ವಿವೇಕಾನಂದ ಕಾಲೇಜಿನಲ್ಲಿ ಎಂಬಿಎ ಪ್ರವೇಶ ಪರೀಕ್ಷೆಗಳ ಕುರಿತು ದೃಷ್ಟಿಕೋನ ಕಾರ್ಯಕ್ರಮ

Upayuktha
0

 


ಪುತ್ತೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಶಿಕ್ಷಣದೊಂದಿಗೆ ನಿರ್ವಹಣಾ ಕೌಶಲ್ಯಗಳು ಬಹಳ ಅಗತ್ಯ. ಎಂಬಿಎ ಪದವಿಯು ವೃತ್ತಿಪರ ಅರ್ಹತೆಯಾಗಿದೆ.  ಅಲ್ಲಿ ಬೋಧಿಸುವ ಅಧ್ಯಾಪಕರ ವಿಷಯ ಜ್ಞಾನ, ಅನುಭವ, ಹಾಗೂ ಪ್ರಾಯೋಗಿಕ ಪರಿಣತಿಯು ಶಿಕ್ಷಣದ ಗುಣಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಂಬಿಎ ಪೂರ್ಣಗೊಳಿಸಲು ಹಲವು ದಾರಿಗಳಿದ್ದು, ಕರ್ನಾಟಕದ ವಿದ್ಯಾರ್ಥಿಗಳಿಗೆ ಇರುವ ಅತ್ಯುತ್ತಮ ಹಾದಿ ಎಂದರೆ ಕರ್ನಾಟಕ ಪಿಜಿಸಿಇಟಿ. ಇದು ನಿರ್ವಹಣಾ ಸಾಮರ್ಥ್ಯ ಪರೀಕ್ಷೆಯಾಗಿದೆ. ಈ ಮೂಲಕ ಸರ್ಕಾರಿ ಕೋಟಾದಲ್ಲಿ ಕಡಿಮೆ ಶುಲ್ಕದಲ್ಲಿ ಎಂಬಿಎ ಪದವಿಯನ್ನು ವಿದ್ಯಾರ್ಥಿಗಳು ಪೂರ್ಣಗೊಳಿಸಬಹುದು ಎಂದು ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗ, ವ್ಯವಹಾರ ಆಡಳಿತ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದೊಂದಿಗೆ ಆಯೋಜಿಸಿದ ‘ಎಂಬಿಎ ಪ್ರವೇಶ ಪರೀಕ್ಷೆಗಳ ಕುರಿತು ದೃಷ್ಟಿಕೋನ’ ಎಂಬ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳ ಆಯ್ಕೆ ಕೇವಲ ಪರೀಕ್ಷೆ ಬರೆಯಲು ಸೀಮಿತವಾಗಿಲ್ಲ, ಅದು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಹಾಯಕವಾಗುವ ಪ್ರಮುಖ ನಿರ್ಧಾರವಾಗಿದೆ. ನಾವು ಆದರ್ಶ ವ್ಯಕ್ತಿಗಳನ್ನು ಸ್ಫೂರ್ತಿಯಾಗಿರಿಸಿಕೊಳ್ಳಬೇಕು. ಪ್ರತಿಯೊಬ್ಬ ಸಾಧಕ ವ್ಯಕ್ತಿಯ ಸಾಧನೆಯ ಹಿಂದೆ ಕಠಿಣ ಪರಿಶ್ರಮವಿದೆ.  ಗುಣಮಟ್ಟದ ತಯಾರಿ, ಗುರಿಯ ಮೇಲಿನ ಗಮನ ಮತ್ತು ನಿರಂತರ ಅಧ್ಯಯನ ಅವರನ್ನು ಯಶಸ್ವಿಯಾಗಿಸಿದೆ. ವಿದ್ಯಾರ್ಥಿಗಳು ಸ್ಪರ್ಧೆಗೆ ಹಿಂಜರಿಯದೆ ಸಣ್ಣ ಹೆಜ್ಜೆಯಿಂದ ಪ್ರಾರಂಭಿಸಿ, ದೊಡ್ಡ ಗುರಿಯನ್ನು ಸಾಧಿಸುವತ್ತ ನಿರಂತರವಾಗಿ ಶ್ರಮಿಸಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಪಿ ಹಾಗೂ ಐಕ್ಯೂಎಸಿ ಘಟಕದ ಸಂಯೋಜಕಿ ಹಾಗೂ ಕಾಮರ್ಸ್ ವಿಭಾಗದ ಡೀನ್ ಡಾ. ರವಿಕಲಾ  ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ತೃತೀಯ ಬಿ.ಕಾಂ ವಿದ್ಯಾರ್ಥಿನಿ ದೀಪ್ತಿ ಸ್ವಾಗತಿಸಿ, ತೃತೀಯ ಬಿಬಿಎ ವಿದ್ಯಾರ್ಥಿನಿ ಧನಲಕ್ಷ್ಮೀ ವಂದಿಸಿ, ತೃತೀಯ ಬಿ. ಕಾಂ ವಿದ್ಯಾರ್ಥಿನಿ ಚೈತ್ರಾ ನಿರೂಪಿಸಿದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top