ವಿಟ್ಲದಲ್ಲಿ 'ಸ್ವರ ಸಿಂಚನ ಸಂಗೀತೋತ್ಸವ- 2026' ಸಂಭ್ರಮ

Upayuktha
0

ಡಾ. ಈಶ್ವರ ಭಟ್ ದಂಪತಿಗೆ 'ಸ್ವರ ಸಿಂಚನ ಪುರಸ್ಕಾರ' ಪ್ರದಾನ



ವಿಟ್ಲ (ಪೆರ್ನಾಜೆ): ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆಯ ವಿಟ್ಲ ಮತ್ತು ಪಡಿಬಾಗಿಲು ಶಾಖೆಯ ವಿದ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ 'ಸಂಗೀತೋತ್ಸವ 2026' ಕಾರ್ಯಕ್ರಮವು ಸೆಪ್ಟೆಂಬರ್ 6ರಂದು ಇಲ್ಲಿನ ಶ್ರೀ ಭಗವತಿ ದೇವಸ್ಥಾನದ ಸಿಂಹಾಸನದ ವಿಶೇಷ ಪೂಜಾ ಮಂಟಪದಲ್ಲಿ ವಿಜೃಂಭಣೆಯಿಂದ ಜರುಗಿತು.


ಕಾರ್ಯಕ್ರಮಕ್ಕೆ ಪಶುವೈದ್ಯರಾದ ಈಶ್ವರ ಭಟ್ ಕಾಶಿಮಠ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜ ಮತ್ತು ಸಂಗೀತ ಕ್ಷೇತ್ರದ ಮೇಲಿನ ಗೌರವಾರ್ಥವಾಗಿ ಡಾ. ಈಶ್ವರ ಭಟ್ ದಂಪತಿಗಳಿಗೆ ಪ್ರತಿಷ್ಠಿತ 'ಸ್ವರ ಸಿಂಚನ ಪುರಸ್ಕಾರ 2026' ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಈಶ್ವರ ಭಟ್ ಅವರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್. ವಿ., ಪ್ರಸಿದ್ಧ ವಯಲಿನ್ ವಾದಕರಾದ ಪ್ರಭಾಕರ ಕುಂಜಾರು, ಮೃದಂಗ ವಾದಕರಾದ ಡಾ. ಬಿ. ಆರ್. ನಾರಾಯಣ ಪ್ರಕಾಶ್, ರವಿಶಂಕರ್ ಸಿ. ಮೂಡಂಬೈಲು, ಗೋಪಾಲಕೃಷ್ಣ ನಾಯಕ್ (ಪಡಿಬಾಗಿಲು) ಹಾಗೂ ಸಂಗೀತ ಶಿಕ್ಷಕಿ ಶ್ರೀಮತಿ ಸವಿತಾ ಕೋಡಂದೂರು ಉಪಸ್ಥಿತರಿದ್ದರು. ಕೇಶವ ಆರ್.ವಿ. ಅವರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.


ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಕೋಡಂದೂರು ಪ್ರಾರ್ಥಿಸಿದರು. ಅಮೂಲ್ಯ ಅರವಿಂದ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ಸ್ವರ ಸಿಂಚನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯಿತು. ವಯಲಿನ್‌ನಲ್ಲಿ ಪ್ರಭಾಕರ ಕುಂಜಾರು ಮತ್ತು ಶ್ರೀಪ್ರಿಯಾ ಕೆ. ಪರಕ್ಕಜೆ ಹಾಗೂ ಮೃದಂಗದಲ್ಲಿ ಡಾ. ಬಿ.ಆರ್. ನಾರಾಯಣ ಪ್ರಕಾಶ್ ಸಾಥ್ ನೀಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top