ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಇಂದು 'ವೈಷ್ಣವೀ ರಜತ ನೃತ್ಯಾಂತರ್ಯಾನ', ಸಾಂಸ್ಕೃತಿಕ ಕಾರ್ಯಕ್ರಮ

Shreya Hegde
0


ವಿಟ್ಲ : ಇಲ್ಲಿನ ಶ್ರೀ ಭಗವತಿ ದೇವಸ್ಥಾನದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಪ್ರಯುಕ್ತ 'ವೈಷ್ಣವೀ ರಜತ ನೃತ್ಯಾಂತರ್ಯಾನ'ದ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನೃತ್ಯೋತ್ಸವವನ್ನು ಸೆಪ್ಟೆಂಬರ್ 17ರಂದು ಸಂಜೆ 4.45ಕ್ಕೆ ಆಯೋಜಿಸಲಾಗಿದೆ.


ದೀಪ ಪ್ರಜ್ವಲನೆ ಹಾಗೂ ಅಧ್ಯಕ್ಷತೆ :

ಕಾರ್ಯಕ್ರಮದ ಉದ್ಘಾಟನೆ ಮತ್ತು ದೀಪ ಪ್ರಜ್ವಲನೆಯನ್ನು ಮುಳಿಯ ಸಮೂಹ ಸಂಸ್ಥೆಗಳ ಚೇರ್ಮನ್ ಹಾಗೂ ಗೌರವಾಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ನೆರವೇರಿಸಲಿದ್ದಾರೆ. ದೇವಸ್ಥಾನದ ವ್ಯವಸ್ಥಾಪಕರಾದ ಕೇಶವ ಆರ್.ವಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ವಿಟ್ಲದ ಉದ್ಯಮಿ ಸುಭಾಷ್ ಚಂದ್ರ ನಾಯಕ್ ಹಾಗೂ ಗಾನಗಂಧರ್ವ ಸಂಗೀತ ಶಾಲೆಯ ವಿದುಷಿ ಶ್ರೀಮತಿ ಪಾರ್ವತಿ ಗಣೇಶ ಭಟ್ ಹೊಸಮೂಲೆ ಸೇರಿದಂತೆ ಹಲವು ರಂಗದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಾಂಸ್ಕೃತಿಕ ವೈಭವ:

ಸಂಜೆ 6 ಗಂಟೆಯಿಂದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ನಟುವಾಂಗ, ಗಾಯನ, ಮೃದಂಗ ಹಾಗೂ ಕೊಳಲು ವಾದನನ್ನೊಳಗೊಂಡ ವಿವಿಧ ಕಲಾ ಪ್ರಕಾರಗಳ ಸಂಗೀತ-ನೃತ್ಯ ಸಂಗಮ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.


ಈ ಅಪರೂಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಕಲಾವಿದರು ಹಾಗೂ ಸಾರ್ವಜನಿಕ ನೃತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top