಯಾದ ಹಿನ್ನಲೆಯನ್ನು ಹೊಂದಿದ್ದು ಈ ದಿನ ಹಲವು ರೀತಿಯ ಹೂವಿನ ಅಲಂಕಾರವನ್ನು ಮಾಡಿ ಹಬ್ಬ ಆಚರಿಸಲಾಗಿತ್ತದೆ ಎಂದು ಶುಭಹಾರೈಸಿ ಕಾಲೇಜಿನ ಓಣಂ ಆಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪೂಕಲಂ ಸ್ಪರ್ಧೆ ಆಯೋಜಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಚೆಂಡೆ ವಾದನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶುಭ ಶ್ರೀಯವರಿಂದ ‘ವಯಲಿನ್’ ವಾದನ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ತೃತೀಯ ಬಿ.ಎ.ಸ್ಸಿ ವಿದ್ಯಾರ್ಥಿನಿ ಅವನಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


